fbpx
ರಾಜಕೀಯ

ಇರಾನ್​ನಲ್ಲಿ ಬಂಧಿತರಾಗಿರುವ ಕರ್ನಾಟಕದ ಮೀನುಗಾರರಿಗೆ ಕೇಂದ್ರ ಸರ್ಕಾರದ ಸಹಕಾರ ಕೋರಿ ಜಿ.ಸಿ ಚಂದ್ರ ಶೇಖರ್ ಪತ್ರ – ಸುಷ್ಮಾ ಸ್ವರಾಜ್ ರವರಿಗೆ ಹೆಚ್ಚಿದ ಒತ್ತಡ

ಕಳೆದ ಜುಲೈ ತಿಂಗಳಿನಲ್ಲಿ ದುಬೈನಿಂದ ಹೊರಟಿದ್ದ ನಮ್ಮ ಭಟ್ಕಳದ 9 ಮೀನುಗಾರರು ಸೇರಿ ಒಟ್ಟು 18 ಜನರು ಆಕಸ್ಮಿಕವಾಗಿ ಇರಾನ್ ಗಡಿ ತಲುಪಿ ಅಲ್ಲಿನ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದಾರೆ. ಈ ಘಟನೆ ನಡೆದು ಅನೇಕ ತಿಂಗಳುಗಳೇ ಸಂದರು ನಮ್ಮ ಕೇಂದ್ರ ಸರ್ಕಾರ ಈ ಘಟನೆಯ ಕುರಿತು ಯಾವುದೇ ರೀತಿಯ ಸಹಕಾರ ನೀಡದೆ ಮೌನವಾಗಿರುವುದು ವಿಷಾದಕರ ಸಂಗತಿಯಾಗಿದೆ.

ಈ ವಿಷಯವನ್ನು ಮನಗಂಡ ರಾಜ್ಯ ಕಾಂಗ್ರೆಸ್ ನಾಯಕ ನಿವೇದಿತ ಆಳ್ವ ಕೇಂದ್ರ ಸರ್ಕಾರದ ಬಳಿ ಕರ್ನಾಟಕದ ಮೀನುಗಾರರಿಗೆ ಬಿಡುಗಡೆಯ ಭಾಗ್ಯ ಒದಗಿಸಿ ಎಂದು ಮನವಿ ಮಾಡಿಕೊಂಡಿರುವುದು ಪ್ರಶಂಸನೀಯವಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ನಿವೇದಿತ ಆಳ್ವ, ‘ಸುಷ್ಮಾ ಸ್ವರಾಜ್​ ಅವರೇ ಕರ್ನಾಟಕದ 18 ಮೀನುಗಾರರು ಇರಾನ್​ ವಶದಲ್ಲಿದ್ದಾರೆ. ಅವರನ್ನು ವಾಪಾಸ್ಸು ಕರೆ ತರಲು ಸಹಾಯ ಮಾಡಿ. ನೀವು ಅಲ್ಲಿನ ಅಧಿಕಾರಗಳ ಜತೆ ಮಾತನಾಡಿದರೆ ಈ ಸಮಸ್ಯೆ ಬಗೆಹರಿಯಲಿದೆ’ ಎಂದಿದ್ದಾರೆ.

 

 

ಇರಾನ್ ನಲ್ಲಿ ಬಂಧಿತರಾಗಿರುವ ಕರ್ನಾಟಕದ ಮೀನುಗಾರರ ವಿಷಯ ಎಲ್ಲೆಡೆ ಜನಜನಿತವಾಗುತ್ತಿದ್ದಂತೆ. ನಿವೇದಿತಾ ಆಳ್ವ ಮತ್ತು ಜಿ. ಪರಮೇಶ್ವರ್ ಈ ವಿಷ್ಯವಾಗಿ ಟ್ವೀಟ್ ಮಾಡುತ್ತಿದ್ದ ಬೆನ್ನಲ್ಲೇ  ರಾಜ್ಯ ಸಭಾ ಸದಸ್ಯರಾದ ಜಿ.ಸಿ ಚಂದ್ರಶೇಖರ್ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಪತ್ರ್ರ ಬರೆದು ಇರಾನ್ ನಲ್ಲಿ ಬಂಧಿತರಾಗಿರುವ ಕರ್ನಾಟಕದ ಮೀನುಗಾರರನ್ನು ಬಿಡಿಸಲು ಸಹಕಾರ ನೀಡಿ ಎಂದು ಕೋರಿದ್ದಾರೆ. ಅದಲ್ಲದೆ ಬಂಧಿತರಿಗಿರುವ ಮೀನುಗಾರರ ಕುಟುಂಬದವರ ಆದಾಯವು ನಿಂತಿದ್ದು ಮೀನುಗಾರರು ಕೆಲಸ ಮಾಡುತ್ತಿದ್ದ ಕಂಪನಿ ಯು ಸಹ ಅವರಿಗೆ ಸಂಬಳ ನೀಡುವುದನ್ನು ನಿಲ್ಲಿಸಿದೆ ಎಂದು
ಎಂದು ಬರೆದುಕೊಂಡಿದ್ದಾರೆ.

 

 

ನಿವೇದಿತ ಆಳ್ವ ಮಾಡಿರುವ ಟ್ವೀಟ್​ಅನ್ನು ರೀಟ್ವೀಟ್​ ಮಾಡಿರುವ ನಮ್ಮ ಮಾನ್ಯ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್​, ‘ಬೋಟ್​ನಲ್ಲಿದ್ದ ಕರ್ನಾಟಕದ ಮೀನುಗಾರರನ್ನು ಬಂಧಿಸಿ ತಿಂಗಳುಗಳೇ ಕಳೆದಿವೆ. ತೆಹ್ರಾನ್​ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಜತೆ ಮಾತನಾಡಿ ಅಗತ್ಯ ಸಹಾಯ ಮಾಡಿ ಮತ್ತು ಅವರನ್ನು ವಾಪಸ್ಸು ಕರೆ ತನ್ನಿ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಬಳಿ ಮನವಿ ಮಾಡಿದ್ದಾರೆ. ಇವರ ಮನವಿಗೆ ಸುಷ್ಮಾ ಸ್ವರಾಜ್​ ಅವರು ಪ್ರತಿಕ್ರಿಯಿಸಲಿದ್ದಾರೆಯೇ ಎಂಬುದನ್ನು ನಾವು ಮುಂದೆ ಕಾದು ನೋಡಬೇಕಿದೆ.

 

 

 

ಒಟ್ಟಿನಲ್ಲಿ ಈ ವಿಷ್ಯದ ಕುರಿತು ಮೇಲಿಂದ ಮೇಲೆ ಕೇಂದ್ರ ಸರ್ಕಾರಕ್ಕೆ ಮನವಿ ಹೋಗುತ್ತಿದ್ದು, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರವರಿಗೆ ಒತ್ತಡವನ್ನು ಹೆಚ್ಚು ಮಾಡಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top