fbpx
ಉಪ್ಪಯುತ್ತ ಮಾಹಿತಿ

ಪ್ಯಾನ್ ಕಾರ್ಡ್ ಮಾಡಿಸಲು ಹೊರಟಿದ್ದೀರಾ? ಪಾನ್ ಕಾರ್ಡ್ ಅರ್ಜಿಯಲ್ಲಿ ಬಂದಿರುವ ಈ ಹೊಸ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಿ!

ಪಾನ್ ಕಾರ್ಡ್ ಮಾಡಿಸಿಲ್ಲವೇ ? ಈಗ ಪಾನ್ ಕಾರ್ಡ್ ಮಾಡಿಸಲು ಹೊರಟಿದ್ದೀರಾ? ಹಾಗಾದರೆ ಪಾನ್ ಕಾರ್ಡ್ ಗಾಗಿ ಹಾಕುವ ಅರ್ಜಿಯಲ್ಲಿ ಆಗಿರಿವ ಬದಲಾವಣೆಗಳನ್ನು ನೀವು ತಿಳಿದಿಕೊಳ್ಳಲೇ ಬೇಕು.
 
ಬನ್ನಿ ಹಾಗಾದರೆ ಆದಾಯ ತೆರೆಗೆ ಇಲಾಖೆ ಮಾಡಿರುವ ಬದಲಾವಣೆಗಳನ್ನು ನೋಡೋಣ :

 

1. ಇನ್ನು ಮುಂದೆ ಪ್ಯಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವಾಗ ಅಲ್ಲಿ ತಂದೆಯ ಹೆಸರನ್ನು ನಮೂದಿಸುವುದು ಕಡ್ಡಾಯವಲ್ಲ ಎಂದು ಮಂಗಳವಾರ ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಪಾನ್ ಕಾರ್ಡ್ ಅರ್ಜಿಗಳಲ್ಲಿ, ತಾಯಿಯು ಸಿಂಗಲ್ ಪೇರೆಂಟ್ ಆಗಿದ್ದಾರೆಯೇ ಎಂದು ಅರ್ಜಿದಾರರಲ್ಲಿ ಕೇಳಲಾಗುವುದು. ಹೌದಾದಲ್ಲಿ ಅರ್ಜಿದಾರರು ಕೇವಲ ತನ್ನ ತಾಯಿಯ ಹೆಸರನ್ನು ತಿಳಿಸಿದರೆ ಸಾಕು ಎಂದು ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿಯನ್ನು ಮಾಡಲಾದ ಅಧಿಸೂಚನೆಯಲ್ಲಿ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ತಿಳಿಸಿದೆ.

2. ಸದ್ಯ ಖಾಯಂ ಖಾತೆ ಸಂಖ್ಯೆ (ಪಾನ್) ಕಾರ್ಡ್ ನೀಡಲು ತಂದೆಯ ಹೆಸರನ್ನು ನೀಡುವುದು ಕಡ್ಡಾಯವಾಗಿದೆ. ತಿದ್ದುಪಡಿ ಮಾಡಲ್ಪಟ್ಟ ಹೊಸ ನಿಯಮವು ಡಿಸೆಂಬರ್ 5ರಿಂದ ಜಾರಿಗೆ ಬರಲಿದೆ. ಕೇವಲ ತಾಯಿಯಿಂದ ಪೋಷಿಸಲ್ಪಟ್ಟವರು ತಮ್ಮ ಅರ್ಜಿಯಲ್ಲಿ ತಂದೆಯ ಬದಲು ತಾಯಿಯ ಹೆಸರನ್ನು ಬರೆಯಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

 
ಹೊಸ ನಿಯಮದಲ್ಲಿ, ವಾರ್ಷಿಕ 2.5 ಲಕ್ಷ ರೂ. ಅಥವಾ ಅದಕ್ಕಿಂತ ಮೇಲ್ಪಟ್ಟು ಆರ್ಥಿಕ ವ್ಯವಹಾರ ನಡೆಸಿರುವ ಸಂಸ್ಥೆಗಳು ಪಾನ್ ಕಾರ್ಡ್‌ಪಡೆದುಕೊಳ್ಳುವುದನ್ನುಕಡ್ಡಾಯ ಮಾಡಲಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top