fbpx
ಸಮಾಚಾರ

ನಟಸಾರ್ವಭೌಮನ ಸುವರ್ಣಾವಕಾಶ- ಈ ರೀತಿ ಮಾಡಿ ಅಪ್ಪು ಜೊತೆ ವೇದಿಕೆ ಹಂಚಿಕೊಳ್ಳಿ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಮುಂದಿನ ಚಿತ್ರ ನಟಸಾರ್ವಭೌಮ ಸಿನಿಮಾದ ಮೇಲೆ ನಾನಾ ರೀತಿಯ ನಿರೀಕ್ಷೆಗಳು ಈಗಾಗಲೇ ಬೆಟ್ಟಮಾಡಿಕೊಂಡಿವೆ. ಕಳೆದ ಐದಾರು ತಿಂಗಳಿನಿಂದ ಸತತ ಶೂಟಿಂಗ್ ನಲ್ಲಿ ತೊಡಗಿದ್ದ ಚಿತ್ರತಂಡ ಇದೀಗ ಚಿತ್ರೀಕರಣವನ್ನು ಮುಗಿಸಿಕೊಂಡಿದೆ. ಚಿತ್ರತಂಡ ಕುಂಬಳಕಾಯಿ ಒಡೆದು ಸಿಹಿ ಹಂಚಿ ಸಂಭ್ರಮಿಸಿದ್ದು ಪ್ರಚಾರದ ಕಾರ್ಯಕ್ಕೆ ಚಾಲನೆ ನೀಡಿದೆ.

 

 

ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಅದೃಷ್ಟವಂತ ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರೊಂದಿಗೆ ವೇದಿಕೆ ಹಂಚಿಕೊಳ್ಳಬಹುದಾಗಿದೆ. ಪುನೀತ್ ರಾಜ್ ಕುಮಾರ್ ಅವರೇ ಮಾಡಿರುವ ವಿಡಿಯೋದಲ್ಲಿ ಈ ಆಶ್ಚರ್ಯಕರ ಸುದ್ದಿಯೊಂದನ್ನು ಪ್ರಕಟಿಸಿದ್ದಾರೆ. ಪುನೀತ್ ರೀತಿ ಅವರ ಅಭಿಮಾನಿಗಳು ವಿಡಿಯೋ ಮಾಡಬೇಕಿದೆ. ಆ ರೀತಿ ಮಾಡಿ #NataSarvabhouma ಹ್ಯಾಶ್ ಟ್ಯಾಗ್ ಹಾಕಿ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಅಪ್ ಲೋಡ್ ಮಾಡಬೇಕಿದೆ.

“ನನ್ನ ಸ್ಟೈಲ್​ನಲ್ಲಿ ನಟಿಸುವ ನಟಸಾರ್ವಭೌಮನಿಗೆ ನಮ್ಮ ಆಡಿಯೋ ಬಿಡುಗಡೆ ಸಂದರ್ಭದಲ್ಲಿ ವೇದಿಕೆ ಹಂಚಿಕೊಳ್ಳುವ ಅವಕಾಶ ನೀಡುವ ಈ ಚಾಲೆಂಜನ್ನು ಯಾರು ಬೇಕಾದರೂ ಮಾಡಬಹುದು. ಹ್ಯಾಷ್​ಟ್ಯಾಗ್ #NataSarvabhouma ಅಂತ ಟೈಪ್ ಮಾಡಿ, ಸೋಷಿಯಲ್​ವಿುೕಡಿಯಾದಲ್ಲಿ ಶೇರ್ ಮಾಡಿ.” ಎಂದು ಪುನೀತ್ ಟ್ವಿಟರ್ ನಲ್ಲಿ ಹೇಳಿದ್ದಾರೆ.

ಅಂದಹಾಗೆ ಈ ಚಿತ್ರವನ್ನು ಶಾಸಕ ಮುನಿರತ್ನ ಅರ್ಪಿಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ಅಪ್ಪುಗೆ ನಾಯಕಿಯರಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ಮಲೆಯಾಳಂ ನಟಿ ಅನುಪಮಾ ಜೋಡಿಯಾಗಿದ್ದು ಹಿರಿಯ ನಟಿ ಬಿ. ಸರೋಜಾದೇವಿ ಕೂಡ ವಿಶೇಷ ಪಾತ್ರವೊಂದನ್ನು ಮಾಡಿದ್ದಾರೆ, ಇವರ ಜೊತೆ ಚಿಕ್ಕಣ್ಣ, ರವಿಶಂಕರ್, ಅಚ್ಚುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಬಣ್ಣ ಹಚ್ಚಲಿದ್ದಾರೆ. ಚಿತ್ರಕ್ಕೆ ಕೋಟಿಗೊಬ್ಬ ೨ ಖ್ಯಾತಿಯ ಡಿ.ಇಮಾನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top