fbpx
ಅರೋಗ್ಯ

ಗ್ರೀನ್ ಟೀ ಸೇವನೆಯಿಂದ ಈ ಆರೋಗ್ಯಕಾರಿ ಪ್ರಯೋಜನಗಳನ್ನ ಪಡ್ಕೋಬೋದು

ಎಲ್ಲರಿಗೂ ಗೊತ್ತಿರುವಂತೆ ಈವತ್ತಿನ ಜನಾಂಗ ದೇಹಾರೋಗ್ಯಕ್ಕೆ ,ತುಂಬಾ ಪ್ರಾಮುಖ್ಯತೆ ಕೂಡುತ್ತದೆ ,ಆಯಾಸ ಪರಿಹರಿಸಿಕೊಳ್ಳಲು ಎಲ್ಲರೂ ಚಹಾ ಮತ್ತು ಕಾಫಿ ಮೊರೆಹೋಗುವುದು ಸುಳ್ಳಲ್ಲ . ಕ್ಯಾಲೋರಿ ಲೆಕ್ಕ ಹಾಕಿ ಊಟ ಮಾಡುವರಿಗೆ ಸಕ್ಕರೆ ,ಹಾಲು ಬೆರೆತ ಚಹಾ ಕುಡಿಯುವುದರಿಂದ ಪಥ್ಯವಾಗದ ವಿಷಯ .ಅಂದರೆ ಚಹಾ ಕುಡಿಯದೆ ದಿನವೇ ಪರಿಪೂರ್ಣವೆನಿಸುವುದಿಲ್ಲ .ಚಹಕ್ಕೆ ಪರ್ಯಾಯವಾದ ಎಲ್ಲರಿಗೂ ವರದಾನವಾದ ಆರೋಗ್ಯಕರ ಹಾಗು ಚೈತನ್ಯ ,ಬರಿಸುವ ಪರ್ಯಾಯವೆಂದರೆ ಗ್ರೀನ್ ಟೀ

 

 

 

ಚಹಾದಷ್ಟು ,ರುಚಿಯೆನಿಸದಿದ್ದರೂ,ಗ್ರೀನ್ ಟೀನಲ್ಲಿ ,ಆರೋಗ್ಯಕರ ,ಪೂರಕವಾದ ಅಂಶಗಳಿವೆ ಇದು ಕ್ಯಾನ್ಸರ್ ನಂತಹ ಮಾರಕ ರೋಗದೊಂದಿಗೆ ಹೋರಾಡುತ್ತದೆ ಜೊತೆಗೆ ತೂಕ ಇಳಿಸಲು ಕೂಡ ಸಹಾಯ ಮಾಡುತ್ತದೆ . ಇದು ಮಾರುಕಟ್ಟೆಯಲ್ಲಿ ಮುಖ್ಯವಾಗಿ ಧೂಮಪಾನ ಮಾಡುವರ ಅರೋಗ್ಯ ಸುಧಾರಿಸುವದಗೋಸ್ಕರ ಬಿಡುಗಡೆಯಾಯಿತು .ಇದರಲ್ಲಿರುವ ಆಂಟಿ ಅಸ್ಚ್ಸಿಡೆಂಟ್ ಗಳು ತುಂಬಾ ಪ್ರಸಿದ್ಧ ಪೇಯವಾಗಿ ಜನಪ್ರಿಯವಾಗಿದೆ .ಚೀನಿಯರು ಇದರಲ್ಲಿನ ಔಷಧೀಯ ಗುಣಗಳನ್ನು ಮಾದಲುಪತ್ತೆ ಹಚ್ಚಿ ಏಷಿಯಾದ ಎಲ್ಲಾ ದೇಶಗಳಿಗೆ ಪರಿಚಯಿಸಿದರು ,ಗ್ರೀನ್ ಟೀ ಮಹತ್ವಗಳ ಪಟ್ಟಿ ನೋಡಣ ಬನ್ನಿ .

 

 

 

ಇದರಲ್ಲಿರುವ ‘ಕ್ಯಾಟೆಚಿನ್’ ಎಂಬ ಆಂಟಿ ಆಕ್ಸಿಡೆಂಟ್ ದೇಹದಲ್ಲಿರುವ ಬ್ಯಾಕ್ಟೀರಿಯ ಹಾಗು ವೈರಸ್ ಗಳನ್ನೂ ನಿರ್ಣಾಮ ಮಾಡುತ್ತದೆ ದೇಹವನ್ನು ರೋಗಗಳಿಂದ ಸುರಕ್ಷಿಸುತ್ತದೆ .ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಿಸಿ , ಮಧುಮೇಹದಿಂದ ರಕ್ಷಣೆ ಒದಗಿಸುತ್ತದೆ .ರಕ್ತದಲ್ಲಿನ ಕೆಟ್ಟ ಕೊಲೆಸ್ಟ್ರಾಲನ್ನು ಕರಿಗಿಸುತ್ತದೆ .ಕ್ಯಾನ್ಸರಿಗೆ ಮಾರಕವಾದ ಜೀವಕೋಶಗಳನ್ನು ನಾಶಗೊಳಿಸುವುದಲ್ಲದೆ ,ಅವುಗಳ ಬೆಳವಣಿಗಗೆ ತಡೆಯುತ್ತದೆ . ಇದರಲ್ಲಿ ಅಮೀನೋ ಆಸಿಡ್ ಖಿನ್ನತೆಗೆ ರಾಮಬಾಣವಾಗಿದೆ .ಈಗಿನ ಧಾವಂತದ ಜೀವನದಲ್ಲಿ ಮೇಲೆ ಹೇಳಿರುವ ಎಲ್ಲ ರೋಗಗಳು ಬಹಳ ಸಾಮಾನ್ಯವಾಗಿದೆ .ಇವೆಲ್ಲವುಗಳು ಸುಲಭವಾದ ಪರಿಹಾರವೆಂದರೆ ಗ್ರೀನ್ ಟೀಯ ಸೇವನೆ ,ಆದ್ದರಿಂದ ಮಾರುಕಟ್ಟೆಯಲ್ಲಿ ಇದಕ್ಕೆ ಬಹಳ ಬೇಡಿಕೆ .ಗರ್ರೆನ್ ಟೀಯನ್ನು ಬ್ಲಾಕ್ ಟೀ ( ನಮ್ಮ ದಿನನಿತ್ಯದ ಚಹಾದ ) ಗಿಡದಿಂದಲೇ ಪಡೆಯಲಾಗುತ್ತದೆ ಆದರೆ ಗ್ರೀನ್ ಟೀನ ಎಲೆಗಳನ್ನು ಕಡಿ೮ಮೆ ಮಾಡಿ ಸಂಸ್ಕರಿಸಿಸುದರಿಂದ ಇದರಲ್ಲಿನ ಪೌಷ್ಟಿಕಾಂಶಗಳು ನಾಶವಾಗುವುದಿಲ್ಲ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top