fbpx
ಮನೋರಂಜನೆ

ಯುವರತ್ನ ಶೀರ್ಷಿಕೆ ವಿನ್ಯಾಸ ನೋಡಿ ಕಿಚ್ಚ ಟ್ವೀಟ್ ಏನೆಂದು ಟ್ವೀಟ್ ಮಾಡಿದ್ದಾರೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಬರ್ತಿರುವ ಹೊಚ್ಚಹೊಸ ಚಿತ್ರ ‘ಯುವರತ್ನ’ ಶೀರ್ಷಿಕೆ ವಿನ್ಯಾಸ ಬಿಡುಗಡೆ ಆಗಿದೆ. ಪವರ್ ಆಫ್ ದಿ ಯೂತ್ ಎಂಬ ಅಡಿಬರಹವೂ ಇದರಲ್ಲಿರುವುದು ವಿಶೇಷಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಭಿನಯದ ಈ ಚಿತ್ರದ ಶೀರ್ಷಿಕೆ ವಿನ್ಯಾಸ ಬಿಡುಗಡೆ ಆಗುತಿದಂತೆಯೇ ಸಾಕಷ್ಟು ಹೊಗಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಗಿಟ್ಟಿಸಿದೆ.

ಚಿತ್ರದ ಶೀರ್ಷಿಕೆ ವಿನ್ಯಾಸವನ್ನು ನೋಡಿ ಕಿಚ್ಚ ಮೆಚ್ಚುಕೊಂಡಿದು, ತಮ್ಮ ಟ್ವಿಟರ್ ಖಾತೆಯಲ್ಲಿ ಇದರ ಬಗ್ಗೆ ಬರೆದುಕೊಂಡಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಅಭಿನಯದ ‘ಯುವರತ್ನ’ ಚಿತ್ರದ ಬಗ್ಗೆ ಕಿಚ್ಚ ಮಾಡಿರುವ ಟ್ವೀಟ್ ಏನು ?

 

“ಪಿಆರ್ ಕೆ ತಂಡಕ್ಕೂ ಹಾಗೂ ಸಂತೋಷ್ ಆನಂದ್ ರಾಮ್ ಅವರಿಗೆ ನನ್ನ ಶುಭಾಶಯಗಳು.. ಇದೊಂದು ಹೊಸ ದಾಖಲೆ ಬರೆಯಲಿ .. ಆಲ್ ದಿ ಬೆಸ್ಟ್” ಎಂದು ಬರೆದುಕೊಂಡಿದ್ದಾರೆ.

 

 

ಕಿಚ್ಚ ಸುದೀಪ ರ ಟ್ವೀಟ್ ಅನ್ನು ನೋಡುತ್ತಿದಂತೆಯೇ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್ ರಾಮ್ ‘ ಧನ್ಯವಾದಗಳು ನಿಮ್ಮ ಈ ಮುತ್ತಿನಂಥ ಮಾತಿಗೆ, ಲವ್ ಯು ಸರ್’ ಎಂದು ರಿಟ್ವೀಟ್ ಮಾಡಿದ್ದಾರೆ.

 

ಸುಮಾರು 16 ವರ್ಷಗಳ ನಂತರ ಪುನೀತ್ ರಾಜ್ ಕುಮಾರ್ ಕಾಲೇಜ್ ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಈ ಸಿನಿಮಾದ ವಿಶೇಷ. ಇದೊಂದು ಯೂತ್ ಸ್ಟೋರಿಯಾಗಿರುವುದರಿಂದ ಈ ಚಿತ್ರಕ್ಕೆ ‘ಯುವರತ್ನ’ ಎಂದು ಹೆಸರಿಡಲಾಗಿದೆ.. ಡಿಸೆಂಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ, ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top