fbpx
ದೇವರು

ಕಾರ್ತಿಕ ಸೋಮವಾರ ಆಚರಣೆಗೆ ಬಂದಿದ್ದು ಹೇಗೆ,ಕಾರ್ತಿಕ ಸೋಮವಾರ ಶಿವನಿಗೆ ಪ್ರಾಶಸ್ತ್ಯ ಏಕೆ,ಕಾರ್ತಿಕ ಸೋಮವಾರದ ಶಿವನ ಪೂಜೆಯ ಫಲಗಳೇನು ಗೊತ್ತಾ

ಕಾರ್ತಿಕ ಮಾಸವು ಶಿವನಿಗೂ ಇರುವ ಸಂಬಂಧವನ್ನು ಹುಡುಕಿಕೊಂಡು ಹೋದರೆ ಪೌರಾಣಿಕ ಕಥೆಗಳು ತೆರೆದುಕೊಳ್ಳುತ್ತವೆ .ಈ ಹಿಂದೆ ತಾರಕಾಸುರನೆಂಬ ರಾಕ್ಷಸ ಮತ್ತು ಮೂರು ಜನ ಅಣ್ಣ ತಮ್ಮಂದಿರು ದೀರ್ಘ ಕಾಲದ ಸಮಯದವರೆಗೂ ಘೋರ ತಪಸ್ಸು ಮಾಡಿದರು. ಅವರ ತಪಸ್ಸಿಗೆ ಮೆಚ್ಚಿ ಬ್ರಹ್ಮ ಈ ಮೂವರಿಗೂ ಅಂತರಿಕ್ಷದಲ್ಲಿ ಹಾರಾಡುವ ಮೂರು ನಗರಗಳನ್ನು ನೀಡುತ್ತಾರೆ. ಇದರಿಂದಾಗಿ ರಾಕ್ಷಸ ಸಹೋದರರಿಗೆ ತ್ರಿಪುರಾಸುರರು ಎಂಬ ಹೆಸರು ಬರುತ್ತದೆ. ತ್ರಿಪುರಾಸುರರಿಗೆ ವಿಶೇಷ ವರ ನೀಡಿದ ಬ್ರಹ್ಮ ಒಂದು ನಿಯಮವನ್ನು ಹೇಳುತ್ತಾನೆ. ಅದೇನೆಂದರೆ ನೀವು ವಾಸವಿರುವ ಈ ಮೂರು ನಗರಗಳನ್ನು ಯಾರು ಕೇವಲ ಒಂದೇ ಬಾಣದಿಂದ ಸುಟ್ಟು ಬೂದಿ ಮಾಡುತ್ತಾರೋ, ಅವರಿಂದ ನಿಮಗೆ ಮರಣ ಬರಲಿದೆ ಎಂದು ಹೇಳುತ್ತಾನೆ.

 

 

 

ಬ್ರಹ್ಮನ ವರದಿಂದ ಮದವೇರಿದ ತ್ರಿಪುರಾಸುರರು ಸ್ವರ್ಗದ ಮೇಲೆ ಆಕ್ರಮಣ ಮಾಡಿ ಅಲ್ಲಿಂದ ದೇವತೆಗಳನ್ನು ಹೊರಹಾಕುತ್ತಾರೆ. ದೇವತೆಗಳು ಭಯಗೊಂದು ಶಿವನನ್ನು ಆಶ್ರಯಿಸುತ್ತಾರೆ. ಆಗ ಜಗದೊಡೆಯನಾದ ಶಿವನಿಗೆ ತ್ರಿಪುರಾಸುರರು ಪಡೆದಿರುವ ಅ ಮೂರು ವರಗಳ ಬಗ್ಗೆ ಹೇಳುತ್ತಾರೆ. ಶಿವ ಎಲ್ಲಾ ದೇವತೆಗಳಿಗೆ ತಮ್ಮ ಶಕ್ತಿಯಿಂದ ಕೂಡಿದ ಒಂದು ಬಾಣವನ್ನು ತಯಾರಿಸಲು ಹೇಳುತ್ತಾನೆ. ಆ ಒಂದು ಬಾಣದಿಂದ ಪರಮೇಶ್ವರ ರಾಕ್ಷಸರ ಮೂರು ನಗರಗಳನ್ನು ಏಕಕಾಲದಲ್ಲಿ ಸುಟ್ಟು ಭಸ್ಮಮಾಡುತ್ತಾನೆ.ಆ ಮೂರು ನಗರಗಳು ಭಸ್ಮವಾಗುತ್ತಿದ್ದಂತೆ ತ್ರಿಪುರಾಸುರನನ್ನು ಕೊಲ್ಲುತ್ತಾನೆ. ತ್ರಿಪುರಾಸುರನನ್ನು ಸಂಹರಿಸಿದನು.ಆದ್ದರಿಂದ ಶಿವನಿಗೆ ತ್ರಿಪುರಾಂಧಕ ಎನ್ನುವ ಹೆಸರು ಬರುತ್ತದೆ.
ಈ ಘಟನೆ ಘಟಿಸಿದ್ದು ಕಾರ್ತಿಕ ಮಾಸದ ಪೌರ್ಣಮಿಯ ದಿನ.ಹೀಗಾಗಿ ಕಾರ್ತಿಕ ಮಾಸದಲ್ಲಿ ಶಿವನನ್ನು ವಿಶೇಷವಾಗಿ ಆರಾಧಿಸಲಗುತ್ತದೆ.ಆತನಿಗೆ ಪ್ರಿಯವಾದ ಸೋಮವಾರದಂದು ವಿಶೇಷವಾಗಿ ಪೂಜಿಸಲಾಗುತ್ತದೆ ಹಾಗೆ ಕಾರ್ತಿಕ ಹುಣ್ಣಿಮೆಯ ದಿನ ಶಿವಾಲಯಗಳಲ್ಲಿ ಲಕ್ಷದೀಪೋತ್ಸವವನ್ನು ಬೆಳಗಿಸುವ ಸಂಪ್ರದಾಯವೂ ಎಲ್ಲಾ ದೇವಸ್ಥಾನಗಳಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.ಬೇರೆ ಎಲ್ಲಾ ಮಾಸಗಳಿಗೂ ಹೋಲಿಸಿಕೊಂಡರೆ ಕಾರ್ತಿಕ ಮಾಸ ತುಂಬಾ ಪವಿತ್ರ ಇದು ಹೇಗೆ ಎನ್ನುವುದರ ಬಗ್ಗೆ ಶೌನಕಾದಿ ಮಹರ್ಷಿಗಳು ಸೂತ ಮಹರ್ಷಿಗಳಿಗೆ ಹೇಳಿದ್ದಾರೆ. ಅಷ್ಟೇ ಅಲ್ಲ ಕಾರ್ತಿಕ ಮಾಸದ ಪಾವಿತ್ರ್ಯತೆ ಮತ್ತು ಈ ಮಾಸದ ಪ್ರಮುಖ ಆಚರಣೆಗಳಿಂದ ಸಿಗುವ ಫಲಗಳ ಬಗ್ಗೆಯೂ ಅವರು ವಿವರವಾಗಿ ಹೇಳುತ್ತಾರೆ.

 

ಹಣವಿಲ್ಲದೆ ಬದುಕುವುದು ಬಹಳ ಕಷ್ಟ. ಬಡವನಾಗಲಿ ಶ್ರೀಮಂತನಾಗಲಿ ಬದುಕಬೇಕು ಎಂದರೆ ಹಣ ಬೇಕೇಬೇಕು. ಆದರೆ ಬಹಳಷ್ಟು ಜನರು ಆರ್ಥಿಕ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಸಾಲದ ಶೂಲದಲ್ಲಿ ಸಿಲುಕಿ ಒದ್ದಾಡುತ್ತಿರುತ್ತಾರೆ. ಶಿವನ ಪೂಜೆಯಿಂದ ಆರ್ಥಿಕ ಸಮಸ್ಯೆಗಳು ಬೇಗ ದೂರವಾಗಬಹುದು. ಶಿವ ಹಾಗೂ ಮಹಾವಿಷ್ಣುವಿನ ನಡುವೆ ಭೇದವಿಲ್ಲ. ಹೀಗಾಗಿ ಕಾರ್ತಿಕ ಮಾಸ ಹರನಂತೆ ಹರಿಗೂ ಪ್ರಿಯವಾದ ಮಾಸ. ಹೀಗಾಗಿ ಮಹಾವಿಷ್ಣು ಯೋಗ ನಿದ್ರೆಯಿಂದ ಈ ಮಾಸದಲ್ಲಿ ಎಚ್ಚೆತ್ತುಕೊಳ್ಳುತ್ತಾನೆ. ನಾರಾಯಣನಿಗೆ ಪ್ರಿಯವಾದ ಮಾಸವೇ, ಲಕ್ಷ್ಮಿಗೂ ಅತ್ಯಂತ ಪ್ರಿಯ. ಈ ಮಾಸದಲ್ಲಿ ಲಕ್ಷ್ಮಿ ಭೂಮಿಗೆ ಬಂದು ತನ್ನ ಭಕ್ತರನ್ನು ಹರಸುತ್ತಾಳೆ ಎನ್ನುವ ಪ್ರತೀತಿ ಇದೆ. ಇಂತಹ ಪವಿತ್ರ ಮಾಸದಲ್ಲಿ ಶಿವನ ಜೊತೆಗೆ ಲಕ್ಷ್ಮಿ ನಾರಾಯಣನನ್ನು ಆರಾಧಿಸಿದರೆ ಲಯದ ಭಯವಿಲ್ಲದೆ ಲಕ್ಷ್ಮಿ ಪುತ್ರರಾಗಿ ಬದುಕಬಹುದು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top