fbpx
ಮನೋರಂಜನೆ

1,398 ರೈತರ ಕೋಟ್ಯಂತರ ರೂ ಸಾಲ ತೀರಿಸಿ ಮಾದರಿಯಾದ ಬಿಗ್ ಬಿ ಅಮಿತಾಭ್ ಬಚ್ಚನ್.

ಬಾಲಿವುಡ್‌ನ ಮೆಗಾಸ್ಟಾರ್‌ ಅಮಿತಾಭ್‌ ಬಚ್ಚನ್‌ ಅವರು ಉತ್ತರ ಪ್ರದೇಶದ 1398 ರೈತರ ₹4.05 ಕೋಟಿ ಸಾಲ ತೀರಿಸಿದ್ದಾರೆ. ಇದಕ್ಕಿಂತ ಮೊದಲು ಬಚ್ಚನ್‌ ಅವರು ಮಹಾರಾಷ್ಟ್ರದ 350 ರೈತರ ಸಾಲ ಮರುಪಾವತಿಗೆ ಸಹಾಯ ಮಾಡಿದ್ದರು.

ಈ ಕುರಿತು ತಮ್ಮ ಬ್ಲಾಗ್‍ನಲ್ಲಿ ಮಾಹಿತಿ ನೀಡಿದ್ದು, ಆಯ್ದ 70 ರೈತರಿಗೆ ವೈಯಕ್ತಿಕವಾಗಿ ಬ್ಯಾಂಕ್ ಸಾಲಮರುಪಾವತಿ ಮಾಡಿರುವ ಪತ್ರಗಳನ್ನು ಹಸ್ತಾಂತರಿಸಲು ಮುಂಬೈಗೆ ಬರಲು ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿ ಸಿಲುಕಿದ್ದ ಹಲವು ರೈತರಿಗೆ ಸಹಾಯ ನೀಡಿದ್ದು, ಜನ್ಮ ನೀಡಿದ ನೆಲದ ಋಣ ತೀರಿಸಲು ಮುಂದಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮಿತಾಬ್ ರೈತರ ಹೊರೆ ತಗ್ಗಿಸುವ ಆಸೆಯಿಂದ ಈ ಕೆಲಸಕ್ಕೆ ಮುಂದಾದೆ. ಕೆಲಸ ಪೂರ್ಣವಾದಾಗ ತುಂಬ ನೆಮ್ಮದಿ ಸಿಕ್ಕಿತು ಎಂದು ಅವರು ಬರೆದುಕೊಂಡಿದ್ದಾರೆ.. ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾ ಬಂದ ಹಣಕ್ಕೆ ಲೆಕ್ಕಾ ಬರೆಯುತ್ತಾ ಕೂರುವ ಅನೇಕ ನಟರಿಗೆ ಅಮಿತಾಬ್ ಬಚ್ಚನ್ ಮಾದರಿಯಾಗಿದ್ದಾರೆ ಎಂದರೆ ಅತಿಶಯೋಕ್ತಿಯಾಗಲಾರದು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top