fbpx
ಸಮಾಚಾರ

“ಇನ್ನು ಮುಂದೆ ನಾನು ಮಾಧ್ಯಮದವರ ಜತೆ ಮಾತನಾಡುವುದೇ ಇಲ್ಲ” ಸಿಎಂ ಎಚ್ಡಿಕೆ

ಇನ್ನು ಮುಂದೆ ನಾನು ಮಾಧ್ಯಮಗಳ ಜತೆ ಮಾತನಾಡುವುದಿಲ್ಲ. ನಾನು ವೇದಿಕೆ ಮೇಲೆ ಏನು ಮಾತನಾಡುತ್ತೇನೋ ಅಷ್ಟೆ. ಬೇಕಾದರೆ, ಬರೆದುಕೊಳ್ಳಿ, ಇಲ್ಲದಿದ್ದರೆ ಬಿಡಿ, ಇನ್ಮುಂದೆ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಪತ್ರಿಕಾಗೋಷ್ಠಿ ಮಾಡುವುದಿಲ್ಲ. ಅವರ ಜೊತೆ ಮಾತನಾಡುವುದು ಇಲ್ಲ” ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಹೇಳಿಕೆ ನೀಡಿದ್ದಾರೆ.

ಗುರುವಾರ ಬಡವರ ಬಂಧು ಯೋಜನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು “ಇತ್ತೀಚೆಗೆ ನಾನೇನು ಮಾತಾಡಿದರೆ ತಪ್ಪಾಗಿ ಬಿಂಬಿಸಲಾಗುತ್ತಿದೆ, ಇನ್ನು ನಾನೆಂದೂ ಪ್ರೆಸ್ ಮೀಟ್ ಮಾಡಲ್ಲ. ವೇದಿಕೆ ಮೇಲಷ್ತೇ ಮಾತನಾಡುವೆ. ಬೇಕಾದ ರೀತಿ ಬರೆದುಕೊಳ್ಳಿ” ಎಂದು ಮಾದ್ಯಮಗಳ ವಿರುದ್ಧ ಹರಿಹಾಯ್ದರು. ಮಾತು ಮುಂದುವರೆಸಿದ ಸಿಎಂ HDK “ನಾನು ಏನು ಮಾತನಾಡಬೇಕೆಂದು ಮಾಧ್ಯಮಗಳ ನೇತೃತ್ವದಲ್ಲಿ ಒಂದು ಸಮಿತಿ ಮಾಡಿ ಅವರಿಂದ ಸಲಹೆ ಪಡೆದು ಮಾತನಾಡಬೇಕಿದೆ” ಎಂದು ವ್ಯಂಗ್ಯವಾಡಿದ್ದಾರೆ.

ಯಶವಂತಪುರದ ತರಕಾರಿ ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ‘ಬಡವರ ಬಂಧು’ ಮೊಬೈಲ್ ಬ್ಯಾಂಕಿಂಗ್ ವಾಹನಕ್ಕೆ ಚಾಲನೆ ನೀಡುವ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಯೋಜನೆಗೆ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರಲ್ಲದೆ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ, ಮೇಯರ್ ಗಂಗಂಬಿಕೆ, ಹಿರಿಯ ಅಧಿಕಾರಿಗಳಾದ ನಾಗಲಾಂಬಿಕೆದೇವಿ, ಎಂ.ಕೆ.ಐಯ್ಯಪ್ಪ, ಶಾಸಕರಾದ ಕೆ.ಗೋಪಾಲಯ್ಯ, ಮುನಿರತ್ನ, ಮೇಲ್ಮನೆ ಸದಸ್ಯ ಶರವಣ ಸೇರಿ ಅನೇಕ ಗಣ್ಯರು ಭಾಗವಹಿಸಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top