fbpx
ಅರೋಗ್ಯ

ಪ್ರತಿದಿನ ಒಂದೇ ಒಂದು ಸಪೋಟ ಹಣ್ಣನ್ನು ತಿಂದರೆ ಯಾವೆಲ್ಲಾ ಪ್ರಯೋಜನಗಳನ್ನು ಪಡ್ಕೋಬೋದು ಗೊತ್ತಾ?

ಅಪ್ಪಟ ಕಂದು ಬಣ್ಣದ ಚಿಕ್ಕ ಸಪೋಟ ಅಥವಾ ಸ್ಪಾಡಿಲ ಫ್ರೂಟ್ ಎಂದು ಕರೆಯುವ ಈ ಸಿಹಿಯಾದ ಹಣ್ಣು ಸಾಫೋಟಿಸಿ ಎಂಬ ಸಸ್ಯ ವರ್ಗಕ್ಕೆ ಸೇರಿದೆ.ಇದೇ ಕಾರಣಕ್ಕೆ ಇದನ್ನು ಸಪೋಟ ಎಂದು ಕರೆಯುತ್ತಾರೆ.ನೋಡಲಿಕ್ಕೆ ಕಿವಿ ಹಣ್ಣಿನ ಒಂದು ಭಾಗವನ್ನು ಚೂಪಾಗಿಸಿದಂತೆ ಕಾಣುವ ಈ ಹಣ್ಣಿನ ಹೊರ ಕವಚ ತೆಳುವಾಗಿದ್ದು,ಒಳಗಿನ ತಿರುಳು ಮೊದಲೇ ಕತ್ತರಿಸಿಟ್ಟಂತೆ ಐದಾರು ಭಾಗಗಳಿದ್ದು ನಡುವೆ ಕಪ್ಪು ಮತ್ತು ಉದ್ದದ ಬೀಜಗಳಿರುತ್ತವೆ.

 

 

 

ಇನ್ನು ಸಪೋಟ ಹಣ್ಣಿನ ತಿರುಳು ಅಪ್ಪಟ ಸಿಹಿಯಾಗಿದ್ದು ಸ್ವಲ್ಪವೂ ಕೂಡ ಹುಳಿಯ ಅಂಶವಿರುವುದಿಲ್ಲ.ಈ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.ಈ ಹಣ್ಣಿನಲ್ಲಿ ವಿಟಮಿನ್- ಬಿ ಕಾಂಪ್ಲೆಕ್ಸ್ ಹೇರಳವಾಗಿರುವ ಕಾರಣದಿಂದ ಈ ಗುಂಪಿನ ವಿಟಮಿನ್ ನಿಂದ ದೊರೆಯುವ ಎಲ್ಲ ಪ್ರಯೋಜನಗಳು ದೊರಕುತ್ತವೆ.ವಿಟಮಿನ್ ಬಿ ಕೊರತೆಯಿಂದ ಎದುರಾಗುವ ರಕ್ತ ಹೀನತೆ, ಸುಸ್ತು, ಕಣ್ಣಿನ ದೃಷ್ಟಿ ಕುಂದುವುದು,ಬೆಳವಣಿಗೆಯಲ್ಲಿ ಕುಂಠಿತವಾಗುವುದು,ನರವ್ಯವಸ್ಥೆ ಶಿಥಿಲಗೊಳ್ಳುವುದು,ಹೃದಯ ಸಂಬಂದಿ ತೊಂದರೆಗಳು ಇತ್ಯಾಧಿಗಳನ್ನು ಸರಿಪಡಿಸುವಲ್ಲಿ ಸಪೋಟ ಹಣ್ಣಿನ ಸೇವನೆ ನೆರವಾಗುತ್ತದೆ.ಇನ್ನು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ನಮ್ಮ ಆಹಾರದಲ್ಲಿರುವ ಸಪೋಟ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ.

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್- ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.ಇದರ ಪರಿಣಾಮವಾಗಿ ಹತ್ತು ಹಲವು ಸೋಂಕುಗಳಿಂದ ದೇಹ ರಕ್ಷಣೆ ಪಡೆಯುತ್ತದೆ.ಇದರಲ್ಲಿರುವ ಪೋಷಕಾಂಶಗಳ ಸಹಾಯದಿಂದಾಗಿ ಸಪೋಟವನ್ನು ಅತಿ ಪ್ರಬಲ ಆಹಾರಗಳ ಪಟ್ಟಿಯಲ್ಲಿ ಸೇರಿಸಲಾಗಿದೆ.ಇದರ ಗುಣಗಳಲ್ಲಿ ಕ್ಯಾನ್ಸರ್ ನಿವಾರಕ ಗುಣವೂ ಒಂದಾಗಿದೆ.ಈ ಹಣ್ಣಿನಲ್ಲಿ ಕರಗುವ ನಾರು ಸಕ್ಷಮ ಆಂಟಿ ಅಕ್ಸಿರಿನ್ ಗಳು ಹಾಗು ಕ್ಯಾನ್ಸರ್ ನೊರೋಧಕ ಗುಣವಿರುವ ವಿಟಮಿನ್-ಎ ಕ್ಯಾನ್ಸರ್ ಕಾರಕ ಕಣಗಳನ್ನು ನಿವಾರಿಸುವಲ್ಲಿ ಬೆಂಬಲ ನೀಡುವ ಮೂಲಕ ಹಲವು ಬಗೆಯ ಕ್ಯಾನ್ಸರ್ ಗಳಿಂದ ರಕ್ಷಣೆ ಒದಗಿಸುತ್ತದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top