fbpx
ಮನೋರಂಜನೆ

ಬಾಹುಬಲಿ ದಾಖಲೆಯನ್ನು ಅಳಿಸಿಹಾಕಿದ ಮುರಿದ ರಜನಿ ರೋಬೊ- 2.0

ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ನಿರೀಕ್ಷಿತ ಚಿತ್ರ ಎಂದೇ ಪರಿಗಣಿತವಾಗಿರುವ ಸೂಪರ್ ಸ್ಟಾರ್ ರಜಿನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ‘2.0’ ಚಿತ್ರ ಮುಂದಿನವಾರ (ನವೆಂಬರ್ 29) ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ.. ಪ್ರೇಕ್ಷಕ ವಲಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ 2.0 ಸಿನಿಮಾ ಬಿಡುಗಡೆ ಮೊದಲೇ ಬಾಹುಬಲಿ ಸಿನಿಮಾದ ದಾಖಲೆಯೊಂದನ್ನ ಅಳಿಸಿಹಾಕಿದೆ.

ಭಾರತದಾದ್ಯಂತ ಒಟ್ಟು 6500ಕ್ಕೂ ಅಧಿಕ ಪರದೆಗಳ ಮೇಲೆ ‘ಬಾಹುಬಲಿ 2’ ರಿಲೀಸ್ ಆಗಿತ್ತು. ಈವರೆಗೂ ಅಷ್ಟೊಂದು ಪರದೆಗಳ ಮೇಲೆ ಬೇರಾವ ಸಿನಿಮಾಗಳೂ ಪ್ರದರ್ಶನ ಪಡೆದುಕೊಂಡಿರಲಿಲ್ಲ. ಇದೀಗ ‘2.0’ ಚಿತ್ರ ಸುಮಾರು 7000 ಸ್ಕ್ರೀನ್​ಗಳ ಮೇಲೆ ಕಮಾಲ್ ಮಾಡಲು ಸಜ್ಜಾಗಿದೆ. ಉತ್ತರ ಭಾರತದ ಭಾಗದಲ್ಲಿ 4000, ಆಂಧ್ರ/ತೆಲಂಗಾಣದಲ್ಲಿ 1250, ತಮಿಳುನಾಡಿನಲ್ಲಿ 625, ಕೇರಳದಲ್ಲಿ 525, ಕರ್ನಾಟಕದಲ್ಲಿ 300 ಪರದೆ ಸೇರಿ ಒಟ್ಟು 7000ಕ್ಕೂ ಅಧಿಕ ಪರದೆಗಳ ಮೇಲೆ ರಜಿನಿ ಮತ್ತು ಅಕ್ಷಯ್ ಅಬ್ಬರಿಸಲಿದ್ದಾರೆ.

ಶಂಕರ್​ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. 2010ರಲ್ಲಿ ಇವರ ನಿರ್ದೇಶನದಲ್ಲೇ ಮೂಡಿಬಂದ ಎಂದಿರನ್​ ಚಿತ್ರ ಸಿಕ್ಕಾಪಟ್ಟೆ ಹಿಟ್​ ಆಗಿತ್ತು. ಇದರ ಮುಂದುವರಿದ ಭಾಗವಾಗಿ 2.0 ಮೂಡಿಬಂದಿದೆ. ಅಕ್ಷಯ್​ ಕುಮಾರ್​ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಅಭಿನಯಿಸಿದ್ದು, ವಿಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ರಜಿನಿ ಆಂಡ್ರೋ ಹ್ಯೂಮನಾಯ್ಡ್ ಚಿಟ್ಟಿಯಾಗಿ ಕಾಣಿಸಿಕೊಳ್ಳಲಿದ್ರೆ, ಎದುರಾಳಿಯಾಗಿ ಅಕ್ಷಯ್ ಕುಮಾರ್ ಡಾ.ರಿಚ್ಚರ್ಡ್ ಎಂಬ ಹುಚ್ಚು ವಿಜ್ಞಾನಿಯಾಗಿ ನಟಿಸ್ತಿದ್ದಾರೆ. ಬ್ರಿಟಿಷ್ ನಟಿ ಕಮ್ ಮಾಡೆಲ್ ಆ್ಯಮಿ ಜಾಕ್ಸನ್ ಮಹಿಳಾ ಮುಖ್ಯಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top