fbpx
ಸಮಾಚಾರ

ಕತ್ತಲ ರಾತ್ರಿಯಲ್ಲಿ ಈ ಮರಗಳು ಹೊಳೆಯುತ್ತಂತೆ,ಈ ಮರಗಳು ಇರುವುದಾದರು ಎಲ್ಲಿ ಗೊತ್ತಾ

ನಿತ್ಯ ಹರಿದ್ವರ್ಣದ ಕಾಡುಗಳು ಬಗ್ಗೆ ನೀವು ಕೇಳಿರುತ್ತೀರಿ. ಕುರುಚಲು ಕಾಡುಗಳನ್ನು ನೀವು ನೋಡಿರಬಹುದು. ಆದರೆ ಹೊಳೆಯುವ ಕಾಡನ್ನು ನೀವು ಎಲ್ಲಾದರೂ ನೋಡಿದ್ದೀರಾ ? ಅದರಲ್ಲೂ ಆ ಕಾಡಲ್ಲಿ ಇರುವ ಮರಗಳು ಹೊಳೆಯುವುದನ್ನು ಎಲ್ಲಾದರೂ ನೀವು ಕೇಳಿದ್ದೀರೆ ? ಅಂತಹ ಕಾಡುಗಳು ನಿಮ್ಮ ಸಮೀಪದಲ್ಲಿಯೇ ಇವೆ ಎಂದರೆ ನೀವು ನಂಬುತ್ತೀರ ? ಅಂತಹ ವಿಸ್ಮಯಕಾರಿ ಕಾಡುಗಳ ಬಗ್ಗೆ ಅಲ್ಲಿರುವ ಹೊಳೆಯುವ ಮರಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ ಬನ್ನಿ.

ಹೊಳೆಯುವ ಕಾಡುಗಳು.ಇದನ್ನು ನೀವು ಯಾವುದಾದರೂ ಇಂಗ್ಲೀಷ್ ಸಿನಿಮಾಗಳಲ್ಲಿ ಅಥವಾ ಆಫ್ರಿಕಾ ಅಥವಾ ಆಸ್ಟ್ರೇಲಿಯಾ, ಬ್ರೆಜಿಲ್ ಖಂಡಗಳಲ್ಲಿ ಇರಬಹುದು ಎಂದು ನೀವು ಭಾವಿಸಿರಬಹುದು. ಆದರೆ ಈ ರೀತಿಯ ಕಾಡುಗಳು ನಮ್ಮ ಪಶ್ಚಿಮ ಘಟ್ಟದಲ್ಲಿ ಇವೆ ಎಂದರೆ ನೀವು ನಂಬಲೇಬೇಕು. ಈ ಹೊಳೆಯುವ ಮರಗಳು ಇರುವ ಕಾಡಿನ ಬಗ್ಗೆ ನಾವು ವಿಷಯಗಳನ್ನು ಕೆದಕಿ ನೋಡಿದಾಗ ಅವು ಏಕೆ ಹೊಡೆಯುತ್ತವೆ ಎನ್ನುವುದಕ್ಕೆ ಕೆಲವು ಕಾರಣಗಳು ಸಿಗುತ್ತವೆ. ಅದರಲ್ಲೂ ಈ ರೀತಿಯ ಮರಗಳನ್ನು ನಾವು ವರ್ಷಪೂರ್ತಿ ನೋಡುವುದಕ್ಕೆ ಸಾಧ್ಯವಿಲ್ಲ. ಅದು ಕೇವಲ ಮಳೆ ಪಶ್ಚಿಮ ಘಟ್ಟಗಳನ್ನು ಆವರಿಸಿಕೊಂಡ ಸಮಯದ ನಂತರವಷ್ಟೇ ಹೊಳೆಯುವ ಮರಗಳನ್ನು ನಾವು ನೋಡಲು ಸಾಧ್ಯವಾಗುತ್ತದೆ.

 

 

 

ಅದರಲ್ಲೂ ಜುಲೈನಿಂದ ಅಕ್ಟೋಬರ್ ತಿಂಗಳಿನಲ್ಲಿ ಇವುಗಳ ದರ್ಶನ ಸಾಧ್ಯ ಎನ್ನುವುದು ಈ ಮರಗಳನ್ನು ನೋಡಿರುವವರು ಹೇಳುತ್ತಾರೆ. ಇದ್ದಕ್ಕಿದ್ದ ಹಾಗೆ ಈ ಮರಗಳಿಗೆ ಹೊಳಪು ಬರುವುದಾದರೂ ಹೇಗೆ ? ಎನ್ನುವುದನ್ನು ನೋಡಿದರೆ ಅದಕ್ಕೆ ಕಾರಣ ನಿಜಕ್ಕೂ ಆಶ್ಚರ್ಯವನ್ನು ಉಂಟುಮಾಡುತ್ತದೆ. ಯಾಕೆಂದರೆ ಈ ಮರಗಳು ಬಿಸಿಲಿನ ಹೊತ್ತಿನಲ್ಲಿ ಹೊಳೆಯುವುದಿಲ್ಲ. ಬದಲಾಗಿ ರಾತ್ರಿಯ ಹೊತ್ತಿನಲ್ಲಿ ಮಾತ್ರ ಪಳ ಪಳ ಹೊಳೆಯಲು ಶುರುಮಾಡುತ್ತವೆ.
ಸಾಮಾನ್ಯವಾಗಿ ಗಡಿಯಾರಗಳಲ್ಲಿ ರಾತ್ರಿ ಬೆಳಕು ಇಲ್ಲದೆ ಇದ್ದರೂ ಹೊಳೆಯುವ ರೇಡಿಯಮ್ ಅನ್ನು ನೋಡಿದ್ದೀರ ಅಲ್ಲವೇ, ಅದೇ ರೀತಿ ಈ ಮರಗಳು ಕೂಡ ರಾತ್ರಿಯ ಹೊತ್ತಿನಲ್ಲಿ ಹೊಳೆಯುತ್ತವೆ. ಅದರಲ್ಲೂ ಈ ಮರಗಳ ಮೇಲೆ ಲೈಟಿನ ಬೆಳಕು ಬಿದ್ದರೆ ಅವುಗಳ ಹೊಳಪು ಮತ್ತಷ್ಟು ಹೆಚ್ಚಾಗುತ್ತದೆ. ಇದಕ್ಕೆ ಕಾರಣ ಏನೆಂದರೆ ಅಲ್ಲಿ ನಮಗೆ ಸಿಗುವುದು ಈ ಮರಗಳ ಮೇಲೆ ಉತ್ಪತ್ತಿಯಾಗುವ ಒಂದು ರೀತಿಯ ಶಿಲೀಂದ್ರ.

ಪಶ್ಚಿಮ ಘಟ್ಟಗಳಲ್ಲಿ ಮಳೆ ಬಿದ್ದರೆ ಸಾಕು ಪ್ರಕೃತಿ ಸಾಕಷ್ಟು ಬದಲಾವಣೆಯನ್ನು ಪಡೆದುಕೊಳ್ಳುತ್ತದೆ. ಮರಗಳ ಮೇಲೆ ನೀರು ಬಿದ್ದ ನಂತರ ಕೆಲವೇ ದಿನಗಳಲ್ಲಿ ಅವುಗಳ ಮೇಲೆ ಒಂದು ಬಗೆಯ ಶಿಲೀಂದ್ರ ಉತ್ಪತ್ತಿಯಾಗುತ್ತದೆ. ಈ ಶಿಲಿಂದ್ರ ಪಾಚಿಗಿಂತಲೂ ಪ್ರಕರವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ. ಹೀಗಾಗಿ ಶೀಲೀಂದ್ರ ಉತ್ಪತ್ತಿಯಾದ ಮರಗಳ ಮೇಲೆ ರಾತ್ರಿಯ ಹೊತ್ತಲ್ಲಿ ಬೆಳಕು ಬಿದ್ದರೆ ಅವು ಪಳ ಪಳ ಹೊಳೆಯಲು ಶುರುಮಾಡುತ್ತವೆ. ಇದೆ ಹೊಳೆಯುವ ಮರಗಳ ಹಿಂದಿನ ರಹಸ್ಯ.

 

ಇಂತಹ ಮರಗಳು ಪಶ್ಚಿಮ ಘಟ್ಟಗಳ ಎಲ್ಲಾ ವಲಯಗಳಲ್ಲೂ ಕಾಣಸಿಗುವುದಿಲ್ಲ. ಸದ್ಯ ಅದರ ಇರುವಿಕೆ ಕಂಡುಬಂದಿರುವುದು ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ನಡುವೆ. ಅದರಲ್ಲೂ ಪಶ್ಚಿಮ ಕಾಲಘಟ್ಟಗಳಲ್ಲಿ ಮರಗಳು ಹೆಚ್ಚು ಕಾಣಿಸಿಕೊಳ್ಳುತ್ತವೆ.ಪಶ್ಚಿಮ ಘಟ್ಟ ಪ್ರದೇಶದ ಮೂರು ರಾಜ್ಯಗಳಲ್ಲಿ ಹರಡಿಕೊಂಡಿದ್ದು, ಇಲ್ಲಿರುವ ವಿಶಿಷ್ಟ ಮರಗಳು ಜನರ ಗಮನವನ್ನು ಸೆಳೆಯುತ್ತಿವೆ. ಈ ಮರಗಳನ್ನು ನೋಡುವುದು ಕೂಡ ಅಷ್ಟು ಸುಲಭವಲ್ಲ. ಅದಕ್ಕಾಗಿ ಅರಣ್ಯ ಇಲಾಖೆಯ ಅಪ್ಪಣೆಯನ್ನು ತೆಗೆದು ಕೊಳ್ಳಬೇಕು. ಅವರು ಒಪ್ಪಿಕೊಂಡ ಮೇಲಷ್ಟೇ ನೀವು ಅಲ್ಲಿಗೆ ಹೋಗುವುದಕ್ಕೆ ಸಾಧ್ಯ. ರಸ್ತೆಯ ಬದಿಯಲ್ಲಿ ಅಥವಾ ಹಳ್ಳಿಗಳ ಪಕ್ಕದಲ್ಲಿ ಇವುಗಳನ್ನು ಕಾಣುವುದಕ್ಕೆ ಸಾಧ್ಯವಿಲ್ಲ.
ಈ ಮರಗಳನ್ನು ನೋಡಬೇಕಾದರೆ ಮಳೆ ಕಾಡುಗಳಲ್ಲಿ ಹತ್ತಾರು ಕಿಲೋಮೀಟರ್ ನಡೆಯಬೇಕು. ಹೀಗೆ ನಡೆದ ನಂತರ ಕೂಡ ನಿಮ್ಮ ಅದೃಷ್ಟ ಗಟ್ಟಿಯಾಗಿ ಇದ್ದರೆ ಅಷ್ಟೇ ಆ ಮರಗಳ ದರ್ಶನ ನಿಮಗೆ ಸಾಧ್ಯವಾಗುತ್ತದೆ. ಇಲ್ಲವಾದರೆ ನಿಮಗೆ ದಾರಿ ತಪ್ಪಿ ನೀವು ಮತ್ತೆ ನಾಡಿನ ಹಾದಿಯನ್ನು ಹಿಡಿಯಬೇಕಾಗುತ್ತದೆ. ಇಂತಹ ಮರಗಳ ಬಗ್ಗೆ ಅಲ್ಲಿರುವ ಸ್ಥಳೀಯರಿಗೆ ಹೆಚ್ಚಿನ ವಿಚಾರಗಳು ಗೊತ್ತಿವೆಯಾದರೂ ಮರಗಳನ್ನು ನೋಡುವುದಕ್ಕೆ ಅವರು ಯಾವಾಗ ಎಂದರೆ ಅವಾಗ ಕಾಡಿಗೆ ಹೋಗುವುದಿಲ್ಲ. ಯಾಕೆಂದರೆ ಈ ಕಾಡುಗಳು ಇರುವ ಜಾಗದಲ್ಲಿ ಹುಲಿಗಳು ಇರುವುದರಿಂದ ಅಲ್ಲಿಗೆ ಮನುಷ್ಯ ಹೋಗುವುದಕ್ಕೆ ಹೆದರಬೇಕು. ಅಷ್ಟೇ ಅಲ್ಲ ಅದು ರಕ್ಷಿತಾರಣ್ಯ ಆಗಿರುವುದರಿಂದ ಅರಣ್ಯ ರಕ್ಷಕರು ಕೂಡ ಅಲ್ಲಿರುವ ಓಡಾಡುವ ಜನರ ಮೇಲೆ ಕಣ್ಣಿಟ್ಟಿರುತ್ತಾರೆ. ಹೀಗಾಗಿ ಅಲ್ಲಿಗೆ ಹೋಗುವ ಸಾಹಸಕ್ಕೆ ಯಾರೂ ಪ್ರಯತ್ನ ಪಡಬೇಡಿ. ಇದು ಪಶ್ಚಿಮ ಘಟ್ಟಗಳಲ್ಲಿ ಇರುವ ಹೊಳೆಯುವ ರಹಸ್ಯ ಮರಗಳು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top