fbpx
ಸಮಾಚಾರ

ಇತರೆ ಹಣ್ಣುಗಳಿಗೆ ಹೋಲಿಸಿದರೆ ಗಿಣಿ ಕಚ್ಚಿದ ಹಣ್ಣು ಹೆಚ್ಚು ರುಚಿಯಾಗಿರುತ್ತದೆ! ಕಾರಣವೇನು ಗೊತ್ತಾ?

ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುವುದು ಯಾಕೆ ಗೊತ್ತಾ,ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುತ್ತದೆ ಎಂದು ನಮ್ಮಲ್ಲಿ ಬಹಳಷ್ಟು ಮಂದಿಗೆ ತಿಳಿದಿರುವ ವಿಷಯವೇ . ಹೇಳಬೇಕಂದರೆ ಆ ಸಿವಿಯನ್ನು ಸವಿದ ಅನುಭವವೂ ನಮಗಿದೆ.ಸೀಬೆಕಾಯಿಯ ಮರ ಹತ್ತಿದಾಗ ಗಿಣಿ ಕಚ್ಚಿದ ಹಣ್ಣನ್ನೇ ಹುಡುಕಿ ತಂದು ಕಚ್ಚಿದ ಭಾಗವನ್ನು ತೆಗೆದು ಉಳಿದಿದ್ದನ್ನು ತಿನ್ನುತ್ತೇವೆ.ಆದರೆ , ಎಂದಾದರೂ ಗಿಣಿ ಕಚ್ಚಿದ ಹಣ್ಣೇ ಸಿಹಿಯಾಗಿರುತ್ತೆ ಎಂಬ ಅನುಮಾನ ನಿಮ್ಮಲ್ಲಿ ಮೂಡಿರುತ್ತೆ.

 

 

 

ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುವುದಿಲ್ಲ , ಗಿಣಿಗಳು ಸಿಹಿಯಾದ ಹಣ್ಣುಗಳನ್ನೇ ಕಚ್ಚುತ್ತವೆ. ಅದರಿಂದಲೇ ಗಿಣಿ ಕಚ್ಚಿದ ಪ್ರತಿಯೊಂದು ಹಣ್ಣು ಸಿಹಿಯಾಗುತ್ತದೆ.ಸಾಮಾನ್ಯವಾಗಿ ಗಿಣಿಗಳು ಹಣ್ಣಿನ ಗಿಡಗಳ ಮೇಲೆಯೇ ಇರುತ್ತದೆ.ಹಣ್ಣು ಬೇಡುವ ಪ್ರತಿಯೊಂದು ಐದು ರೀತಿಯ ಹಾರ್ಮೋನ್ ಗಳನ್ನೂ ಬಿಡುಗಡೆ ಮಾಡುತ್ತದೆ.ಮೊದಲನೆಯದು ಆಕ್ಸಿನ್ , ಎರಡನೆಯದು ಜಿಬ್ಬರೆಲಿನ್, ಮೊರನೆದು ಸೈಟೋಕ್ಯನಿನ್ 4ನೇ ಇಥಲೀನ್ ,ಐದನೆಯದು ಅಬ್ ಸಿಸಿಕ್ ಆಮ್ಲ ಈ ಹಾರ್ಮೋನ್ ಗಳಲ್ಲಿ ಇಥಲೀನ್ ಎಂಬುದು ಹಣ್ಣು ಶೀಘ್ರವಾಗಿ ಪಕ್ವಕ್ಕೆ ಬರುವಂತೆ ಪ್ರೇರೇಪಿಸುತ್ತದೆ.ಗಿಣಿಗಳು ಇಥಲೀನ್ ನಲ್ಲಿರುವ ಒಂದು ಬೆಗೆಯ ವಾಸನೆಯನ್ನು ಕಂಡುಹಿಡಿದು ಅದರ ಸಹಾಯದಿಂದ ಪಕ್ವಕ್ಕೆ ಬರುವ ಹಣ್ಣುನ್ನು ತಿನ್ನಲು ಪ್ರಯ್ನತಿಸುತ್ತದೆ.

 

 

 

ಹಣ್ಣಿನ ಗಾತ್ರಕ್ಕೆ ತಕ್ಕಂತೆ ತನಗೆ ಬೇಕಾಗುವಷ್ಟು ಹಣ್ಣುನ್ನು ತಿಂದು ಉಳಿದಿದ್ದಿನ್ನು ಬಿಡುತ್ತದೆ. ಗಿಣಿ ಕಚ್ಚಿದ ಹಣ್ಣು ಸಿಹಿಯಾಗಿರುತ್ತದೆ ಎನ್ನುವುದಕ್ಕಿಂತಲೂ ಸಿಹಿಯಾದ ಹಣ್ಣನು ಗಿಣಿ ಕಚ್ಚುತ್ತದೆ ಅನ್ನುವುದು ಸೂಕ್ತ ಅಲ್ಲವೇ .

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top