fbpx
ಸಮಾಚಾರ

ದೇಶದಲ್ಲಿ ಜೋರಾಯ್ತು ಪ್ರತಿಮೆ ಪಾಲಿಟಿಕ್ಸ್- ಸರ್ದಾರ್ ಪ್ರತಿಮೆಗಿಂತಲೂ ಎತ್ತರದಲ್ಲಿರಲಿದೆ ಆಂಧ್ರ ವಿಧಾನಸಭೆ ಕಟ್ಟಡ.

ಸದ್ಯ ದೇಶದಲ್ಲಿ ಪ್ರತಿಮೆ ಪಾಲಿಟಿಕ್ಸ್ ಜೋರಾಗಿದ್ದು ಗುಜರಾತ್ ಸರ್ಕಾರ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದ ಬೆನ್ನಲ್ಲೇ ಇತರ ರಾಜ್ಯಗಳೂ ಬೃಹತ್ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗುತ್ತಿವೆ.. ಇತ್ತೀಚಿಗಷ್ಟೇ ಉತ್ತರ ಪ್ರದೇಶದ ಸರ್ಕಾರ ರಾಮನ ಪ್ರತಿಮೆ ಮನಿರ್ಮಿಸುವ ಬಗ್ಗೆ ಹೇಳಿಕೊಂಡಿತ್ತು ಅದರ ನಡುವೆ ಕರ್ನಾಟಕ ರಾಜ್ಯದಲ್ಲಿ ಕಾವೇರಿ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿತ್ತು..

ಇದೀಗ ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಮ್ಮ ರಾಜ್ಯದ ವಿಧಾನಸಭೆ ಕಟ್ಟಡವನ್ನು ಏಕತಾ ಪ್ರತಿಮೆಗಿಂತ ಎತ್ತರದಲ್ಲಿ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ. ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಏಕತಾ ಪ್ರತಿಮೆಗಿಂತ ಎತ್ತರದ ಕಟ್ಟಡ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದಾರೆ.. ಜಗತ್ತಿನಲ್ಲೇ ಅತಿ ಎತ್ತರದ ಪ್ರತಿಮೆ ಎಂದೇ ಹೆಸರಾಗಿರುವ 182 ಮೀಟರ್‌ ಎತ್ತರದ ಏಕತಾ ಪ್ರತಮೆಗಿಂತ 68 ಅಡಿ ಎತ್ತರದ ಗಗನಚುಂಡಿ ಕಟ್ಟಡ ಆಂದ್ರದಲ್ಲಿ ನಿರ್ಮಾಣವಾಗಲಿದೆ. ಅಂದರೆ 250 ಮೀಟರ್‌ ಎತ್ತರದ ಕಟ್ಟಡ ನಿರ್ಮಾಣ ಮಾಡುವುದಾಗಿ ತಿಳಿಸಿದ್ದಾರೆ.

ಈ ಕಟ್ಟಡ ಮೂರು ಅಂತಸ್ತುಗಳನ್ನು ಹೊಂದಿರುತ್ತದೆ ಹಾಗೂ 250 ಮೀಟರ್‌ ಎತ್ತರದ ಟವರ್‌ ಅನ್ನು ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ. ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಸದ್ಯ ಬಿಜೆಪಿ ವಿರೋಧಿ ಮೈತ್ರಿಕೂಟ ಸ್ಥಾಪನೆಗೆ ಮುಂದಾಗಿದ್ದಾರೆ. ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ ಕೆಲವೇ ದಿನಗಳ ಬಳಿಕ ಆಂಧ್ರ ಪ್ರದೇಶ ಸಿಎಂ ಈ ಘೋಷಣೆ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top