ತಿಂಡಿ ತೀರ್ಥ

ಉತ್ತರ ಕರ್ನಾಟಕದ ಹಬ್ಬದ ಸ್ಪೆಷಲ್  ಸಿಹಿ ಖಾದ್ಯ   ‘ಮಾದಲಿ’ಮಾಡುವ ವಿಧಾನ

 ಸಿಹಿ ಖಾದ್ಯ   ‘ಮಾದಲಿಮಾಡುವ ವಿಧಾನ.

ಮಾಡಲು ಬೇಕಾಗುವ ಸಾಮಗ್ರಿಗಳು:

1 ಬಟ್ಟಲು ಗೋದಿ ಹಿಟ್ಟು
1 ಬಟ್ಟಲು ಸಣ್ಣ ರವೆ
1 1/2 ಬಟ್ಟಲು ಬೆಲ್ಲ(ಸಣ್ಣಗೆ ಪುಡಿ ಮಾಡಿಕೊಂಡಿರುವುದು)
4 ಏಲಕ್ಕಿ, ಸ್ವಲ್ಪ ಶುಂಟಿಯ ಪುಡಿ

1 ಬಟ್ಟಲು ತುರಿದ ಒಣಕೊಬ್ಬರಿ
ಸ್ವಲ್ಪ ಹುರಿದುಕೊಂಡಿರುವ ಗಸಗಸೆ
ಸ್ವಲ್ಪ ಪುಟಾಣಿ

 

Image result for maldi recipe

 

 

ಮಾಡುವ ಬಗೆ:ಗೋದಿಯ ಹಿಟ್ಟು, ರವೆ ಮತ್ತು ಚಿಟಿಕೆ ಉಪ್ಪು ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸುವದು. 10 ನಿಮಿಶ ಬಿಟ್ಟು ಈ ಹಿಟ್ಟಿನಿಂದ ಸ್ವಲ್ಪ ದಪ್ಪನೆಯ ಚಪಾತಿ ತಯಾರಿಸಿಕೊಂಡು, ಚೆನ್ನಾಗಿ ಕೆಂಬಣ್ಣ ಬರುವರೆಗೆ ಬೇಯಿಸಿಕೊಳ್ಳುವುದು.ತಯಾರಿಸಿದ ಚಪಾತಿಗಳನ್ನು ಸಣ್ಣಗೆ ಮುರಿದುಕೊಂಡು ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿಕೊಳ್ಳುವುದು.ಈ ಪುಡಿಗೆ ಬೆಲ್ಲ, ಏಲಕ್ಕಿ, ಶುಂಟಿ, ತುರಿದ ಕೊಬ್ಬರಿ, ಪುಟಾಣಿ, ಗಸಗಸೆ ಎಲ್ಲವನ್ನು ಸೇರಿಸಿಕೊಂಡು ಮಿಶ್ರಣ ಮಾಡಿಕೊಂಡರೆ ಮಾದಲಿ ತಯಾರು. ಇದಕ್ಕೆ ಸ್ವಲ್ಪ ತುಪ್ಪ ಹಾಕಿಕೊಂಡು ತಿಂದರೆ ತುಂಬಾ ರುಚಿಕರವಾಗಿರುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top