fbpx
ದೇವರು

ಇಂದು ತುಳಸಿ ಹಬ್ಬ ಈ ಹಬ್ಬದ ಆಚರಣೆ ಹೇಗೆ ಮಾಡ್ಬೇಕು,ಸಂಜೆ ಯಾವ ಸಮಯದಲ್ಲಿ ತುಳಸಿ ಪೂಜೆ ಮಾಡಿದ್ರೆ ಇಷ್ಟಾರ್ಥ ಸಿದ್ಧಿಯಾಗಿ ಫಲ ದೊರೆಯುತ್ತೆ ಗೊತ್ತಾ

ಕಾರ್ತಿಕ ಮಾಸದ ತುಳಸಿ ವಿವಾಹ ಅಂದರೆ ತುಳಸಿ ಹಬ್ಬ ಮಾಡುವ ದಿನವಿದು.ಯಾವ ರೀತಿ ಆಚರಣೆ ಮಾಡಬೇಕು ? ಯಾವ ಸಮಯದಲ್ಲಿ ಆಚರಣೆ ಮಾಡಬೇಕು ?
ಇಂದು ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ದಿನ. ಅಂದರೆ ಇಂದು ತುಳಸಿ ಹಬ್ಬದ ಆಚರಣೆ. ಅದರಲ್ಲೂ ಪ್ರಮುಖವಾಗಿ ಮಹಿಳೆಯರು ಈ ದಿನ ಈ ತುಳಸಿ ಹಬ್ಬವನ್ನು ಆಚರಣೆ ಮಾಡುವುದರಿಂದ ವಿಶೇಷ ಫಲ ಸಿದ್ಧಿಸುತ್ತದೆ. ಇದರ ಆಚರಣೆ ಮತ್ತು ವಿಧಿ ವಿಧಾನಗಳು ಏನು ?
ಇಂದು ಮಂಗಳವಾರ,ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯ ದಿನ ತುಳಸಿ ಹಬ್ಬ ಅಂದರೆ ತುಳಸಿ ವಿವಾಹವನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ಮಹಿಳೆಯರು ಮಾತ್ರ ಮಾಡಬೇಕೆಂದು ನಿಯಮವೇನೂ ಇಲ್ಲ. ಮನೆಯ ಬಾಗಿಲಲ್ಲಿ ಒಂದು ತುಳಸಿ ಗಿಡವನ್ನು ನಾವು ಇಟ್ಟಿರುತ್ತೇವೆ. ನಮ್ಮ ಇಂದೂ ಸಂಪ್ರದಾಯದ ಪ್ರಕಾರ ತುಳಸಿ ಗಿಡದಲ್ಲಿ ಮಹಾಲಕ್ಷ್ಮಿ ನೆಲೆಸಿರುತ್ತಾಳೆ. ಆದ್ದರಿಂದ ಮಹಾವಿಷ್ಣುವಿನ ರೂಪದಲ್ಲಿ ಇರುವ ನೆಲ್ಲಿಕಾಯಿಯ ಕೊನೆಯನ್ನು,ಗಿಡದ ಕೊಂಬನ್ನು ತಂದು ತುಳಸಿ ಗಿಡದ ಬಳಿ ಇಟ್ಟು ತುಳಸಿ ವಿವಾಹವನ್ನು ಮಾಡಬೇಕು.

 

 

 

ಈ ದಿನ ತುಳಸಿ ವಿವಾಹ, ವಿಷ್ಣು ಪುರಾಣದ ಪ್ರಕಾರ ಶ್ರೀಮನ್ನಾರಾಯಣ ಶಯನದಿಂದ ಈ ದಿನ ಹೇಳುತ್ತಾನೆ . ಅಂದರೆ ನಾಲ್ಕು ತಿಂಗಳಿಂದ ಮಲಗಿದ್ದ ವಿಷ್ಣು ಉತ್ಥಾನ ದ್ವಾದಶಿಯ ದಿನ ನಿದ್ರೆಯಿಂದ ಏಳುತ್ತಾನೆ . ನಿದ್ರೆಯಿಂದ ಎದ್ದ ವಿಷ್ಣು ಭಕ್ತರ ಸಂಕಷ್ಟಗಳನ್ನು ಕೇಳುವ ದಿನವಿದು. ಯಾವಾಗ ಶ್ರೀಮನ್ನಾರಾಯಣನು ವೈಕುಂಠದಲ್ಲಿ ಶಯನ ನಾಗಿರುತ್ತಾನೆ, ಅದಾದ ನಂತರ ಸುಪ್ರಭಾತದಿಂದ ಅವನನ್ನು ಏಳಿಸುತ್ತಾರೆ.ನಿದ್ರೆಯಿಂದ ಎದ್ದಾಗ ಎಲ್ಲರೂ ಕೂಡ ಶ್ರದ್ಧೆ, ಭಕ್ತಿಯಿಂದ ಪ್ರಾರ್ಥನೆ ಮಾಡಿ. ಬ್ರಹ್ಮಾಂಡ ನಾಯಕ ಶ್ರೀಮನ್ನಾರಾಯಣ, ನಾರಾಯಣನಿಗೆ ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಂಡಾಗ ಎಲ್ಲದಕ್ಕೂ ಕೂಡ ಅಸ್ತು ಎಂದು ಹೇಳುತ್ತಾನೆ. ಆದ್ದರಿಂದ ಶ್ರೀಮನ್ನಾರಾಯಣ ತನ್ನ ನಾಬಿಯ ಕಮಲದಿಂದ ಬ್ರಹ್ಮನು ಸೃಷ್ಟಿ ಮಾಡಿದ್ದಾನೆ. ಬ್ರಹ್ಮ ಸೃಷ್ಟಿಕರ್ತ.

ಈ ದಿನ ತುಳಸಿ ಹಬ್ಬವನ್ನು ಯಾವ ರೀತಿಯಾಗಿ ಆಚರಣೆ ಮಾಡಬೇಕು ? ಶುಭ ಸಮಯ ಯಾವುದು ?
ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಗಿಡವನ್ನು ಇಟ್ಟುಕೊಳ್ಳಬೇಕು. ಅದು ಇಂದೂ ಸಂಪ್ರದಾಯದಲ್ಲಿ ಇರುವ ಪದ್ಧತಿಯಾಗಿದೆ. ಅದರಲ್ಲೂ ಯಾರ ಮನೆಯಲ್ಲಿ ತುಳಸಿ ಗಿಡವನ್ನು ಇಟ್ಟಿರುತ್ತಾರೆಯೋ, ಅವರ ಮನೆಯಲ್ಲಿ ಶಾಂತಿ, ನೆಮ್ಮದಿ ಇರುತ್ತದೆ. ಲಕ್ಷ್ಮೀನಾರಾಯಣರ ಪ್ರತಿ ಸ್ವರೂಪದಲ್ಲಿ ತುಳಸಿ ಆರಾಧನೆಯನ್ನು ಸಾಯಂಕಾಲ ಗೋಧೂಳಿ ಸಮಯದಲ್ಲಿ 5 ಗಂಟೆ 55 ನಿಮಿಷದಿಂದ 6 ಗಂಟೆ 15 ನಿಮಿಷದ ಒಳಗಡೆ ವ್ಯವಸ್ಥಿತವಾಗಿ ತುಳಸಿ ಮಾತೆಗೆ ಪೂಜೆಯನ್ನು ಮಾಡಬೇಕು. ನಿಮ್ಮ ಶಕ್ತಿಯ ಅನುಸಾರ ಪೂಜೆ-ಪುನಸ್ಕಾರಗಳನ್ನು ಮಾಡಿ. ತುಳಸಿ ಮಾತೆಗೆ ಸೇವಂತಿಗೆ ಹೂವನ್ನು ಅರ್ಪಿಸಿ,ಗೆಜ್ಜೆ ವಸ್ತ್ರವನ್ನು ಆರ್ಪಿಸಿ, ಷೋಡಶ ಉಪಚಾರ ವನ್ನು ಮಾಡಿ, ಅರ್ಘ್ಯ, ಪಾದ್ಯ, ಆಚಮನ ,ಧೂಪ, ದೀಪ ಇವೆಲ್ಲವನ್ನೂ ಕೂಡ ಅರ್ಪಿಸಿ. ಹೆಸರುಬೇಳೆ ಕೋಸಂಬರಿಯನ್ನು, ನಿಂಬೆ ಪಾನಕವನ್ನು ನೈವೇದ್ಯವನ್ನಾಗಿ ಅರ್ಪಿಸಿ.
ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿರುವ ಅಥವಾ ನಿಮಗೆ ಬೇಕಾಗಿರುವ ಸುಮಂಗಲಿಯರನ್ನು ಕರೆದು ವ್ಯವಸ್ಥಿತವಾಗಿ ಅರಿಶಿನ-ಕುಂಕುಮವನ್ನು ಕೊಟ್ಟು ನಮಸ್ಕಾರ ಮಾಡಿ, ನಿಮಗೆಲ್ಲರಿಗೂ ಕೂಡ ತುಳಸಿ ಮಾತೆಯ ಲಕ್ಷ್ಮೀನಾರಾಯಣನ ಅನುಗ್ರಹ ಪ್ರಾಪ್ತಿಯಾಗುತ್ತದೆ.ಸುಖ, ಶಾಂತಿ ಮತ್ತು ನೆಮ್ಮದಿಯ ಜೀವನ ಪ್ರಾಪ್ತಿಯಾಗುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top