fbpx
ಮನೋರಂಜನೆ

ಪುಟ್ಟ ಅಭಿಮಾನಿ ನಿಧನಕ್ಕೆ ಕಂಬನಿ ಮಿಡಿದ ಕಿಚ್ಚಾ ಸುದೀಪ್.

ಕರ್ನಾಟಕದಾದ್ಯಂತ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ಕೆಲವೇ ಕೆಲವು ನಟರಲ್ಲಿ ಕಿಚ್ಚಾ ಸುದೀಪ್ ಅವ್ರಿಗೂ ಜಾಗವಿದೆ. ವಯಸ್ಸಿನ ಹಂಗಿಲ್ಲದೆ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರಲ್ಲೂ ಅಭಿಮಾನಿಗಳನ್ನು ಹೊಂದಿರುವ ಸುದೀಪ್ ಈಗ ತಮ್ಮ ಪುಟ್ಟ ಅಭಿಮಾನಿಯೊಬ್ಬರ ಸಾವಿಗೆ ಕಂಬನಿ ಮಿಡಿದಿದ್ದಾರೆ. ಈ ಮೃತ ಬಾಲಕ ಬೇರೆ ಯಾರೂ ಅಲ್ಲ ‘ಆಟೋಗ್ರಾಫ್ ಪ್ಲೀಸ್’ಸಿನಿಮಾ ನಿರ್ದೇಶಕ ಭಾರತಿ ಶಂಕರ್ ಮಗ ಆದಿತ್ಯ.

 

 

 

ಡಿಎಂಡಿ ಎಂಬ ವಿರಳಾತೀತ ವಿರಳ ರೋಗದಿಂದ ಆದಿತ್ಯ ಬಳಲುತ್ತಿದ್ದ. ದೇಹದ ಸ್ನಾಯುಗಳನ್ನು ದುರ್ಬಲ ಮಾಡುವುದಲ್ಲದೇ, ಈ ರೋಗ ಪೀಡಿತರು ಒಂದೆಡೆ ಹೆಚ್ಚು ಕೂರಲೂ ಅಶಕ್ತರಾಗಿರುತ್ತಾರೆ. ಕೆಲ ವರ್ಷಗಳಿಂದ ಆದಿತ್ಯ ಈ ರೋಗದಿಂದ ಬಳಲುತ್ತಿದ್ದನು. ಈ ಹುಡುಗ ಕಿಚ್ಚನ ಹುಚ್ಚು ಅಭಿಮಾನಿಯಾಗಿದ್ದನು ಒಮ್ಮೆ ಸುದೀಪ್ ರನ್ನು ಕಣ್ಣು ತುಂಬಿಕೊಳ್ಳಬೇಕೆಂಬುದು ಆತನ ಮಹಾದಾಸೆಯಾಗಿತ್ತು. ಅದರಂತೆ 2014ರಲ್ಲಿ ಮೈಸೂರಿನಲ್ಲಿ ಈ ಬಾಲಕ ಸುದೀಪ್ ಅವರನ್ನು ಭೇಟಿಯಾಗಿದ್ದ. ಅಷ್ಟೇ ಅಲ್ಲದೆ ತಮ್ಮಗಿರುವ ಎಲ್ಲ ಆಸೆಗಳನ್ನೂ ಸುದೀಪ್ ಮುಂದೆ ಬಿಚ್ಚಿಟ್ಟಿದ್ದನಂತೆ.

ಆದಿತ್ಯನ ಮರಣದ ಸುದ್ದಿ ಕೇಳಿದ ಕಿಚ್ಚಸುದೀಪ್​​ ದುಖಿಃತರಾಗಿದ್ದು​​ ತನ್ನ ಅಭಿಮಾನಿಗಾಗಿ ಟ್ವಿಟ್ಟರ್​​ನಲ್ಲಿ ಸಂಪಾಪ ಸೂಚಿಸಿದ್ದಾರೆ. “ಆದಿತ್ಯ ಇನ್ನಿಲ್ಲ ಎನ್ನುವ ವಿಚಾರ ಕೇಳಿ ನನಗೆ ತುಂಬಾ ಬೇಸರವಾಗ್ತಿದೆ. ನಾನು ಆ ಬಾಲಕನೊಂದಿಗೆ ಕಳೆದ ಕೆಲ ಸಮಯವನ್ನ ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲ. ಆ ಬಾಲಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾನು ಬಯಸುತ್ತೇನೆ” ಎಂದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top