fbpx
ಸಮಾಚಾರ

ಮುಂದಿನ ವರ್ಷ ದೇಶದಲ್ಲಿ ಈಗಿರುವ ಏಟಿಎಂಗಳ ಪೈಕಿ ಅರ್ಧದಷ್ಟು ಏಟಿಎಂಗಳು ಬಂದ್ ಆಗಲಿವೆಯಂತೆ

ನೀವು ಏಟಿಎಂ ಬಳಕೆದಾರರೆ? ಇಲ್ಲಿದೆ ನಿಮಗೊಂದು ಕಹಿ ಸುದ್ದಿ. ಮುಂದಿನ ವರ್ಷ ಎಟಿಎಂ ಬಳಕೆದಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಲಿದೆಯಂತೆ! ಏಕೆಂದರೆ ದೇಶದಲ್ಲಿ ಈಗಿರುವ ಎಟಿಎಂಗಳ ಪೈಕಿ ಅರ್ಧದಷ್ಟು ಎಟಿಎಂಗಳನ್ನು ಬಂದ್​ ಮಾಡುವ ಸಾಧ್ಯತೆ ಹೆಚ್ಚಾಗಿದೆಯಂತೆ. ನಮ್ಮ ದೇಶದಲ್ಲಿ ಬೀದಿ ಬೀದಿಗೊಂದು ಏಟಿಎಂ ಇದ್ದು ಈಗಾಗಲೇ ಸುಮಾರು 2,38,000 ಎಟಿಎಂ ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ 2,38,000 ಎಟಿಎಂ ಗಳಲ್ಲಿ ಸುಮಾರು 1,13,000 ಎಟಿಎಂಗಳ ಬಾಗಿಲುಗಳು ಬಂದ್​ ಆಗಲಿವೆಯಂತೆ ಎಂಬ ಸುದ್ದಿ ಎಲ್ಲೆಡೆ ಕೇಳಿಬರುತ್ತಿದ್ದು,ಏಟಿಎಂ ಬಳಕೆದಾರಲ್ಲಿ ಇದು ಅಂತಕವನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು.

ಎಟಿಎಂಗಳನ್ನ ಬಂದ್​ ಮಾಡುವ ಉದ್ದೇಶವನ್ನು ಎಟಿಎಂ ಉದ್ದಮೆಯ ಒಕ್ಕೂಟವೇ ತಿಳಿಸಿದ್ದು ಅದಕ್ಕೆ ಸ್ಪಷ್ಟ ಕಾರಣವನ್ನು ಸಹ ನೀಡಿದೆ.

ಹಾಗಾದರೆ ಆ ಕಾರಣ ಏನು ಗೊತ್ತೇ ?

ಈಗಾಗಲೇ ಕೇಂದ್ರ ಸರ್ಕಾರ ಸೂಚನೆ ಎಟಿಎಂ ಹಾರ್ಡ್‌ವೇರ್‌ ಮತ್ತು ಸಾಫ್ಟ್​ವೇರ್​ಗಳನ್ನು ಮೇಲ್ದರ್ಜೆಗೇರಿಸುವಂತೆ ಆದೇಶ ನೀಡಿರುವ ಸಲುವಾಗಿಯಂತೆ ಜೊತೆಗೆ ಗುತ್ತಿಗೆದಾರರಿಗೆ ಕೇಂದ್ರ ಗೃಹ ಖಾತೆ ನೀಡಿರುವ ಕೆಲವು ಮಾರ್ಗದರ್ಶಿಗಳು, ಹಾಗೂ ಹಣ ತುಂಬುವ ಕ್ಯಾಸೆಟ್‌ ಸ್ವಾಪ್‌ ಕುರಿತ ಸೂಚನೆ ದೇಶದಲ್ಲಿ ಎಟಿಎಂಗಳನ್ನು ಬಂದ್​ ಮಾಡಲು ಕಾರಣಗಳಾಗಿವೆಯಂತೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top