ಹೆಚ್ಚಿನ

ಈ ದೇವಸ್ಥಾನಕ್ಕೆ ಸಂತಾನ ಭಾಗ್ಯ ಇಲ್ಲದೆ ಇರುವ ಮಹಿಳೆಯರು ಬಂದರೆ ಸಂತಾನ ಭಾಗ್ಯ ಲಭಿಸುವುದು ಗ್ಯಾರಂಟಿ 

ಮಕ್ಕಳು ಹುಟ್ಟುವ ಪೂಜೆ ಮಾಡುತ್ತೇವೆಂದು ನಿಮಗೆ ಅನೇಕ ಮೋಸ ಮಾಡುವ ಸ್ವಾಮೀಜಿಗಳು ಕಾಣಸಿಗುತ್ತಾರೆ.ಆದರೆ ಅಂತಹ ಸ್ವಾಮೀಜಿಗಳನ್ನು ನಂಬುವುದಕ್ಕಿಂತ ದೇವರನ್ನು ನಂಬುವುದು ಎಷ್ಟೋ ವಾಸಿ. ಈ ದೇವಾಲಯದಲ್ಲಿ ಒಂದು ರಾತ್ರಿ ನಿದ್ರೆ ಮಾಡಿ, ಶ್ರದ್ಧೆ ,ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಖಂಡಿತವಾಗಿಯೂ ಸಂತಾನ ಭಾಗ್ಯ ಲಭಿಸುತ್ತದೆಯಂತೆ.

 

 

 

ಈ ದೇವಾಲಯದ ಹೆಸರು ಸಿಂಸಾ ಮಾತಾ ಮಂದಿರ . ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿ ಈ ದೇವಸ್ಥಾನ ಸ್ಥಾಪಿತವಾಗಿದೆ. ದಸರಾ ಮತ್ತು ನವರಾತ್ರಿಯ ಸಂದರ್ಭಗಳಲ್ಲಿ ಇಲ್ಲಿಗೆ ನೂರಾರು ಮಹಿಳೆಯರು ಬಂದು ದೇವಿಯ ದರ್ಶನ ಭಾಗ್ಯ ಪಡೆದು ಅಲ್ಲೇ ಒಂದು ರಾತ್ರಿ ಮಲಗಿ ನಂತರ ಹೋಗುತ್ತಾರೆ.ಈ ದೇವಸ್ಥಾನದಲ್ಲಿ ಸಂತಾನ ಭಾಗ್ಯವು ಲಭಿಸದೇ ಇರುವ ಸ್ತ್ರೀಯರು ಇಲ್ಲಿಗೆ ಬಂದು ಭಕ್ತಿ, ಶ್ರದ್ಧೆಯಿಂದ ಪೂಜೆ ಮಾಡಿ ಒಂದು ರಾತ್ರಿ ಅಲ್ಲಿಯೇ ಮಲಗಿ ಆ ದೇವರಲ್ಲಿ ಬೇಡಿಕೊಂಡರೆ ಖಂಡಿತವಾಗಿಯೂ ಸಂತಾನ ಭಾಗ್ಯ ಲಭಿಸುವುದು.

 

 

 

ದೇವಿಯ ದರ್ಶನ ಪಡೆದು ಸಾಯಂಕಾಲ ಅಲ್ಲೇ ಇರುವ ಕೊಳದಲ್ಲಿ ಸ್ನಾನ ಮಾಡಿ ದೇವಸ್ಥಾನದ ಬಳಿ ರಾತ್ರಿ ಮಲಗಬೇಕು. ನವರಾತ್ರಿ ಅಲ್ಲದೆ ಬೇರೆ ದಿನಗಳಲ್ಲಿಯೂ ಸಹ ಸಂತಾನ ಭಾಗ್ಯವಿಲ್ಲದೆ ಇರುವ ಮಹಿಳೆಯರು. ಇಲ್ಲಿಗೆ ಬಂದು ಸಂತಾನಕ್ಕಾಗಿ ದೇವಿಯನ್ನು ಪೂಜಿಸುತ್ತಾರೆ.ಇತರೆ ರಾಜ್ಯಗಳಿಂದಲೂ ಸಹ ಇಲ್ಲಿಗೆ ಮಹಿಳೆಯರು ಬರುತ್ತಾರೆ. ಕೆಲವೊಮ್ಮೆ ಇಲ್ಲಿ ಕಾಲಿಡಲು ಸಹ ಜಾಗ ಇರುವುದಿಲ್ಲ. ಅಷ್ಟು ಜನ ಜಂಗುಳಿ ಇರುತ್ತದೆ. ಇಲ್ಲಿಗೆ ಬರುವ ಹೆಚ್ಚು ಜನರು ಸಂತಾನ ಭಾಗ್ಯ ಪಡೆದಿದ್ದಾರೆ. ಹಾಗಾಗಿ ದಿನದಿಂದ ದಿನಕ್ಕೆ ಇಲ್ಲಿ ಹೆಚ್ಚು ಜನ ಸಂತಾನ ಭಾಗ್ಯಕ್ಕಾಗಿ ಬಂದು ದೇವಿಯ ಮೊರೆ ಹೋಗುತ್ತಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top