fbpx
ಮನೋರಂಜನೆ

ಛೇ.. ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ ಭಾರತಕ್ಕೆ ಇಂಥಾ ಕೆಲಸ ಮಾಡಬಾರದಿತ್ತು.

ಶ್ರೀಲಂಕಾ ಬ್ಯಾಟಿಂಗ್​ ದಿಗ್ಗಜ, ಮಾಜಿ ಕ್ರಿಕೆಟರ್​ ಸನತ್​​ ಜಯಸೂರ್ಯ, ಈಗ ಕಳ್ಳ ಸಾಗಣೆ ಹಗರಣದಲ್ಲಿ ಸಿಲುಕಿದ್ದಾರೆ. ಜಯಸೂರ್ಯ ಹಾಗೂ ಇತರ ಕ್ರಿಕೆಟಿಗರು ಭಾರತಕ್ಕೆ ಕೊಳೆತ ಅಡಿಕೆಯನ್ನು ಅಕ್ರಮವಾಗಿ ಕಳ್ಳಸಾಗಣೆ ಮಾಡುತ್ತಿದ್ದ ಆರೋಪ ಕೇಳಿಬಂದಿದ್ದು, ಇಂಡೋನೇಷ್ಯಾದಿಂದ ಶ್ರೀಲಂಕಾಗೆ ಭಾರತದ ಮಾರ್ಗವಾಗಿ ವಸ್ತುಗಳನ್ನು ಸಾಗಣೆ ಮಾಡುವಾಗ ತೆರಿಗೆ-ತಪ್ಪಿಸುವ ಮೋಸದ ವ್ಯವಹಾರವನ್ನು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

ಇಂಡೋನೇಷ್ಯಾದಿಂದ ಭಾರತಕ್ಕೆ ಅಡಕೆ ಆಮದು ಮಾಡಲು ಶೇ. 108 ರಷ್ಟು ತೆರಿಗೆ ಪಾವತಿಸಬೇಕು, ತೆರಿಗೆ ಪಾವತಿಯಾದಲ್ಲಿ ಅಡಕೆಯ ದರ ದುಪ್ಪಟ್ಟಾಗುತ್ತದೆ. ಆದ್ರೆ ಸೌತ್​​ ಏಷ್ಯಾನ್​​ ಫ್ರೀ ಟ್ರೇಡಿಂಗ್​​ ಮೂಲಕ ಶ್ರೀಲಂಕಾದಿಂದ ಭಾರತಕ್ಕೆ ಆಮದು ಮಾಡುವಾಗ ಯಾವುದೇ ಸುಂಕ ಪಾವತಿಸಬೇಕಿಲ್ಲ. ಈ ನಿಯಮದ ಲಾಭ ಪಡೆದು, ಭಾರತದಕ್ಕೆ ಅಡಕೆಯ ಅಕ್ರಮ ಸಾಗಣಿಕೆ ನಡೆದಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಜನಪ್ರಿಯತೆಯನ್ನೇ ಬಳಸಿಕೊಂಡು ಲಂಕಾ ಅಧಿಕಾರಿಗಳಿಂದ ವ್ಯಾಪಾರ ಪರವಾನಗಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದ ಕ್ರಿಕೆಟಿಗರು ನಕಲಿ ಸಂಸ್ಥೆಗಳನ್ನು ಸೃಷ್ಟಿಸಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಪೊಲೀಸರು ಜಯಸೂರ್ಯಗೆ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ವಿಚಾರಣೆ ಕುರಿತು ಶ್ರೀಲಂಕಾ ಸರ್ಕಾರಕ್ಕೂ ಮಾಹಿತಿ ನೀಡಲಾಗಿದೆ.

ಇತ್ತೀಚಿಗಷ್ಟೇ ಕ್ರಿಕೆಟ್​​ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ, ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಕಾರಣಕ್ಕೆ ಐಸಿಸಿಯಿಂದ ಛೀಮಾರಿ ಹಾಕಿಸಿಕೊಂಡಿದ್ದ ಲಂಕಾ ಮಾಜಿ ಕ್ರಿಕೆಟರ್​ ವಿರುದ್ಧ ಈಗ ಸ್ಮಗ್ಲಿಂಗ್​ ಆರೋಪ ಕೇಳಿ ಬಂದಿರುವುದು ಅವರ ಅಭಿಮಾನಿಗಳಲ್ಲಿ ಬೇಸರ ತಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top