fbpx
ಮನೋರಂಜನೆ

“ನಾವು ಅದ್ಧೂರಿಯಾಗಿ ಮದುವೆಯಾಗಲ್ಲ, ಅದೇ ದುಡ್ಡನ್ನ ಬಡಮಕ್ಕಳಿಗೆ ಕೊಡ್ತೀವಿ” ಐಂದ್ರಿತಾ ರೈ.

ನಟಿ ಐಂದ್ರಿತಾ ರೇ ಮತ್ತು ದಿಗಂತ್ ನಡುವೆ ಕುಚ್ ಕುಚ್ ನಡೆಯುತ್ತಿದೆ ಎಂಬ ಸುದ್ದಿ ಬಹಳಷ್ಟು ವರ್ಷಗಳಿಂದ ಕೇಳಿಬರುತ್ತಿದ್ದರೂ ಈಗ ಈ ವಿಷಯ ಗುಟ್ಟಾಗಿ ಉಳಿದಿಲ್ಲ.. ಸಿನಿಮಾರಂಗದಲ್ಲಿ ಈ ಜೋಡಿ ಸಿನಿಮಾಗಳಿಗಿಂತ ಲವ್ ವಿಚಾರವಾಗಿ ಸುದ್ದಿಯಾಗಿದ್ದೆ ಹೆಚ್ಚು. ಪ್ರಣಯ ಪ್ರಸಂಗದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಭಂಗಿಗಳ ಫೋಟೋ ಹರಿ ಬಿಡುತ್ತಾ ಸದಾ ಚಾಲ್ತಿಯಲ್ಲಿರು ದಿಗ್ಗಿ- ಆಂಡಿ ಸದ್ಯದಲ್ಲೇ ಮದುವೆ ಮಾಡಿಕೊಳ್ಳುತ್ತಾರೆ ಎಂಬ ವದಂತಿ ಸದಾ ಚಾಲ್ತಿಯಲ್ಲಿರುತ್ತದೆ.. ಈ ಬಗ್ಗೆ ಯಾರೇನೇ ಪ್ರಶ್ನಿಸಿದರು ಅದರಿಂದ ನುಸುಳಿಕೊಳ್ಳುವ ಜಾಣ್ಮೆಯನ್ನು ಇಬ್ಬರೂ ಕರಗತ ಮಾಡಿಕೊಂಡಿದ್ದರು.

ಈ ಜೋಡಿ ಇದೀಗ ದಾಂಪತ್ಯ ಜೀವನವನ್ನ ಆರಂಭಿಸಲು ನಿರ್ಧರಿಸಿದ್ದು ಹಸಮಣೆಯೇರಲು ಸಜ್ಜಾಗಿದೆ. ದಿಗಂತ್ ಹಗೂ ಐಂದ್ರಿತಾ ರೇ ಈ ಹಿಂದೆಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇದೀಗ ಮದುವೆ ಡೇಟ್ ಕೂಡಾ ಫಿಕ್ಸ್ ಆಗಿದೆ. ಮುಂದಿನ ತಿಂಗಳು ಡಿಸೆಂಬರ್ 12 ರಂದು ರಿಂಗ್ ಬದಲಿಸುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.. ಡಿಸೆಂಬರ್ 11 ರಂದು ಅರಿಶಿಣ ಶಾಸ್ತ್ರದ ಸಮಾರಂಭವನ್ನು ಏರ್ಪಡಿಸಿದ್ದೇವೆ. ಡಿಸೆಂಬರ್ 12 ರಂದು ಮದುವೆ ನಡೆಯಲಿದೆ ಡಿಸೆಂಬರ್ 15 ರಂದು ಆಪ್ತರು ಹಾಗೂ ಚಿತ್ರರಂಗದ ಗಣ್ಯರಿಗಾಗಿ ಔತಣಕೂಟ ಏರ್ಪಡಿಸಲಿದ್ದಾರೆಂದು ತಿಳಿದು ಬಂದಿದೆ.

ಸಾಮಾನ್ಯವಾಗಿ ಸಿನಿಮಾದವರ ಮದುವೆಯೆಂದರೆ ಅಲ್ಲಿ ಅದ್ಧೂರಿತನವೇ ಹೆಚ್ಚು ಚರ್ಚಿತ ವಿಷವಾಗಿರುತ್ತವೆ.. ನಿಶ್ಚಿತಾರ್ಥದಿಂದ ಹಿಡಿದು ಎಲ್ಲಾ ಕಾರ್ಯಕ್ರಮಗಳೂ ಮಾಧ್ಯಮಗಳಲ್ಲಿ ಚರ್ಚಿತವಾಗಬೇಕೆನ್ನುವ ಆಸೆಗೆ ಏನೋ ಹಾಗೆಯೇ ಕೆಲ ಸಿನಿಮಾ ಮಂದಿ ನಡೆದುಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಮನಸಾರೆ ಜೋಡಿ ಸ್ವಲ್ಪ ಡಿಫರೆಂಟ್ ಏಕೆಂದರೆ ಇವರಿಬ್ಬರು ಸರಳ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರಂತೆ “ನಾನು ಮತ್ತು ದಿಗಂತ್ ಸರಳವಾಗಿಯೇ ಮದುವೆ ಮಾಡಿಕೊಳ್ಳುತ್ತೇವೆ. ಬೆಂಗಳೂರಿನ ಮತ್ತು ಬೆಂಗಾಳಿ ಸಂಪ್ರದಾಯದಂತೆ ನಮ್ಮಿಬ್ಬರ ಮದುವೆ ಆಗಲಿದ್ದು ನಮ್ಮ ಮದುವೆ ಬೆಂಗಳೂರಿನಲ್ಲಿ ನಡೆಯುತ್ತದೆ.. ನಾವು ಆಡಂಬರವಾಗಿ ಮದುವೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ.. ಅದೇ ಹಣವನ್ನು ಬಡಮಕ್ಕಳಿಗೋ ಅಥವಾ ಅನಾಥಾಶ್ರಮಕ್ಕೋ ನೀಡಬೇಕು ಎಂದುಕೊಂಡಿದ್ದೇವೆ” ಎಂದು ಐಂದ್ರಿತಾ ಹೇಳಿದ್ದಾರೆ.

ಮನಸಾರಿ ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮೂಲಕ ದಿಗಂತ್ ಹಾಗೂ ಐಂದ್ರಿತಾ ರೈ ಪರಿಚಯವಾಗಿದ್ದು, ನಂತರ 2012ರ ಪಾರಿಜಾತ ಚಿತ್ರದಲ್ಲೂ ಈ ಜೋಡಿಯ ರೊಮ್ಯಾನ್ಸ್ ತೆರೆ ಮೇಲೆ ಮುಂದುವರೆದಿತ್ತು. ಆ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ, ಈ ಜೋಡಿಯ ತೆರೆ ಹಿಂದಿನ ಕೆಮೆಸ್ಟ್ರಿ ಮಾತ್ರ ಮುಂದುವರೆದಿತ್ತು. ಸ್ವತಃ ಐಂದ್ರಿಯಾ ಅವರೇ, “ನನ್ನ ಬೆಸ್ಟ್ ಫ್ರೇಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಸಂತಸದಿಂದ ಹೇಳಿಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top