fbpx
ಮನೋರಂಜನೆ

“ರಾಜಮೌಳಿ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ನಟಿಸುತ್ತಾರೆ” ಎನ್ನುವ ಸುದ್ದಿ ಬಗ್ಗೆ ಕೊನೆಗೂ ಮೌನ ಮುರಿದ ಯಶ್.

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಯಶಸ್ವೀ ನಿರ್ದೇಶಕ ಎಂದು ಖ್ಯಾತಿ ಗಳಿಸಿರುವ ಎಸ್.ಎಸ್ ರಾಜಮೌಳಿ ಅವರ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿತ್ತು. ಸದ್ಯ ಈಗ ಯಶ್ ಸ್ವತಃ ಈ ವಿಷಯದ ಕುರಿತು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಖುದ್ದು ಯಶ್‌ ಫೇಸ್ಬುಕ್‌ನಲ್ಲಿ ಹೀಗೆ ಸ್ಪಷ್ಟನೆ ನೀಡಿದ್ದು ವದಂತಿಗಳಿಗೆ ತೆರೆ ಎಳೆದಿದ್ದಾರೆ.

 

 

ಯಶ್ ಹೇಳಿದ್ದಿಷ್ಟು:
ಎಲ್ಲರಿಗೂ ನಮಸ್ಕಾರ,
ನಿನ್ನೆಯಿಂದ ಕೆಲ‌ ಮಾಧ್ಯಮಗಳಲ್ಲಿ‌ ನನ್ನನ್ನು ಎಸ್.ಎಸ್.ರಾಜಮೌಳಿಯವರು ಸಂಪರ್ಕಿಸಿದ್ದಾರೆ ಅವ್ರ ಹೊಸ‌ಚಿತ್ರದಲ್ಲಿ‌ ನಾನು ನಟಿಸುತ್ತಿದ್ದೇನೆಂದು ಸುದ್ದಿ ಬಿತ್ತರಿಸುತ್ತಿದ್ದಾರೆ. ಇದು ಸತ್ಯಕ್ಕೆ‌ ದೂರವಾದ ಮಾತು. ನಾನು ಅವರ ಚಿತ್ರದಲ್ಲಿ ಅಭಿನಯಿಸುತ್ತಿಲ್ಲ.  ಅವರು ಆ ವಿಚಾರವಾಗಿ ನನ್ನ‌ ಸಂಪರ್ಕಿಸಿಯೂ ಇಲ್ಲ… ಅಂತಹ ದೊಡ್ಡ ನಿರ್ದೇಶಕರ ಹೆಸರನ್ನ ಹೀಗೆ‌ ಸುಖಾಸುಮ್ಮನೆ ಬಳಸುವುದು ಸರಿಯಲ್ಲ… ಅದು ಯಾರಿಗೂ ಶೋಭೆ ತರುವಂತಹದಲ್ಲ… ಸದ್ಯಕ್ಕೆ‌ ನನ್ನ‌ ಗುರಿ ಕೆ.ಜಿ.ಎಫ್…. ಕೆ.ಜಿ.ಎಫ್‌‌ ಕೆಲಸದಲ್ಲಿ‌ ನಾನು ನನ್ನ ತಂಡ ಮಗ್ನರಾಗಿದ್ದೀವಿ… ದಯವಿಟ್ಟು ಊಹಾಪೋಹಗಳಿಗೆ ಕಿವಿಕೊಡದಿರಿ… ಸುಳ್ಳು‌‌ಸುದ್ದಿಯನ್ನ‌‌ ಬಿತ್ತರಿಸದಿರಿ… ಈಗ ಕೆ.ಜಿ.ಎಫ್ ಬರುತಿರುವಂತಹ ಸಮಯ…ಬರೀ‌ ಈ ಚಿತ್ರದ ಬಗ್ಗೆ ಮಾತಾಡೋಣ…
ಧನ್ಯವಾದಗಳು.

ಏನಿದು ಗಾಸಿಪ್?
ರಾಜಮೌಳಿ ನಿರ್ದೇಶಿಸುತ್ತಿರುವ ಜೂ.ಎಂಟಿಆರ್ ಮತ್ತು ರಾಮ್ ಚರಣ್ ನಟಿಸುತ್ತಿರುವ ‘RRR’ ಚಿತ್ರದಲ್ಲಿ ಯಶ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಗಾಸಿಪ್ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು.. ಆದರೆ ಈ ಸುದ್ದಿ ಶುದ್ಧ ಸುಳ್ಳು ಎಂದೇ ಯಶ್ ಹೇಳಿದ್ದು ಗಾಸಿಪ್ ಗೆ ತೆರೆ ಬಿದ್ದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top