fbpx
ಸಮಾಚಾರ

ರೈಲಿನಡಿಗೆ ಸಿಕ್ಕರೂ ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ 1 ವರ್ಷದ ಕಂದಮ್ಮ – ಇಲ್ಲಿದೆ ಮೈ ಜುಂ ಎನಿಸುವ ವಿಡಿಯೋ

ಓಡುತ್ತಿರುವ ರೈಲಿನ ಅಡಿ ಸಿಕ್ಕಿ ಬದುಕುಳಿದವ್ರನ್ನು ನೀವು ನೋಡಿದ್ದೀರಾ ? ಇಲ್ಲ ತಾನೇ. ಆದರೆ ಇಲ್ಲೊಂದು ಪವಾಡ ನಡೆದಿದೆ. ಒಂದು ವರ್ಷದ ಮಗು ಓಡುತ್ತಿರುವ ರೈಲಿನ ಕೆಳಗೆ ಸಿಕ್ಕರೂ ಏನು ಆಗದೆ ಬಚಾವ್ ಆಗಿದೆ.

ಹೌದು ಉತ್ತರಪ್ರದೇಶದ ಮಥುರಾದ ರೈಲ್ವೆ ನಿಲ್ದಾಣದಲ್ಲಿ ಒಂದು ವರ್ಷದ ಮಗುವಿನ ಮೇಲೇ ರೈಲು ಹಾದುಹೋದರೂ ಆ ಮಗುವಿಗೆ ಯಾವುದೇ ಗಾಯಗಳಾಗದೆ ಆಶ್ಚರ್ಯಕರ ರೀತಿಯಲ್ಲಿ ಆ ಮಗು ಪಾರಾದ ಘಟನೆ ನಡೆದಿದೆ.

ಆ ಮಗುವಿನ ತಂದೆ ರೈಲ್ವೆ ನಿಲ್ದಾಣದಲ್ಲಿ ಮಗುವಿನೊಂದಿಗೆ ನಿಂತುಕೊಂಡು ರೈಲಿಗೆ ಕಾಯುತ್ತಿದ್ದಾಗ ಆ ಮಗು ಅಚಾನಕ್ಕಾಗಿ ರೈಲ್ವೆ ಹಳಿಯ ಮೇಲೆ ಬಿದ್ದಿತ್ತು. ಅಷ್ಟರಲ್ಲಾಗಲೇ ವೇಗವಾಗಿ ಹೋಗುತ್ತಿದ್ದ ರೈಲು ಆ ಮಗುವಿನ ಮೇಲೇ ಹಾದುಹೋಗಿದೆ. ಆದರೆ, ಅದೃಷ್ಟವೆಂಬಂತೆ ಆ ಮಗುವಿಗೆ ಚಿಕ್ಕ ಗಾಯವೂ ಆಗದೆ ಹೊರಬಂದಿದೆ. ಹಳಿಯ ಮೇಲೆ ಅಡ್ಡವಾಗಿ ಬಿದ್ದಿದ್ದರಿಂದ ಮಗುವಿಗೆ ಯಾವುದೇ ತೊಂದರೆಯಾಗಿಲ್ಲ. ಅಲ್ಲದೆ, ಕೆಳಗೆ ಬಿದ್ದ ಮಗು ಮೇಲೇಳಲು ಪ್ರಯತ್ನಿಸದೆ ಯಥಾ ಸ್ಥಿತಿಯಲ್ಲೇ ಮಲಗಿಕೊಂಡಿದ್ದರಿಂದ ಯಾವುದೇ ಏಟಾಗದೆ ಬಚಾವಾಗಿರುವುದು ಸೋಜಿಗದ ವಿಚಾರವಾಗಿದೆ.

ಮಗು ಹೇಗೆ ಪಾರಾಯಿತೆಂಬುದನ್ನು ನೀವು ಈ ಕೆಳಗೆ ನೀಡಿರುವ ವಿಡಿಯೋ ದಲ್ಲಿ  ನೋಡಬಹುದಾಗಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top