fbpx
ಮನೋರಂಜನೆ

ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡುಗಿಂತ ಅವರ 3 ವರ್ಷದ ಮೊಮ್ಮಗನೇ 6 ಪಟ್ಟು ಶ್ರೀಮಂತ.

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ಬಾಯ್ಡು ಆಸ್ತಿಗಿಂತ ಅವ್ರ ಮೊಮ್ಮಗನ ಆಸ್ತಿಯೇ ಹೆಚ್ಚಾಗಿದೆ. ಚಂದ್ರಬಾಬು ನಾಯ್ಡು ಅವರು ತಮ್ಮ ಆಸ್ತಿ ವಿವರವನ್ನು ಘೋಷಿಸಿಕೊಂಡಿದ್ದಾರೆ. ಚಂದ್ರಬಾಬು ನಾಯ್ಡು ಅವರ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ 46 ಲಕ್ಷದಷ್ಟು ಏರಿಕೆಯಾಗಿದೆ.

ಆಸ್ತಿ ಘೋಷಣೆಯ ಪ್ರಕಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಳಿ 2.99 ಕೋಟಿ ಮೊತ್ತದ ಆಸ್ತಿ ಇದ್ದು, ಅವರ ಮೂರು ವರ್ಷದ ಮೊಮ್ಮಗ ನರ ದೇವಾನ್ಶ್ ಅವರು 18.71 ಕೋಟಿ ಮೊತ್ತದ ಆಸ್ತಿ ಒಡೆಯರಾಗಿದ್ದಾರೆ. ತಾತನಿಗಿಂತ ಮೊಮ್ಮಗನ ಆಸ್ತಿ 6 ಪಟ್ಟು ಹೆಚ್ಚಿನ ಪ್ರಮಾಣದಲ್ಲಿದೆ.

ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಸ್ವತಃ ಚಂದ್ರಬಾಬು ನಾಯ್ಡು ಅವರೇ ಕಳೆದ ಎಂಟು ವರ್ಷಗಳಿಂದಲೂ ಪ್ರತಿವರ್ಷ ಸ್ವಯಂ ಘೋಷಣೆ ಮಾಡಿಕೊಳ್ಳುತ್ತ ಬಂದಿದ್ದಾರೆ. ಅದರಂತೆ ಅವರ ಪುತ್ರ ನರ ಲೋಕೇಶ್‌ ಬುಧವಾರ ಘೋಷಿಸಿದ ಪ್ರಕಾರ ಆಸ್ತಿ ಮೌಲ್ಯ ಏರಿಕೆಯಾಗಿದೆ.. ನಾಯ್ಡು ಅವರ ಮೊಮ್ಮಗ 16.17 ಕೋಟಿ ರೂ. ಮೌಲ್ಯದ ಮನೆಯನ್ನು ಹೈದರಾಬಾದ್‍ನ ಜುಬ್ಲಿ ಹಿಲ್ಸ್ ನಲ್ಲಿ ಹೊಂದಿದ್ದು, 2.49 ಕೋಟಿ ರೂ. ಠೇವಣಿ ಇಟ್ಟಿದ್ದಾರೆ.

ಇನ್ನು ಚಂದ್ರಬಾಬು ನಾಯ್ಡು ಅವರ ಪತ್ನಿ ಭುವನೇಶ್ವರಿ ದೇವಿ ಕುಟುಂಬದಲ್ಲಿ ಎಲ್ಲರಿಗಿಂತಲೂ ಶ್ರೀಮಂತೆಯಾಗಿದ್ದು ಅವರ ಆಸ್ತಿ ಮೊತ್ತ 31 ಕೋಟಿಯಷ್ಟಿದೆ. ಕಳೆದ ಬಾರಿ 25.41 ಕೋಟಿ ರೂ. ಇದ್ದ ಅವರ ಆಸ್ತಿ ಈಗ 31.01 ಕೋಟಿ ರೂ.ಗೆ ಏರಿಕೆಯಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top