fbpx
ಸಮಾಚಾರ

40 ವರ್ಷಗಳ ಹಿಂದೆ ಇಂದಿರಾ ಗಾಂಧಿ ಕನ್ನಡದಲ್ಲಿ ಪ್ರಮಾಣ ವಚನ ತೆಗೆದುಕೊಂಡಿದ್ದರ ಬಗ್ಗೆ ನಿಮಗೆ ಗೊತ್ತಾ?

ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ನಮ್ಮ ದೇಶದ ಪ್ರಥಮ- ಏಕೈಕ ಮಹಿಳಾ ಪ್ರಧಾನ ಮಂತ್ರಿಯಾಗಿ ಮತ್ತು ಪ್ರಭಾವಿ ನಾಯಕಿಯಾಗಿ ಇಂದಿರಾ ಗಾಂಧಿ ಭಾರತದ ಸ್ತ್ರೀ ಸಮುದಾಯದ ಸಂಕೇತವಾಗಿದ್ದಾರೆ.. ಭಾರತದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಅವರನ್ನು ಇವತ್ತಿಗೂ ಪೂಜ್ಯ ಭಾವನೆಯಿಂದ ಇಂದಿರಾ-ಅಮ್ಮ ಎಂದು ಜನ ನೆನೆಯುತ್ತಾರೆ. ಇಂಥಾ ಇಂದಿರಾ ಗಾಂಧಿ ಒಂದೊಮ್ಮೆ ಕನ್ನಡಲ್ಲಿ ಪ್ರಮಾಣವಚನ ತೆಗೆದುಕೊಂಡಿದ್ದರು. ಅವರ ಕನ್ನಡ ಪ್ರಮಾಣವಚನಕ್ಕೆ ಈಗ ಭರ್ತಿ ನಲವತ್ತು ವರ್ಷ ತುಂಬಿದೆ.

ಹೌದು, ಅದು November 21, 1978, ಇಂದಿರಾ ಗಾಂಧಿ ಅವ್ರು ಸಂಸತ್ ಭವನದಲ್ಲಿ ನಿಂತು ಕನ್ನಡದಲ್ಲಿ ಪ್ರಮಾಣವಚನ ತೆಗೆದುಕೊಂಡಿದ್ದರು.. ತಮ್ಮ ಪ್ರತಿಜ್ಞಾವಿಧಿಯನ್ನು ಸಂಪೂರ್ಣ ಕನ್ನಡಲ್ಲಿಯೇ ಓದಿದ್ದರು..

 


 

ಕನ್ನಡಲ್ಲಿ ಪ್ರಮಾಣ ವಚನ ತೆಗೆದುಕೊಂಡಿದ್ದು ಯಾಕೆ?
ಅಂದು(1978ರಲ್ಲಿ) ಕೂಡಾ ಈ ಪಕ್ಷಕ್ಕೆ ಭಾರೀ ಕುಸಿತ ಕಂಡಿತ್ತು. ತುರ್ತು ಪರಿಸ್ಥಿತಿ ಘೋಷಣೆಯು ಇಂದಿರಾ ಗಾಂಧಿಯವರಿಂದ ಪ್ರಧಾನ ಮಂತ್ರಿ ಸ್ಥಾನವನ್ನು ಕಸಿದುಕೊಂಡಿತ್ತು. ಇಷ್ಟೇ ಅಲ್ಲದೆ ಸಾರ್ವತ್ರಿಕ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಕಣಕ್ಕಿಳಿದಿದ್ದ ಇಂದಿರಾ ಗಾಂಧಿ ರಾಜ್ ನಾರಾಯಣ್ ವಿರುದ್ಧ ಸೋತಿದ್ದರು; ಸಂಸತ್ತಿನ ಸದಸ್ಯತ್ವವನ್ನೂ ಕಳೆದುಕೊಂಡಿದ್ದರು. ಸಾಲದೆಂಬಂತೆ ಹಲವಾರು ಸುದ್ದಿ ಪತ್ರಿಕೆಗಳು ಕಾಂಗ್ರೆಸ್ ಪಕ್ಷದ ಶ್ರದ್ಧಾಂಜಲಿ ಬರೆದಿದ್ದರೆ, ಪಕ್ಷದ ಪ್ರಮುಖ ನಾಯಕರು ಮುಳುಗುವ ದೋಣಿಯಂತಿದ್ದ ಕಾಂಗ್ರೆಸ್ ಪಕ್ಷದಿಂದ ಬೇರೆಡೆಗೆ ಹಾರಿದ್ದರು.

ಇಂತಹ ಕಠಿಣ ಪರಿಸ್ಥಿತಿಯಲ್ಲಿಯದ್ದ ಇಂದಿರಾ ಗಾಂಧಿ, ಲೋಕಸಭೆಗೆ ಪ್ರವೇಶಿಸುವ ನಿಟ್ಟಿನಲ್ಲಿ ಇಂದಿರಾಗಾಂಧಿಗೆ ಬೆಳಕಾಗಿದ್ದು ‘ಕರ್ನಾಟಕ’.. ಅನಿವಾರ್ಯವಾಗಿ ಬೇರೆ ನೆಲೆ ಹುಡುಕಬೇಕಾಗಿದ್ದ ಇಂದಿರಾ ಗಾಂಧಿ ನಡೆದು ಬಂದಿದ್ದು ಕಾಫಿ ನಾಡು ಚಿಕ್ಕಮಗಳೂರಿಗೆ.. ಅಂದು ಚಿಕ್ಕಮಗಳೂರಿನ ಸಂಸರಾಗಿದ್ದ ಡಿ.ಬಿ. ಚಂದ್ರೇಗೌಡ ಅವತ್ತು ಇಂದಿರಾ ಗಾಂಧಿಯವರಿಗಾಗಿ ತಮ್ಮ ಸ್ಥಾನವನ್ನು ತೆರವುಗೊಳಿಸಿ ರಾಜೀನಾಮೆ ನೀಡಿದ್ದರು.. ಹಾಗಾಗಿ ಚಿಕ್ಕಮಗಳೂರಿನಲ್ಲಿ 1978ರಲ್ಲಿ ಲೋಕಸಭಾ ಉಪಚುನಾವಣೆ ನಿಗದಿಯಾಗಿತ್ತು., ಕಾಂಗ್ರೆಸ್ ಪಕ್ಷದಿಂದ ಇಂದಿರಾ ಗಾಂಧಿ ಸ್ಪರ್ಧಿಸಿದರು.

ಅಷ್ಟರವರೆಗೆ ಯಾವುದೇ ಇತರ ಮಾಮೂಲಿ ಲೋಕಸಭಾ ಕ್ಷೇತ್ರಗಳಂತೆಯೇ ಪರಿಗಣಿಸಲ್ಪಡುತ್ತಿದ್ದ ಚಿಕ್ಕಮಗಳೂರು ಕ್ಷೇತ್ರ ಏಕಾಏಕಿ ಇಡೀ ದೇಶದಲ್ಲಿ ಚರ್ಚೆಯ ವಿಷಯವಾಯಿತು. ಇಂದಿರಾ ಗಾಂಧಿ ವಿರುದ್ಧ ಜನತಾ ಪರಿವಾರ ಅಂದಿನ ಮೇರು ನಾಯಕ ವೀರೇಂದ್ರ ಪಾಟೀಲರನ್ನು ಕಣಕ್ಕಿಳಿಸಿತ್ತು. ಚಿಕ್ಕಮಗಳೂರು ಲೋಕಸಭಾ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ರಾಜಕೀಯ ಪುನರ್ಜನ್ಮವನ್ನು ಇಂದಿರಾ ಪಡೆದು ಸಂಸತ್ ಪ್ರವೇಶ ಪಡೆದರು.. ತಮಗೆ ರಾಜಕೀಯ ಮರುಹುಟ್ಟು ಕೊಡದ ಕನ್ನಡ ನಾಡಿನ ಜನತೆಯ ಅಭಾರಿಯಾಗಿ ಇಂದಿರಾ November 21, 1978, ರಲ್ಲಿ ಕನ್ನಡದಲ್ಲಿಯೇ ಪ್ರಮಾಣವಚನ ತೆಗೆದುಕೊಂಡಿದ್ದರು.

ದುಸ್ಥಿಯಲ್ಲಿದ್ದ ಇಂದಿರಾ ಗಾಂಧಿಯವರಿಗೆ ಅಂದು ಭರವಸೆ ನೀಡಿದ್ದು ಕರ್ನಾಟಕದ ಅಂದಿನ ಮುಖ್ಯಮಂತ್ರಿ ಡಿ. ದೇವರಾಜ್ ಅರಸು. ತದ ನಂತರ ಅರಸುರವರ ಮಾತಿನಂತೆ ಇಂದಿರಾ ಗಾಂಧಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ಕೇವಲ ಎರಡೇ ವರ್ಷಗಳಲ್ಲಿ ಮತ್ತೆ ಪ್ರಧಾನ ಮಂತ್ರಿ ಸ್ಥಾನ ಮರಳಿ ಪಡೆದುಕೊಂಡರು, ಬಳಿಕ ನಡೆದಿದ್ದೆಲ್ಲವೂ ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top