fbpx
ರಾಜಕೀಯ

ರೈತ ಮುಖಂಡ ಅಶೋಕ್ ರವರ ಮನೆಯಲ್ಲಿ ಉಪಹಾರ ಸೇವಿಸಿದ್ದರಾ ಸಿ.ಎಂ?

ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದ ಗೇಟಿನ ಬೀಗವನ್ನು ಭಾನುವಾರ ಕಲ್ಲಿನಿಂದ ಜಜ್ಜಿ ಒಡೆಯಲು ಯತ್ನಿಸಿದ್ದ ರೈತ ಮುಖಂಡ ಅಶೋಕ ಯಮಕನಮರಡಿ ಅವರನ್ನು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡು, ಅವರನ್ನು ‘ಗೂಂಡಾ’ ಎಂದು ಕರೆದಿದ್ದಾರೆ.

ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಜನಜನಿತವಾಗುತ್ತಿದ್ದಂತೆಯೇ, ಕುಮಾರ ಸ್ವಾಮಿಯವರು ರೈತ ಮುಖಂಡ ಅಶೋಕ್ ಯಮನಕರಡಿ ಯವರೊಂದಿಗೆ ಇರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಅದಕ್ಕೆ ಲೈಕ್, ಶೇರ್ ಮತ್ತು ಕಮೆಂಟ್ ಗಳ ಸುರಿಮಳೆಯೇ ಆಗುತ್ತಿದೆ.

ಖಾನಾಪುರ ತಾಲ್ಲೂಕು ಗಂದಿಗವಾಡ ಗ್ರಾಮದ ಅಶೋಕ ಯಮಕನಮರಡಿ, ರೈತ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಹಾಗೂ ವಿವಿಧ ಹೋರಾಟಗಳಲ್ಲಿ ಅಶೋಕ ಯಮಕನಮರಡಿ ಭಾಗವಹಿಸುತ್ತಾರೆ ಸಹ.
ಈಚೆಗೆ ಬೆಳಗಾವಿಯಲ್ಲಿ‌ನ ಸುವರ್ಣ ವಿಧಾನಸೌಧದಲ್ಲಿ ಆಯೋಜಿಸಿದ್ದ ಜನತಾದರ್ಶನ ವೇಳೆ, ರೈತರು ನಡೆಸಿದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅವರಿಂದ ಮುಖ್ಯಮಂತ್ರಿ ಮನವಿಯನ್ನೂ ಸ್ವೀಕರಿಸಿದ್ದರು. ಇದಲ್ಲದೇ, 2 ವರ್ಷಗಳ ಹಿಂದೆ ಅಶೋಕ್ ರವರ ಮನೆಯಲ್ಲಿ ಕುಮಾರಸ್ವಾಮಿ ಉಪಾಹಾರ ಸೇವಿಸಿದ್ದರು ಎನ್ನಲಾದ ಪೋಟೊಗಳನ್ನೂ ಹಾಕಲಾಗಿದ್ದು, ಇದು ಎಲ್ಲೆಡೆ ವೈರಲ್ ಆಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top