ಭವಿಷ್ಯ

19 ನವೆಂಬರ್ : ನಾಳೆಯ ಭವಿಷ್ಯ ಮತ್ತೆ ಪಂಚಾಂಗ

ಸೋಮವಾರ, ೧೯ ನವೆಂಬರ್ ೨೦೧೮
ಸೂರ್ಯೋದಯ : ೦೬:೫೪
ಸೂರ್ಯಾಸ್ತ : ೧೭:೫೨
ಅಮಂತ ತಿಂಗಳು : ಕಾರ್ತಿಕ

ಪಕ್ಷ : ಶುಕ್ಲ ಪಕ್ಷ
ತಿಥಿ : ಏಕಾದಶೀ – ೧೪:೨೯ ವರೆಗೆ
ನಕ್ಷತ್ರ : ಉತ್ತರಾ ಭಾದ್ರ – ೧೭:೫೫ ವರೆಗೆ
ಯೋಗ : ವಜ್ರ – ೧೮:೩೧ ವರೆಗೆ
ಸೂರ್ಯ ರಾಶಿ -ವೃಶ್ಚಿಕ

ಅಭಿಜಿತ್ ಮುಹುರ್ತ : ೧೨:೦೧ – ೧೨:೪೫
ಅಮೃತಕಾಲ :೧೨:೫೦ – ೧೪:೩೨
ರಾಹು ಕಾಲ: ೦೮:೧೬ – ೦೯:೩೯
ಗುಳಿಕ ಕಾಲ: ೧೩:೪೫ – ೧೫:೦೮
ಯಮಗಂಡ:೧೧:೦೧ – ೧೨:೨೩

 

ಸ್ವಾಭಿಮಾನದಿಂದ ಬದುಕಬೇಕೆನ್ನುವ ನೀವು ಇನ್ನೊಬ್ಬರ ಹಂಗಿನಲ್ಲಿ ಬದುಕಲು ಇಷ್ಟಪಡುವುದಿಲ್ಲ. ಇದನ್ನೇ ಇತರರು ಅಹಂಕಾರ ಎಂದು ಭಾವಿಸುವರು. ಬೇರೆಯವರು ಏನಾದರೂ ಅಂದುಕೊಳ್ಳಲಿ. ಮುಂದೆ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿ. ಸಹನೆಯನ್ನು ರೂಢಿಸಿಕೊಳ್ಳಿರಿ.

 

ನಂಬಿದವರೇ ಇಂದು ಕೈ ಕೊಡುವ ಸಾಧ್ಯತೆ. ಬಂಧುಮಿತ್ರರೊಡನೆ ವಿರೋಧದಿಂದಾಗಿ ಜೀವನ ಮತ್ತು ವೃತ್ತಿಯ ಬಗ್ಗೆ ಹೆಚ್ಚು ಆಸಕ್ತಿ ತೋರುವುದು. ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ಕುಟುಂಬದವರ ನೈತಿಕ ಬೆಂಬಲ ನಿಮಗೆ ಸ್ಫೂರ್ತಿದಾಯಕವಾಗಲಿದೆ

 

ಈ ದಿನ ನಿಮ್ಮ ಮಾತಿಗೆ ಬೆಲೆ ಬರುವುದು. ನಿಮ್ಮ ಹಿತಚಿಂತಕರನ್ನು ಅಥವಾ ಬೆಂಬಲಿಸುವ ಸ್ನೇಹಿತರನ್ನು ಸಂಪರ್ಕಿಸುವುದು ನಿಮಗೆ ಲಾಭವನ್ನುಂಟು ಮಾಡುವುದು. ದೂರದ ಪ್ರಯಾಣವನ್ನು ಹಮ್ಮಿಕೊಳ್ಳುವ ಸಾಧ್ಯತೆ ಇದೆ. ಹಣಕಾಸಿನ ವಿಷಯದಲ್ಲಿ ಅಲ್ಪ ಹಿನ್ನಡೆ.

 

ನೂತನ ಪರಿಸರದಲ್ಲಿ ಕೆಲಸ ಮಾಡುವ ಸಾಧ್ಯತೆ ಇದ್ದು ಇದು ನಿಮ್ಮ ವೃತ್ತಿಗೆ ಪೂರಕವಾಗಿದೆ. ನಿಮ್ಮ ಬುದ್ಧಿಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಲಿದೆ. ಮನೆಯ ಹಿರಿಯರ ಆರೋಗ್ಯದ ಕಡೆ ಗಮನ ಕೊಡಿರಿ.

 

 

ಸಂಪಾದನೆಗಿಂತ ಖರ್ಚು ಹೆಚ್ಚು ಎಂದು ರೋಸಿ ಹೋಗಿದ್ದೀರಿ. ಆದರೆ ಇದಕ್ಕೆ ನಿಮ್ಮ ಸ್ವಯಂಕೃತ ಅಪರಾಧವೇ ಕಾರಣವೆಂದು ಹೇಳಬೇಕಾಗಿಲ್ಲ. ಹೆಚ್ಚು ಹಣ ಬಂದಾಗ ಅದರಲ್ಲಿ ಸ್ವಲ್ಪ ಭಾಗವಾದರೂ ಉಳಿತಾಯ ಮಾಡಿರಿ.

 

 

ಯಾವುದೇ ರೀತಿಯ ಹೊಸ ಯೋಜನೆಗಳ ಬಗ್ಗೆ ದಿಢೀರನೆ ಸ್ಪಂದಿಸದಿರಿ ಮತ್ತು ಈ ಬಗ್ಗೆ ಸಲಹೆ ಸೂಚನೆಗಳನ್ನು ನೀಡದಿರಿ. ನಿಮ್ಮ ಒಳ್ಳೆಯತನದ ದುರುಪಯೋಗಪಡಿಸಿಕೊಳ್ಳಲು ಇತರರು ಕಾದಿರುತ್ತಾರೆ. ಇದಕ್ಕೆ ಆಸ್ಪದ ನೀಡದಿರಿ.

 

 

ಎಲ್ಲರನ್ನು ತೂಗಿಸಿಕೊಂಡು ಹೋಗುವಂತಹ ನಿಮ್ಮ ಜಾಣ್ಮೆಯು ವಿಶೇಷವಾಗಿ ಎಲ್ಲರಿಂದ ಪ್ರಶಂಸೆಗೆ ಒಳಗಾಗುವುದು. ಭಗವಂತನು ಕೊಟ್ಟಿರುವ ಈ ಜಾಣ್ಮೆಯನ್ನು ಶುಭ ಕಾರ್ಯಗಳಿಗೆ ಉಪಯೋಗಿಸಿಕೊಂಡಲ್ಲಿ ಹೆಚ್ಚು ಅನುಕೂಲವಾಗುವುದು.

 

 

ನಿಮ್ಮ ಇಡೀ ಕುಟುಂಬವೇ ಸಂತಸ ಪಡುವಂತಹ ಬೆಳವಣಿಗೆಯೊಂದನ್ನು ಇಂದಿನ ದಿನ ನೀವು ಕಾಣುವಿರಿ. ಮನೆಯಲ್ಲಿ ಹರ್ಷದ ವಾತಾವರಣ. ಮನೆಗೆ ನೂತನ ಸದಸ್ಯೆನ ಆಗಮನವಾಗುವುದು.

 

ವೃಥಾ ಅಪವಾದದಲ್ಲಿ ಕಳೆಯುವಂತಹ ಸೋಮಾರಿಯಾದ ಗೆಳೆಯರನ್ನು ದೂರವಿಡಿ. ಒಳ್ಳೆಯ ದಿನಗಳು ನಿಮಗೆ ಕಾದಿವೆ. ನಿಮ್ಮ ಕುಲದೇವರನ್ನು ಪ್ರಾರ್ಥಿಸಿರಿ. ನಿಮ್ಮ ಕಾರ್ಯ ಸಾಧನೆಯಲ್ಲಿ ಗೆಲುವು ಸಿಗಲು ಸಾಧ್ಯವಿದೆ.

 

 

ಅನೇಕ ರೀತಿಯ ಅಡೆತಡೆಗಳನ್ನು ದಾಟಿಕೊಂಡು ಬಂದಿದ್ದೀರಿ. ಸಂಕಲ್ಪಶಕ್ತಿಯಿಂದ ದೊಡ್ಡದೊಂದು ಕಾರ್ಯವನ್ನು ಮಾಡಿ ಈದಿನ ಗೆಲುವು ಸಾಧಿಸುವಿರಿ. ಗ್ರಹಗಳು ಇದಕ್ಕೆ ಪೂರಕವಾಗಿ ನಿಮಗೆ ಸಹಾಯ ನೀಡುವುದು

 

ಯಾರದೋ ಸಹಾಯ ಬರಬಹುದು ಎಂಬ ಅತಿಯಾದ ನಿರೀಕ್ಷೆ ಬೇಡ. ಮುನ್ನುಗ್ಗಿ ನೀವು ಅಂದುಕೊಂಡ ಕಾರ್ಯವನ್ನು ಆರಂಭಿಸಿರಿ. ಕೆಲಸ ಸಿದ್ಧಿಸುವುದು ಮತ್ತು ಆ ಕೆಲಸದಲ್ಲಿ ಜಯವೂ ಲಭಿಸುವುದು.

 

ದಾಯಾದಿಗಳು ವಿಶ್ವಾಸದ ದುರುಪಯೋಗ ಮಾಡಿಯಾರು. ಕಾರ್ಯಧಿರಂಗದಲ್ಲಿ ಉತ್ತಮ ಅಭಿವೃದ್ಧಿಯು ಗೋಚರಕ್ಕೆ ಬರುವುದು. ದಾಂಪತ್ಯದಲ್ಲಿ ಹೊಂದಾಣಿಕೆ ಇರಲಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top