fbpx
ರಾಜಕೀಯ

ಟಿಪ್ಪು ಹೆಸರಲ್ಲಿ ₹1 ಕೋಟಿ ಮೌಲ್ಯದ ರಾಷ್ಟ್ರ ಪ್ರಶಸ್ತಿ ಘೋಷಿಸಬೇಕು – ವಾಟಾಳ್​ ನಾಗರಾಜ್

ಭಾರೀ ವಿವಾದಕ್ಕೀಡಾಗಿಡಿದ್ದ ಟಿಪ್ಪು ಜಯಂತಿ ಕಾರ್ಯಕ್ರಮವನ್ನು ಸರ್ಕಾರ ಮಾಡಿಯೇ ತೀರಿದೆ. ಆದರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಟಿಪ್ಪು ಜಯಂತಿ ಕುರಿತ ರಾಜ್ಯ ಸರ್ಕಾರದ ಅಧಿಕೃತ ಕಾರ್ಯಕ್ರಮದಿಂದ ದೂರ ಉಳಿಡಿದ್ದು ಎಲ್ಲರಿಗು ಗೊತ್ತೇ ಇದೆ. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರಿಬ್ಬರೂ ಗೈರು ಹಾಜರಾಗಿದ್ದಾರೆ.

 

ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಟಿಪ್ಪು ಜಯಂತಿ ಆಚರಣೆ ಬಗ್ಗೆ ಟೀಕಿಸಿದ್ದ ಕುಮಾರಸ್ವಾಮಿ, ಈಗಲೂ ಅದೇ ನಿಲುವುವನ್ನ ಕಾಯ್ದುಕೊಂಡಿದ್ದಾರಾ? ಹಾಗಾದ್ರೆ ಸಮ್ಮಿಶ್ರ ಸರ್ಕಾರ ವಿವಾದಾತ್ಮಕ ನಿರ್ಧಾರಕ್ಕೆ ಹೆಚ್ ಡಿಕೆ ಸೈಲೆಂಟ್ ಆಗಿಬಿಟ್ಟರಾ? ಅನ್ನೋ ಪ್ರಶ್ನೆ ಮೇಲೆ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.. ಮೈಸೂರಿನ ಸುಲ್ತಾನ್​ರನ್ನು ಆರಾಧನೆ ಮಾಡಿದವರಿಗೆ ದುರಾದೃಷ್ಟ ಬೆನ್ನು ಬೀಳಲಿದೆ ಎಂಬ ಅಭಿಪ್ರಾಯವೇ ಅವರನ್ನು ಟಿಪ್ಪು ಜಯಂತಿಯಿಂದ ದೂರ ಉಳಿದುಕೊಳ್ಳಲು ಕಾರಣವಾಗಿದೆಯಂತೆ.

 

ಹೀಗಿರುವಾಗ ಕೆನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ‘ ಟಿಪ್ಪು ದೇಶಕ್ಕಾಗಿ ವೀರಾವೇಶದಿಂದ ಹೋರಾಡಿದ ನಾಯಕ. ಟಿಪ್ಪು ಪ್ರತಿಮೆಯನ್ನ ಪಾರ್ಲಿಮೆಂಟ್ ಮುಂದೆ ಸ್ಥಾಪಿಸಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್​ ನಾಗರಾಜ್​ ಹೇಳಿದ್ದಾರೆ. ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಗುಂಬಜ್​ರ್​ನಲ್ಲಿರುವ ಟಿಪ್ಪು ಸಮಾಧಿಗೆ ಪೂಜೆ ಸಲ್ಲಿಸಿ, ನಮನ ಸಲ್ಲಿಸಿದ್ರು. ಬಳಿಕ ಮಾತನಾಡಿದ ಅವರು, ​ ಟಿಪ್ಪು ಒಬ್ಬ ಮಹಾನ್​ ನಾಯಕ. ಟಿಪ್ಪು ಹೆಸರಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಘೋಷಿಸಬೇಕು’ ಎಂದು ಆಗ್ರಹಿಸಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top