fbpx
ಭವಿಷ್ಯ

ಈ ನಾಲ್ಕು ರಾಶಿಯವರು ಆದಷ್ಟು ಹಣಕಾಸಿನ ಸಾಲದ ವಿಚಾರದಲ್ಲಿ ಎಚ್ಚರಿಕೆಯಿಂದ ಇರ್ಬೇಕು , ಇವರಿಗೆ ಸಾಲ ತೀರಿಸೋದು ತುಂಬಾ ಕಷ್ಟ ಆಗ್ಬಹುದು

ಸಾಲ ಮಾಡದ ಜನರೇ ಇರುವುದಿಲ್ಲ. ಆದರೆ ಕೆಲವರು ಎಷ್ಟೇ ಸಾಲ ಮಾಡಿದರೂ ಅದನ್ನು ಬೇಗ ತೀರಿಸಿ ಋುಣ ಮುಕ್ತರಾಗುತ್ತಾರೆ. ಇನ್ನೂ ಕೆಲವರು ಜನ್ಮಪೂರ್ತಿ ಸಾಲ ತೀರಿಸಲು ಆಗದೇ, ಸಾಲದ ಸುಳಿಯಲ್ಲಿ ಸಿಕ್ಕಿ ನರಳುತ್ತಿರುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆ ವ್ಯಕ್ತಿಗಳ ರಾಶಿ ಮತ್ತು ಆ ರಾಶಿಯವರ ಆಡಳಿತ ಗ್ರಹಗಳು ಅಂದರೆ ಜನ್ಮ ಕುಂಡಲಿ ಇದಕ್ಕೆ ಪ್ರಮುಖ ಕಾರಣವಾಗಿರುತ್ತದೆ.ಅದೇ ರೀತಿ ಈ ನಾಲ್ಕು ರಾಶಿಯವರು ಸಾಲ ಮಾಡಬಾರದು, ಮಾಡಿದರೆ ಜನ್ಮಪೂರ್ತಿ ಕಷ್ಟಪಟ್ಟರೂ ಸಾಲ ಮಾತ್ರ ತೀರುವುದಿಲ್ಲ. ಸಾಲವನ್ನು ಅವರ ಸ್ವಂತ ಅಂದರೆ ಶುಭ ಕಾರ್ಯಕ್ಕೂ ಇಲ್ಲ ವ್ಯಾಪಾರ, ಉದ್ಯೋಗ ಆರಂಭಿಸುವುದಕ್ಕೂ ಇರಬಹುದುಆದರೆ ನಮ್ಮ ಹಿರಿಯರು ಮೊದಲೇ ಹೇಳಿದ್ದಾರೆ. “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ನಮ್ಮ ಹಿರಿಯರು ಹೇಳಿರುವ ಒಂದೊಂದು ಗಾದೆ ಮಾತನ್ನು ಅರ್ಥ ಮಾಡಿಕೊಂಡರೆ, ನಮ್ಮ ಜೀವನದಲ್ಲಿ ಯಾವ ಕಷ್ಟವೂ ಬರುವುದೇ ಇಲ್ಲ. ಬಂದರೂ ಮಂಜಿನಂತೆ ಕರಗಿ ಹೋಗುವುದು. ಯಾವತ್ತೂ “ವೇದ ಸುಳ್ಳಾದರೂ ಗಾದೆ ಸುಳ್ಳಾಗಲ್ಲ” ಎಂಬುವುದು ಅಕ್ಷರಶಃ ನಿಜ .

 

 

 

ಇನ್ನೂ ಯಾವ ಯಾವ ರಾಶಿಯವರು ಸಾಲವನ್ನು ಮಾಡಬಾರದು ಎಂದು ನೋಡುವುದಾದರೆ. ಮಕರ ರಾಶಿ, ವೃಷಭ ರಾಶಿ, ಕಟಕ ರಾಶಿ ಮತ್ತು ಧನಸ್ಸು ರಾಶಿ. ಈ ನಾಲ್ಕು ರಾಶಿಯವರು ಸಾಲವನ್ನು ಮಾಡಲೇಬಾರದು. ಮಾಡಿದರೆ ಸಾಲವೂ ಮುಗಿಯಲ್ಲ .ಅದರ ಬಡ್ಡಿಯನ್ನು ಕಟ್ಟುವುದಕ್ಕೆ ಆಗದೇ ಜೀವನ ಪೂರ್ತಿ ಸಾಲದ ಬಾಧೆಯಲ್ಲಿ ನರಳಬೇಕಾಗುತ್ತದೆ. ಇವರು ಸ್ವಂತ ಉಪಯೋಗಕ್ಕೆ ಸಾಲ ಮಾಡಿದರೆ ಮಾತ್ರ ಕಷ್ಟವಲ್ಲ, ಬೇರೆಯವರು ಮಾಡುವ ಸಾಲಕ್ಕೆ ಶಾಮೀಲಾದವರು ಸಹ ಕಷ್ಟಕ್ಕೆ ಸಿಲುಕುವವರು. ಹೇಗೆ ಎಂದರೆ ಇವರನ್ನು ಜಮೀನು ಮಾರಿ ಸಾಲ ಪಡೆದವರು, ಸಾಲ ಪಡೆದವರ ಸಾಲವನ್ನು ಹಿಂದಿರುಗಿಸದೆ ಇವರೇ ಅವರ ಸಾಲದ ಹೊರೆಯನ್ನು ಭರಿಸುವಂತೆ ಮಾಡಬಹುದು. ಆದ್ದರಿಂದ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಮಿಥುನ ಮತ್ತು ಕನ್ಯಾ ರಾಶಿಯವರು ಸಾಲವನ್ನು ಮಾಡುತ್ತಾರೆ. ಆದರೆ ಇವರು ಸಾಲ ಮಾಡುವ ಮೊದಲೇ ಸಾಲ ತೀರಿಸುವ ತಯಾರಿಯನ್ನು ಮಾಡಿಕೊಂಡಿರುತ್ತಾರೆ. ಇನ್ನು ಯಾರೇ ಆಗಲಿ ಸಾಲದ ಸುಳಿಯಲ್ಲಿ ಸಿಕ್ಕಿ ಕೊಂಡಿರುವವರು ಈ ರೀತಿ ಪರಿಹಾರ ಮಾಡಿಕೊಂಡರೆ ಬೇಗ ಋುಣ ಮುಕ್ತರಾಗಬಹುದು.ಏನೆಂದು ನೋಡೋಣ ಮೊದಲು ನಿಮಗೆ ಮನಸ್ಸಿನಲ್ಲಿ ಧೈರ್ಯ ಇರಬೇಕು. ಜೊತೆಗೆ ದೇವರ ಅನುಗ್ರಹ ಕೂಡ ಇರಬೇಕು. ದೇವರ ಅನುಗ್ರಹ ಪಡೆಯಲು ಪೂಜೆ ಮಾಡುವಾಗ ಈ ಮಂತ್ರವನ್ನು ಪಠಿಸಿ“ಮಂಗಲೋ ಭೂಮಿ ಪುತ್ರಶ್ಚ ಋುಣಹಾರ್ತಾ ಧನಪ್ರದಃ ಅಂಗಾರಕೋ ಯಮಶ್ಚವ ಸರ್ವರೋಗಪಹಾರಕಃ ಸರ್ವ ದಾರಿದ್ರ್ಯಾಯ ನಿವಾರಣಾಯ ಮಮ ಋಣ ದಹನಾಯ ನಮಃ”ಬಡ್ಡಿ ಕಟ್ಟಲು ಆಗುತ್ತಿಲ್ಲ, ಸಾಲ ಏನು ಮಾಡಿದರೂ ತೀರುತ್ತಿಲ್ಲ, ಸಾಲದ ಬಾಧೆ ಹೆಚ್ಚಾಗುತ್ತಲೇ ಇದೆ ಎನ್ನುವವರು ಕಮಲ ಬೀಜದ ಮಾಲೆಯನ್ನು  ಐವತ್ನಾಲ್ಕು ಅಥವಾ ನೂರಾ ಎಂಟು ಬೀಜಗಳಿಂದ ಮಾಡಿರುವುದನ್ನು ಕೊರಳಿಗೆ ಹಾಕಿಕೊಳ್ಳಿ ಬೇಗನೆ ಪರಿಹಾರ ಸಿಗುವುದು .

ಹೆಣ್ಣು ಮಕ್ಕಳು ಏನಾದರೂ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದರೆ. ಅಥವಾ ಚೀಟಿ ಅದು ಇದು ಕಷ್ಟದಲ್ಲಿ ಸಿಲುಕಿದ್ದರೆ , ಅಂಥವರು ಪ್ರತಿ ಶುಕ್ರವಾರ ತಾಂಬೂಲದ ಚೊಂಬಿನಲ್ಲಿ ನೀರನ್ನು ತುಂಬಿ ಅದಕ್ಕೆ ಚಿಟಕಿ ಉಪ್ಪು ಸ್ವಲ್ಪ ಕಪ್ಪು ಎಳ್ಳು ಮತ್ತು ಒಂದು ರೂಪಾಯಿ ನಾಣ್ಯ ಹಾಕಿ ದೇವರ ಮುಂದೆ ಇಟ್ಟು ಪೂಜೆ ಮಾಡಿ.ನಂತರ ಮಾರನೇ ದಿನ ಅಂದರೆ ಶನಿವಾರ ಸಂಜೆ ಗೋಧೂಳಿ ಸಮಯ ಅಂದರೆ ಸಂಜೆ ಆರು ಗಂಟೆಯಿಂದ ಏಳು ಗಂಟೆಯ ಸಮಯದಲ್ಲಿ ಆ ನೀರನ್ನು ಬನ್ನಿ ಮರ ಅಥವಾ ತೆಂಗಿನ ಮರದ ಬುಡಕ್ಕೆ ಹಾಕಿ ಬರಬೇಕು.ಏನು ಮಾಡಿದರೂ ಸಾಲ ತೀರುತ್ತಿಲ್ಲ ಎಂದರೆ ಗೋಮಾತೆ ಎಂದರೆ ಮುಕ್ಕೋಟಿ ದೇವರುಗಳು ಗೋವಿನಲ್ಲಿ ನೆಲೆಸಿದ್ದಾರೆ. ಎಂದು ನಮ್ಮ ಹಿಂದೂ ಪುರಾಣದಲ್ಲಿ ಹೇಳಿದ್ದಾರೆ. ಅಂತಹ ಗೋಮಾತೆಯ ಬಾಲದ ಒಂದು ಕೂದಲನ್ನು ತೆಗೆದುಕೊಂಡು ನಿಮ್ಮ ಪರ್ಸ್ ಅಥವಾ ಬ್ಯಾಗಿನಲ್ಲಿ ಇಟ್ಟುಕೊಳ್ಳಬೇಕು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top