fbpx
ಮನೋರಂಜನೆ

ಮೊದಲ T20 ಪಂದ್ಯ: ಆಸೀಸ್ ವಿರುದ್ಧ ಟೀಮ್ ಇಂಡಿಯಾಗೆ ಸೋಲು.

ಬ್ರಿಸ್ಟೇನ್ ನಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟಿ–20 ಕ್ರಿಕೆಟ್‌ ಪಂದ್ಯದಲ್ಲಿ 4 ರನ್ ಗಳ ಆಸ್ಟ್ರೇಲಿಯಾ ಗೆಲುವು ದಾಖಲಿಸಿದೆ. ಈ ಮೂಲಕ ಟೀಮ್ ಇಂಡಿಯಾ ಸೋಲಿನ ಮೂಲಕ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 17 ಓವರ್​ಗಳಲ್ಲಿ 158 ರನ್ ದಾಖಲಿಸಿತು. ಮಳೆ ಕಾರಣ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಇದರಿಂದ 20 ಓವರ್​ಗಳ ಪಂದ್ಯವನ್ನ 17 ಓವರ್​ಗೆ ಕಡಿತಗೊಳಿಸಲಾಗಿದೆ. ಡಕ್ವರ್ಥ್​​ ಲೂಯಿಸ್​ ನಿಯಮದ ಪ್ರಕಾರ ಟೀಮ್ ಇಂಡಿಯಾ ಗೆಲುವಿಗೆ 17 ಓವರ್​ಗಳಲ್ಲಿ 174 ರನ್ ಟಾರ್ಗೆಟ್ ನಿಗದಿಪಡಿಸಲಾಗಿತ್ತು.

174ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ್ದ ಟೀಮ್ ಇಂಡಿಯಾ 19ನೇ ಓವರಿನವರೆಗೂ ತನ್ನ ಸೆಡ್ ನಲ್ಲಿಯೇ ಇಟ್ಟುಕೊಂಡಿತ್ತು. ಆದರೆ ಕೊನೆಯ ಓವರಿನಲ್ಲಿ ಗೆಲ್ಲಲು 13ರನ್ ಬೇಕಿದ್ದಾಗ ಪ್ರಮುಖ ದಂಡಿಗರಾದ ದಿನೇಶ್ ಕಾರ್ತಿಕ್ ಮತ್ತು ಪಾಂಡ್ಯ ವಿಕೆಟ್ ಬಿದ್ದವು,. ಇದರಿಂದ ಪಂದ್ಯ ಆಸ್ಟ್ರೇಲಿಯಾ ಕಡೆಗೆ ವಾಲಿತು.. ಅಂತಿಮವಾಗಿ 17 ಓವರ್ಗಳಲ್ಲಿ ಟೀಮ್ ಇಂಡಿಯಾ 169 ರನ್ ಗಳನ್ನೂ ಗಳಿಸಲಷ್ಟೇ ಶಕ್ತವಾಯಿತು.

man of the mantch: adam zampa

ಸಂಕ್ಷಿಪ್ತ ಸ್ಕೊರ್:
ಆಸ್ಟ್ರೇಲಿಯಾ 17 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 158.
ಗ್ಲೇನ್ ಮ್ಯಾಕ್ಸ್ ವೆಲ್ 46
ಕ್ರಿಸ್ ಲೈನ್ 37
ಸ್ಟಾನಿಸ್ 33

ಬೌಲಿಂಗ್: ಕುಲದೀಪ್ ಯಾದವ್ 24-2

ಭಾರತ 17 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169
ಶಿಖರ್ ಧವನ್ 76
ದಿನೇಶ್ ಕಾರ್ತಿಕ್ 30.
ರಿಷಬ್ ಪಂತ್ 20

ಬೌಲಿಂಗ್:
ಆಡಮ್ ಝಮ್ಪಾ 22-2
ಸ್ಟಾನಿಸ್ 24-2

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top