fbpx
ಸಿನಿಮಾ

ಅಭಿಮಾನಿಯ ಕ್ಯಾನ್ಸರ್ ಪೀಡಿತ ತಾಯಿಗೆ ಸಹಾಯ ಹಸ್ತ ಚಾಚಿದ ಕಿಚ್ಚ ಸುದೀಪ.

ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಅಂದರೆ ಪ್ರಾಣ. ಅದೇ ರೀತಿ ಅಭಿಮಾನಿಗಳ ಮೇಲೂ ಸುದೀಪ್ ಅವರಿಗೆ ಅಪಾರ ಪ್ರೀತಿ ಕಾಳಜಿಗಳಿವೆ. ಅವರದನ್ನು ತೋರಿಸಿಕೊಳ್ಳುವುದು ಕೆಲ ಸಂದರ್ಭಗಳಲ್ಲಿ ಮಾತ್ರ. ಹೊರ ಜಗತ್ತಿಗೆ ಕೊಂಚ ಒರಟಾಗಿ ಕಂಡರೂ ಎಲ್ಲರ ಬಗ್ಗೆಯೂ ಪ್ರೀತಿ ಮತ್ತು ಕಾಳಜಿ ಹೊಂದಿರೋ ಸುದೀಪ್ ಅವರು ತಮ್ಮ ಅಭಿಮಾನಿಗಳ ಕಷ್ಟಕ್ಕೆ ಕಣ್ಣೀರಾದ, ಅದೆಷ್ಟೇ ಬ್ಯುಸಿಯಾಗಿದ್ದರೂ ಸಹಾಯಕ್ಕೆ ಧಾವಿಸಿದ ಅದೆಷ್ಟೋ ಉದಾಹರಣೆಗಳಿವೆ.

 

 

ಸದ್ಯ ಅವರು ತಮ್ಮ ಅಭಿಮಾನಿಯ ಕ್ಯಾನ್ಸರ್ ಪೀಡಿತ ತಾಯಿಯ ಸಂಕಟಕ್ಕೆ ಮಿಡಿದಿದ್ದಾರೆ. ಸುದೀಪ್ ಅವ್ರ ಕಟ್ಟಾ ಅಭಿಮಾನಿ ಲಕ್ಷಣ್ ಗೌಡನ ತಾಯಿ ಮಂಗಳ ಎನ್ನುವವರಿಗೆ ಸ್ತನ ಕ್ಯಾನ್ಸರ್​​ ಇದ್ದು, ಈಗಾಗಲೇ ಎರಡು ಭಾರಿ ಆಪರೇಷನ್​​ ಮಾಡಲಾಗಿದೆ.. ಆದರೆ ಯಾವುದೇ ಆಪರೇಷನ್ ಯಾವುದೇ ಫಲಕಾರಿಯಾಗಿಲ್ಲ. ಆಕೆಗೆ ಕಾಯಿಲೆ ಹೆಚ್ಚಾದ ಕಾರಣ ಪುನಃ ಆಪರೇಷನ್​​ ಮಾಡಿಸಬೇಕೆಂದು ವೈದ್ಯರು ತಿಳಿಸಿದ್ದಾರಂತೆ. ಆದರೆ ಮತ್ತೊಮ್ಮೆ ಆಪರೇಷನ್ ಮಾಡಿಸುವಷ್ಟು ಆರ್ಥಿಕ ಶಕ್ತಿ ಇಲ್ಲದಿರುವ ಮಂಗಳ ಕುಟುಂಬಸ್ಥರ ವಿಚಾರ ಕಿಚ್ಚನಿಗೆ ಮುಟ್ಟಿದೆ..”,

ಟ್ವಿಟ್ಟರ್​​ ಮೂಲಕ ಲಕ್ಷಣ್ ಗೌಡ ಅವ್ರು ಕಿಚ್ಚನ ಬಳಿ ತಮ್ಮ ತಾಯಿಯ ಮಾರಣಾಂತಿಕ ರೋಗದ ಬಗ್ಗೆ ಹೇಳಿಕೊಂಡಿದ್ದಾರೆ.. ಅಭಿಮಾನಿಯ ಟ್ವೀಟ್ ನೋಡಿ ಪ್ರತಿಕ್ರಿಯಿಸಿರುವ ಕಿಚ್ಚಾ “​​ ನನ್ನ ಕೈಲಾದ ಸಹಾಯ ನಾನು ಖಂಡಿತ ಮಾಡುತ್ತೇನೆ. ಆಸ್ಪತ್ರೆಯ ವಿಳಾಸ ತಿಳಿಸಿ, ನಮ್ಮವರು ನಿಮ್ಮನ್ನು ಸಂಪರ್ಕ ಮಾಡ್ತಾರೆ. ಆದಷ್ಟು ಬೇಗ ನಿಮ್ಮ ತಾಯಿ ಹುಷಾರಾಗಲಿ ಎಂದು ಪ್ರಾರ್ಥಿಸಿಕೊಳ್ಳುತ್ತೇನೆ,” ಎಂದು ಕಿಚ್ಚ ಸುದೀಪ್ ತಿಳಿಸಿದ್ದಾರೆ.

ತಾವೆಷ್ಟೇ ಬ್ಯುಸಿಯಾಗಿದ್ದರೂ ಹೀಗೆ ಅಭಿಮಾನಿಗಳ ಸಂಕಟಕ್ಕೆ ಮಿಡಿಯುವ ಮನಸ್ಥಿತಿಯಿಂದಲೇ ಸುದೀಪ್ ಎಲ್ಲರಿಗೂ ಇಷ್ಟವಾಗುತ್ತಾರೆ.. ಕಿಚ್ಚನ ಈ ಹೃದಯ ವೈಶಾಲ್ಯತೆಗೆ ಎಂತವರೂ ಸೆಲ್ಯೂಟ್ ಹೊಡೆಯಲೇಬೇಕು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top