fbpx
ಮನೋರಂಜನೆ

ಆರಡಿ ದರ್ಶನ್‍ಗೆ ಚೋಟುದ್ದ ಗಿಫ್ಟ್ ಕೊಟ್ಟ ಗಾಂಚಲಿ ಹುಡುಗ- ಆದ್ರೆ ಇದು ತುಂಬಾ ಸ್ಪೆಷಲ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳು ಸದಾ ಇಷ್ಟವಾದ ಉಡುಗೊರೆಯನ್ನು ಕೊಡುತ್ತಾರೆ.. ಕೈಯಾರೆ ಬಿಡಿಸಿದ ಪೇಂಟಿಂಗ್, ಅಪರೂಪದ ಫೋಟೋ ಕಲೆಕ್ಷನ್ಸ್ ಹೀಗೆ ಅನೇಕ ರೀತಿಯ ಉಡುಗೊರೆಗಳು ಅಭಿಮಾನಿಗಳ ಕಡೆಯಿಂದ ದರ್ಶನ್ ಹುಡುಕಿಕೊಂಡು ಬರುತ್ತಿರುತ್ತವೆ.. ಇದೀಗ ಅಭಿಮಾನಿಯೊಬ್ಬರು ದಾಸನಿಗೆ ಅಪರೂಪದ ಉಡುಗೊರೆಯನ್ನ ಕೊಟ್ಟಿದ್ದಾರೆ.

 

 

ದರ್ಶನ್‍ಗೆ ಗಾಂಚಲಿ ಚಿತ್ರದ ಹೀರೋ ಆದರ್ಶ ವಿಶೇಷ ಕಾಣಿಕೆಯೊಂದನ್ನ ನೀಡಿದ್ದಾರೆ. ಅದು ದರ್ಶನ್ ಅವರ ಪುಟ್ಟ ಪ್ರತಿಮೆ. ‘ಗಾಂಚಾಲಿ’ ಸಿನಿಮಾ ಮೂಲಕ ಯುವ ಆದರ್ಶ್​ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಆದರ್ಶ್​ ಚಿಕ್ಕ ವಯಸ್ಸಿನಿಂದಲೂ ದರ್ಶನ್​ರ ದೊಡ್ಡ ಅಭಿಮಾನಿ. ಇದೇ ತಿಂಗಳು ಸಿನಿಮಾ ರಿಲೀಸ್ ಆಗ್ತಿರೋದ್ರಿಂದ ಸ್ಪೆಷಲ್​ ಗಿಫ್ಟ್ ನೀಡಬೇಕೆಂಬ ಆಸೆಯಿತ್ತು. ಹೀಗಾಗಿ ಬಳಪದಲ್ಲಿ ಕೆತ್ತಲಾದ ದರ್ಶನ್​ ಮುಖದ ಕಲಾಕೃತಿಯನ್ನು ಆದರ್ಶ್ ಗಿಫ್ಟ್​ ಮಾಡಿದ್ದಾರೆ.

ಒಂದು ಸಣ್ಣ ಸ್ತಂಭದಲ್ಲಿ ಅರ್ಧದಷ್ಟು ದರ್ಶನ್ ಆಕಾರವನ್ನು ಕೆತ್ತಿದ್ದಾರೆ. ಬಳಿಕ ಅದರ ಸುತ್ತಲು ಗಾಜಿನಿಂದ ಮುಚ್ಚಲಾಗಿದೆ. ಇದು ಕೈಬೆರಳಿನ ಗಾತ್ರದಲ್ಲಿದೆ. ಈ ಉಡುಗೊರೆಯನ್ನು ಅಂಗೈನಲ್ಲಿ ಹಿಡಿದುಕೊಳ್ಳುವಷ್ಟು ಚಿಕ್ಕದಾಗಿದೆ. ಈ ವಿಭಿನ್ನವಾದ ಕಲಾಕೃತಿಯನ್ನು ಖ್ಯಾತ ಕಲಾವಿದ ಸಚಿನ್​ ಸಿಂಘೆ ಕೆತ್ತಿದ್ದಾರೆ..

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top