fbpx
ದೇವರು

ಬಳ್ಳಾರಿಯಾ ಈ ದೇವಾಲಯಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಮಹಿಳೆಯರು- ಕಾರಣ ಏನು?ಓದಿ ತಿಳಿದುಕೊಳ್ಳಿ.

ಶಬರಿಮಲೆ ಅಯ್ಯಪ್ಪಸ್ವಾಮಿಯ ದೇವಾಲಯಕ್ಕೆ ಮಹಿಳೆಯರು ಹೋಗಬೇಕೋ ಬೇಡವೋ ಎನ್ನುವ ವಿಚಾರ ದೇಶದೆಲ್ಲೆಡೆ ಬಿಸಿ-ಬಿಸಿ ಚರ್ಚೆಯಾಗಿ ಪರಿಣಮಿಸಿರುವಾಗ ಅಯ್ಯಪ್ಪಸ್ವಾಮಿಯಷ್ಟೇ ಶಕ್ತಿಯುತವಾಗಿರುವ ದೇವರಾದ ಕುಮಾರಸ್ವಾಮಿ ದರ್ಶನಕ್ಕೆ ಮಹಿಳೆಯರಿಗೆ ಅವಕಾಶವಿದ್ದರೂ ದರ್ಶನ ಪಡೆಯಲು ಮಹಿಳೆಯರು ಹಿಂದೇಟು ಹಾಕುತ್ತಿದ್ದರೆ.

ಬಳ್ಳಾರಿಯ ಸದಡೂರು ಪಟ್ಟಣದಿಂದ 12 ಕಿ.ಮೀ ದೂರದಲ್ಲಿರುವ ಕುಮಾರಸ್ವಾಮಿ ದೇವಾಲಯ ಇದಾಗಿದ್ದು, ಈ ದೇವಾಲಯವನ್ನು ಕಾರ್ತಿಕೇಯ ಸ್ವಾಮಿ, ಸುಬ್ರಮಣ್ಯಸ್ವಾಮಿ, ಷಣ್ಮುಖಸ್ವಾಮಿ, ನವಿಲು ಸ್ವಾಮಿ ದೇವಸ್ಥಾನ ಎಂದು ಸ್ಥಳೀಯರು ಕರೆಯುತ್ತಾರೆ.

 

ತಾರಕಾಸುರ ನನ್ನ ವಧೆ ಮಾಡಲು ಕುಮಾರಸ್ವಾಮಿ ದೇವರು ಬಂದು ಇಲ್ಲಿ ನೆಲಸಿದರು ಎಂಬ ಪ್ರತೀತಿ ಇದ್ದು . ಚಾಲುಕ್ಯರು 8ನೇ ಶತಮಾನದಲ್ಲಿ ಈ ದೇವಸ್ಥಾನವನ್ನು ನಿರ್ಮಿಸಿದ್ದಾರೆ ಎಂಬ ಮಾಹಿತಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

 

ದೇವಾಲಯದಲ್ಲಿ ಕುಮಾರಸ್ವಾಮಿಯ ದರ್ಶನಕ್ಕೆ ಮಹಿಳೆಯರಿಗೆ ಯಾವುದೇ ಕಟ್ಟಪಾಡುಗಳಿಲ್ಲದೆ ಇದ್ದರೂ ಮಹಿಳೆಯರು ದರ್ಶನ ಪಡೆಯಲು ಭಯಪಡುತ್ತಿದ್ದಾರೇ.

 

 

 

 

ಹೀಗೆ ಮಹಿಳೆಯರು ದೇವಾಲಯಕ್ಕೆ ಹೋಗದೆ ಇರುವುದಕ್ಕೆ ಕಾರಣವೂ ಇದೆ. ಅದೇನೆಂದರೆ, ಈ ಹಿಂದೆ ಕುಮಾರಸ್ವಾಮಿ ತಾಯಿ ಪಾರ್ವತಿ ಮಗನಿಗೆ ವಿವಾಹ ಮಾಡಲು ಕನ್ಯಾಕುಮಾರಿಯಲ್ಲಿ ವಧು ನೋಡಿ ಬಂದಿರುತ್ತಾರೆ. ಆಗ ಕಾರ್ತಿಕೇಯ ಹುಡುಗಿ ಯಾರ ರೀತಿ ಇದ್ದಾಳೆಂದು ಕೇಳಿದಾಗ ನನ್ನ ಹಾಗೆ ಇದ್ದಾಳೆ ಅಂತಾ ತಾಯಿ ಪಾರ್ವತಿ ಹೇಳುತ್ತಾರೆ. ಹಾಗಾದರೆ ಕುಮಾರಸ್ವಾಮಿ ನಾನು ಅವಳನ್ನ ಮದುವೆಯಾಗಲ್ಲ. ನಿನ್ನ ಸ್ವರೂಪದಂತೆ ಇದ್ದರೆ ಅವಳು ನನಗೆ ಮಾತೃ ಸಮಾನಳು, ನಾನು ಬ್ರಹ್ಮಚಾರಿಯಾಗಿಯೇ ಉಳಿಯುತ್ತೇನೆ ಎಂದು ಹೇಳುತ್ತಾರಂತೆ. ಹೀಗಾಗಿ ಮಹಿಳೆಯರು ಕುಮಾರಸ್ವಾಮಿ ದರ್ಶನಕ್ಕೆ ಹಿಂಜರಿಯುತ್ತಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಕಾರಣ ಹೊರತುಪಡಿಸಿ ಮಹಿಳೆಯರು ಕುಮಾರ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಏಕೆ ಹಿಂಜರಿಯುತ್ತಾರೆ ಎಂಬುದಕ್ಕೆ ಇನ್ಯಾವುದೇ ಸೂಕ್ತ ಕಾರಣಗಳು ದೊರೆತಿಲ್ಲ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top