fbpx
ರಾಜಕೀಯ

ಸಂಸದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಂಸ ತಿನ್ನುತ್ತಿರುವ ಫೋಟೋಶಾಪ್ಡ್ ಇಮೇಜ್ ವೈರಲ್

ಮಧ್ಯಪ್ರದೇಶದಲ್ಲಿ ರಾಜಕೀಯ ಪ್ರಚಾರವು ತೀವ್ರ ಗತಿಯಲಿದ್ದು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರು ಮಾಂಸವನ್ನು ಸೇವಿಸುತ್ತಿರುವ ಇಮೇಜ್ ಒಂದು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಈ ಇಮೇಜ್ ವೈರಲ್ ಆಗುತ್ತಿದ್ದಂತೆಯೇ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರನ್ನು ಕೆಲವರು ತರಾಟೆಗೆ ತೆಗೆದು ಕೊಂಡಿದ್ದು, ಜನರ ಮುಂದೆ ಅಪ್ರತಿಮ ಹಿಂದೂ ಎಂದು ಹೇಳಿಕೊಳ್ಳುವುದು ಮತ್ತು ಹಿಂದೆ ಈ ರೀತಿ ಮಾಂಸ ತಿನ್ನುವುದು ಎಂದು ತುಚ್ಛವಾಗಿ ಅವಹೇಳನ ಮಾಡಿದ್ದಾರೆ.

 

ಹಾಗಾದರೆ ಸತ್ಯವೇನು?

 

ಆಲ್ಟ್ ನ್ಯೂಸ್ ಚಿತ್ರದ ಮೂಲವನ್ನು ಹುಡುಕಲು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಅನ್ನು ಬಳಸಿದೆ. ಮೂಲ ಚಿತ್ರ ದಿ ಟ್ರಿಬ್ಯೂನ್ ಲೇಖನದಲ್ಲಿ ಪ್ರಕಟಗೊಂಡಿದ್ದಾಗಿದೆ.

 

 

ವರದಿಯ ಪ್ರಕಾರ, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಚುನಾವಣೆಯ ಸಮಯದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಹೆಲಿಕ್ಯಾಪ್ಟರ್ ಬಳಸುತ್ತಾರೆಂದು
ಮತ್ತು ಎಲ್ಲಿ ಹೋದರು ಮನೆ ಊಟವನು ತೆಗೆದುಕೊಂಡು ಹೋಗುತ್ತಾರೆಂದು ಈ ಟ್ರಿಬ್ಯೂನ್ ಲೇಖನದಲ್ಲಿ ತಿಳಿಸಲಾಗಿದೆ. ಟ್ರಿಬ್ಯೂನ್ ಲೇಖನದಲ್ಲಿ ಅವರು ಅಂತಹ ಒಂದು ಹೆಲಿಕಾಪ್ಟರ್ ಸವಾರಿಯಲ್ಲಿ ತಮ್ಮ ಊಟ ವನ್ನು ,ಸೇವಿಸುತ್ತಿರುವ ಫೋಟೋವೊಂದು ಪ್ರಕಟಿತಗೊಂಡಿದ್ದು. ಕಿಡಿಗೇಡಿಗಳು ಫೋಟೋಶಾಪ್ ಟೂಲ್ ಬಳಸಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸೇವಿಸುತ್ತಿದ್ದ ಸಸ್ಯಾಹಾರಿ ಊಟವನ್ನು ಮಾಂಸಾಹಾರವನ್ನಾಗಿ ಮಾರ್ಪಾಟು ಮಾಡಿದ್ದಾರೆ.

 

ಕೊನೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಯಾವುದೇ ರೀತಿಯ ಮಾಂಸಾಹಾರವನ್ನು ಸೇವಿಸಿಲ್ಲ ಎಂಬುದು ಖಾತ್ರಿಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top