fbpx
ಮನೋರಂಜನೆ

ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿಯವರಿಗೆ ಸ್ಪೆಷಲ್ ಆಗಿ ಬರ್ತ್ ಡೇ ವಿಶ್ ಮಾಡಿದ ಕಿಚ್ಚ ಸುದೀಪ್

ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ ಸುನೀಲ್‌ ಕುಮಾರ್‌ ದೇಸಾಯಿಯವರಿಗೆ ಇವತ್ತು ಜನುಮ ದಿನದ ಸಂಭ್ರಮ. ಕನ್ನಡ ಚಿತ್ರರಂಗವನ್ನ ಶ್ರೇಷ್ಠ ಮಟ್ಟಕ್ಕೆ ಕೊಂಡೊಯ್ಯುವುದರಲ್ಲಿ ಸುನೀಲ್‌ ಕುಮಾರ್‌ ದೇಸಾಯಿಯವರ ಪಾತ್ರವು ಸಹ ಇದೆ. ಸದ್ಯ ಇವರು ಉದ್ಘರ್ಷ ಅನ್ನೋ ಮತ್ತೊಂದು ಮಹಾ ಪ್ರಯೋಗವನ್ನ ಮಾಡುತ್ತಿದ್ದು, ಸದ್ಯದಲ್ಲೇ ಅದು ತೆರೆಗೆ ಅಪ್ಪಳಿಸಲಿದೆ. ಇವತ್ತು ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿರೋ ದೇಸಾಯಿಯವರಿಗೆ ಅವರ ಶಿಷ್ಯವೃಂದ ಹಾಗೂ ಚಿತ್ರರಂಗದ ಅನೇಕ ಸ್ನೇಹಿತರು ಗಣ್ಯರು ಶುಭಾಶಯ ಕೋರಿದ್ದಾರೆ. ಅದರಲ್ಲೂ ಕಿಚ್ಚ ಸುದೀಪ್ ತಮ್ಮ ಮೆಚ್ಚಿನ ಗುರುಗಳಾದ ಸುನೀಲ್‌ ಕುಮಾರ್‌ ದೇಸಾಯಿಯವರಿಗೆ ಟ್ವಿಟ್ಟರ್‌ ಮೂಲಕ ವಿಶೇಷವಾಗಿ ಬರ್ತ್‌ಡೇ ವಿಶ್‌ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ಹಾಗಾದರೆ ಕಿಚ್ಚ ಸುದೀಪ್ ಏನು ಟ್ವೀಟ್ ಮಾಡಿದ್ದಾರೆ ?

ನಾನು ಏನು ಎನ್ನುವುದನ್ನು ಅರಿತದ್ದೇ ನಿಮ್ಮಿಂದ. ಸಿನಿಮಾ ಏನು ಎನ್ನುವುದನ್ನು ಕಲಿತದ್ದೇ ನಿಮ್ಮಿಂದ. ಸಿನಿಮಾದಿಂದ ನನಗೆ ಎಷ್ಟೇ ಒತ್ತಡ ಇದ್ರೂ ಕೂಡ ಅದನ್ನು ಯಾವ ರೀತಿ ಫೇಸ್ ಮಾಡ್ಬೇಕು ಎನ್ನುವುದನ್ನು ನಾನು ನಿಮ್ಮಿಂದ ನಾನು ಕಲಿತಿದ್ದೇನೆ. ಎಷ್ಟೇ ವರ್ಷಗಳಾದ್ರು ಮರೆಯಲಾಗದಂತಹ ಸಿನಿಮಾಗಳನ್ನು ನೀವು ಕೊಟ್ಟಿದ್ದೀರಿ. ಇಷ್ಟು ವರ್ಷ ನಮ್ಮನ್ನು ಮನೋರಂಜಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಇದೇ ರೀತಿ ನೀವು ಹಿಟ್​​ ಸಿನಿಮಾಗಳನ್ನು ಕೊಡಬೇಕು ಅಂತ ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಕಿಚ್ಚ ಸುದೀಪ್​​ ಸುನಿಲ್​​ ಕುಮಾರ್​​ ದೇಸಾಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top