fbpx
ಮನೋರಂಜನೆ

84 ವರ್ಷದ ಇತಿಹಾಸದಲ್ಲೇ ಈ ವಾರ ಹೊಸ ದಾಖಲೆ ಬರೆದ ಸ್ಯಾಂಡಲ್‍ವುಡ್.

84 ವರ್ಷದ ಇತಿಹಾಸವಿರುವ ಇರುವ ಕನ್ನಡ ಚಿತ್ರರಂಗದಲ್ಲಿ ಈ ಶುಕ್ರವಾರ ದಾಖಲೆ ನಿರ್ಮಾಣವಾಗಲಿದೆ. ಒಂದೇ ವರ್ಷದಲ್ಲಿ 200ಕ್ಕೂ ಅಧಿಕ ಸಿನಿಮಾಗಳನ್ನು ಬಿಡುಗಡೆ ಮಾಡಿದ ದಾಖಲೆಯನ್ನು ಕನ್ನಡ ಚಿತ್ರರಂಗ ಈ ವಾರ ಬರೆಯಲಿದೆ. ಈವರೆಗೂ 204 ಕನ್ನಡ ಚಿತ್ರಗಳು ಬಿಡುಗಡೆ ಆಗಿದ್ದು, ವರ್ಷದ ಕೊನೆಯ ಹೊತ್ತಿಗೆ ಇದರ ಸಂಖ್ಯೆ 225 ದಾಟಲಿದೆ.

ಈ ವಾರ ‘ಕರ್ಷಣಂ’, ‘ವರ್ಣಮಯ’, ‘ಒಂದು ಸಣ್ಣ ಬ್ರೇಕ್ ನಂತರ’, ‘ಕಿಸ್ಮತ್’, ‘ಲೂಟಿ’, `ತಾರಕಾಸುರ’, ‘ರಾಹಿ’, ‘ನೀವ್ ಕರೆ ಮಾಡಿದ ಚಂದದಾರರು’ ಮತ್ತು ‘ಆಪಲ್ ಕೇಕ್’ ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ಈ ವಾರ ಬರೋಬ್ಬರಿ 10 ಚಿತ್ರಗಳು ಬಿಡುಗಡೆಯಾಗಲಿದ್ದು ಈ ಮೂಲಕ ಒಂದೇ ವರ್ಷದಲ್ಲಿ 204 ಚಿತ್ರಗಳು ಬಿಡುಗಡೆಗೊಂಡು ಹೊಸ ಇತಿಹಾಸ ಸೃಷ್ಟಿಯಾಗಲಿದೆ. 2018ರ ವರ್ಷದಲ್ಲಿ ಇನ್ನೂ ಐದು ಶುಕ್ರವಾರಗಳು ಉಳಿದಿವೆ. ಹೀಗಾಗಿ ಈ ವರ್ಷ ಮತ್ತಷ್ಟು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. ವರ್ಷದ ಕೊನೆಯ ಹೊತ್ತಿಗೆ ಇದರ ಸಂಖ್ಯೆ 225 ದಾಟಲಿದೆ ಎಂದು ಹೇಳಲಾಗುತ್ತಿದೆ.

2015 ರಲ್ಲಿ 136 ಚಲನಚಿತ್ರ ಬಿಡುಗಡೆಯಾಗಿದ್ದರೆ, 2016ರಲ್ಲಿ ಈ ಸಂಖ್ಯೆ 173ಕ್ಕೆ ಏರಿತ್ತು. 2017 ರಲ್ಲಿ ಅತಿ ಹೆಚ್ಚು 180 ಚಿತ್ರಗಳು ಬಿಡುಗಡೆಯಾಗಿತ್ತು.. ಇದೀಗ 2018ರಲ್ಲಿ ಚಿತ್ರಗಳ ಸಂಖ್ಯೆ ಇನ್ನೂರರ ಗಡಿ ದಾಟಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top