fbpx
ಮನೋರಂಜನೆ

ಕಿರುತೆರೆಗೆ ಬಂದೇ ಬಿಟ್ಟ ಬ್ಲಾಕ್ ಬಸ್ಟರ್ ‘ಅಯೋಗ್ಯ’- ಯಾವತ್ತೂ ಪ್ರಸಾರ ಗೊತ್ತಾ?

ನೀನಾಸಂ ಸತೀಶ್ ಅಭಿನಯದ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ‘ಅಯೋಗ್ಯ’ ಚಿತ್ರ ಕಿರುತೆರೆಗೆ ಲಗ್ಗೆಯಿಡಲು ಸಜ್ಜಾಗಿದೆ. ಅಭೂತಪೂರ್ವ ಗೆಲವನ್ನು ದಾಖಲಿಸಿರುವ ಟಗರು ಚಿತ್ರದ ಸ್ಯಾಟಲೈಟ್ ಹಕ್ಕುಗಳನ್ನು ದಾಖಲೆಯ ಮೊತ್ತಕ್ಕೆ ಖರೀಧಿಸಿದ್ದ ಕಲರ್ಸ್ ಕನ್ನಡ ಸಿನಿಮಾವನ್ನು ಕಿರುತೆರೆಯಲ್ಲಿ ಪ್ರಸಾರ ಮಾಡಲಿದೆ. ಈ ಮೂಲಕ ತಿಯೇಟರ್ ನಲ್ಲಿ ಚಿತ್ರವನ್ನು ನೋಡಲು ಮಿಸ್ ಮಾಡಿಕೊಂಡವರಿಗೆ ಚಿತ್ರವನ್ನು ನೋಡಲು ಒಳ್ಳೆಯ ಅವಕಾಶ ಸಿಗುತ್ತಿದ್ದು ಚಿತ್ರವನ್ನು ನೋಡಿರೋರಿಗೆ ಮತ್ತೊಮ್ಮೆ ನೋಡೋ ಚಾನ್ಸ್ ಸಿಗುತ್ತಿದೆ..

 

 

ಈ ಬಗ್ಗೆ ಅದಾಗಲೇ ಪ್ರೋಮೋಗಳು ಕೂಡ ಸದ್ದು ಮಾಡುತ್ತಿದ್ದು ಇದೇ ಭಾನುವಾರ (ಡಿಸೆಂಬರ್ 25) ಸಂಜೆ 4.30ಕ್ಕೆ ಚಿತ್ರ ಪ್ರಸಾರವಾಗಲಿದೆ.. ಈ ಮೂಲಕ ರಚಿತಾ ರಾಮ್ ಮತ್ತು ಸತೀಶ್ ನಡುವಿನ ಕತೆಯನ್ನ ಮನೆಯಲ್ಲೇ ಕೂತು ನೋಡೋ ಚಾನ್ಸ್ ಸಿಗುತ್ತಿದೆ.

‘ಅಯೋಗ್ಯ’ ಮಹೇಶ್ ಕುಮಾರ್ ನಿರ್ದೇಶನದ ಮೊದಲ ಸಿನಿಮಾವಾಗಿದ್ದು, ಇದು ಅವರಿಗೆ ಮೊದಲ ಸಿನಿಮಾ.. ಅಯೋಗ್ಯ ಸಿನಿಮಾ ಶತದಿನೋತ್ಸವ ಆಚರಿಸಿಕೊಂಡಿದ್ದು ಮೊದಲ ಪ್ರಯತ್ನದಲ್ಲಿ ಮಹೇಶ್ ಕುಮಾರ್ ಗೆದ್ದಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top