fbpx
ಮನೋರಂಜನೆ

ಹೆಣ್ಣು ಮಗುವಿಗೆ ತಂದೆಯಾದರು ಕೃಷ್ಣ ಅಜೇಯ್ ರಾವ್..

ಕೃಷ್ಣಾ ಖ್ಯಾತಿಯ ನಟ ಅಜೇಯ್ ರಾವ್ ಇದೀಗ ಡಬಲ್ ಸಂತೋಷದಲ್ಲಿದ್ದಾರೆ.. ಕಳೆದ ವಾರವಷ್ಟೇ ತೆರೆಕಂಡು ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿರುವ ಅವರ ‘ತಾಯಿಗೆ ತಕ್ಕ ಮಗ’ ಚಿತ್ರದ ಗೆಲುವಿನ ಖುಷಿಯಾದರೇ ಮತ್ತೊಂದು ಕಡೆ ತಾವು ತಂದೆಯಾದ ಖುಷಿಯಲ್ಲಿ ಅಜೇಯ್ ತೇಲಾಡುತ್ತಿದ್ದಾರೆ. ಹೌದು ಅಜೇಯ್ ರಾವ್ ತಂದೆಯಾಗಿದ್ದು ಅವರ ಪತ್ನಿ ಸ್ವಪ್ನ ಅವ್ರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

2014ರಲ್ಲಿ ಹೊಸಪೇಟೆ ಮೂಲದ ಸ್ವಪ್ನಾ ಜೊತೆ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದ ಅಜಯ್ ರಾವ್ ಅವರು ಇದೀಗ ತಂದೆಯಾಗಿರುವ ಸಂಭ್ರಮದಲ್ಲಿದ್ದು ಮುದ್ದು ಹೆಣ್ಣು ಮಗಳ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.. ಸ್ವಪ್ನ ಅವರು ಎಂಜಿನಿಯರ್ ಆಗಿದ್ದು, ಅಜಯ್ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್ ಎಂದು ಹೇಳಲಾಗುತ್ತಿದೆ..

 

 

ಮೊದಲ ಮಗುವಿನ ಆಗಮನದ ಖುಷಿಯಲ್ಲಿರುವ ಅಜಯ್ ರಾವ್ ಮತ್ತು ಪತ್ನಿ ಸ್ವಪ್ನ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಷಯಗಳ ಮಹಾಪೂರವೇ ಹರಿದು ಬರುತ್ತಿವೇ. ಅಜಯ್ ಈ ಹಿಂದೆ ಗಣೇಶ ಚತುರ್ಥಿ ಹಬ್ಬದಂದು ತಮ್ಮ ಫೇಸ್‍ಬುಕ್‍ನಲ್ಲಿ ತಮ್ಮ ಪತ್ನಿ ಸ್ವಪ್ನ ಅವರು ಬಿಡಿಸಿದ ಗಣೇಶ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಫೋಟೋದಲ್ಲಿ ಸ್ವಪ್ನ ಅವರು ಗರ್ಭಿಣಿಯಾದ ಸಂತಸದಲ್ಲಿದ್ದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top