fbpx
ಸಮಾಚಾರ

“ಸಂಯುಕ್ತ ಹೆಗ್ಡೆ ಕನ್ನಡದ ಸನ್ನಿ ಲಿಯೋನ್, ಎಣ್ಣೆ, ಗಾಂಜಾ ಈಲ್ಲಾ ಚಟ ಇರೋ ಹುಡುಗಿ” ವಿವಾದ ಎಬ್ಬಿಸಿದ ನಿರ್ದೇಶಕನ ಪೋಸ್ಟ್.

ತಮಗೇನಾದರೂ ಸಡನ್ನಾಗಿ ಹೆವಿ ಪ್ರಚಾರ ಬೇಕಿದ್ದರೆ ಎಂಥೆಂಥಾ ದಾರಿಗಳನ್ನು ಹುಡುಕಿಕೊಳ್ಳಬೇಕು ಎಂಬುದು ಚಿತ್ರರಂಗದಲ್ಲಿ ಅನೇಕರಿಗೆ ತುಂಬಾ ಚೆನ್ನಾಗಿ ಗೊತ್ತಿರುತ್ತೆ. ಅದರಂತೆ ಪ್ರಚಾರಕ್ಕಾಗಿಯೇ ಯಾವಾಗಲೂ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳುತ್ತಾರಲ್ಲಾ, ಅಂಥವರ ವಿರುದ್ಧ ಏನಾದರೂ ವಿವಾದಾತ್ಮಕ ಹೇಳಿಕೆ ನೀಡಿಬಿಟ್ಟರೆ ಸಾಕು.. ಪ್ರಚಾರ ಎಂಬುದು ನಿಮ್ಮನ್ನೂ ಹುಡುಕಿಕೊಂಡು ಬರುತ್ತದೆ.. ಇದೀಗ ಈ ರೂಟು ಹಿಡಿದುಕೊಂಡಿರುವವರು ಯುವ ನಿರ್ದೇಶಕ(?) ಎಂದು ಗುರುತಿಸಿಕೊಳ್ಳುತ್ತಿರುವ ಕೀರ್ತನ್ ಶೆಟ್ಟಿ ಎನ್ನುವವರು.. ಆತ ನೀಡಿರುವ ವಿವಾದಾದ್ಮಕ ಹೇಳಿಕೆ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಮೇಲೆ.

ನಟಿ ಸಂಯುಕ್ತಾ ಹೆಗಡೆ ಕನ್ನಡದ ನೀಲಿ ತಾರೆಯಂತೆ, ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೋ ಕನ್ನಡದಲ್ಲಿ ಸಂಯುಕ್ತಾ ಹೆಗಡೆ ಹಾಗೆ.. ಸಂಯುಕ್ತಾ ‘ಕರ್ನಾಟಕದ ಸನ್ನಿ ಲಿಯೋನ್​’ ಅಂತಾ ಸಾಮಾಜಿಕ ಜಾಲತಾಣದಲ್ಲಿ ಕೀರ್ತನ್ ಶೆಟ್ಟಿ ಬರೆದುಕೊಂಡಿದ್ದು, ಇದೀಗ ವಿವಾದ ಹುಟ್ಟುಹಾಕುತ್ತಿದೆ.. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅದೇನಾಯಿತೋ ಏನೋ ಕೀರ್ತನ್ ಡಿಲೀಟ್ ಮಾಡಿದ್ದಾರೇ.. ಅಂದಹಾಗೆ ಈ ಕೀರ್ತನ್ ಈ ಹಿಂದೆ ಸಂಯುಕ್ತ ಗಿಂತಲೂ ಹೆಚ್ಚು ವಿವಾದವನ್ನು ಮೈಮೇಲೆ ಹುಚ್ಚ ವೆಂಕಟ್ ಮೇಲೆಯೂ ಇದೇ ರೀತಿಯಾಗಿ ಪೋಸ್ಟ್ ಸುದ್ದಿಯಾಗಿದ್ದರು.

ಕೀರ್ತನ್​ ಸದ್ಯ ‘ಮೀಟೂ ವಿಥ್​ ಫೈಟು’ ಎಂಬ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದ ಕುರಿತು ತಮ್ಮ ಫೇಸ್​​ಬುಕ್​ನಲ್ಲಿ ಕೀರ್ತನ್​ ಬರೆದುಕೊಂಡಿದ್ದರು. ಈ ಬರಹದಲ್ಲಿ ನಟಿ ಸಂಯುಕ್ತಾ ಬಗ್ಗೆ ವಿವಾದಾತ್ಮಕವಾಗಿ ಬರೆದುಕೊಂಡಿದ್ದಾರೆ.

 

 

ಸಂಯುಕ್ತ ಕುರಿತು ಕೀರ್ತನ್ ಬರೆದ ಕೀರ್ತನ್ ಪೋಸ್ಟಿನ ಯಥಾವತ್ತು ರೂಪ ಈ ರೀತಿ ಇದೇ.

ನನ್ನ ಮೀಟೂ ವಿತ್ ಫೈಟೂ ಚಿತ್ರದ ಕಥೆಯ ಗುಟ್ಟನ್ನು ದಯಮಾಡಿ ಚಿತ್ರ ಶೂಟಿಂಗ್ ಆಗಿ ಬಿಡುಗಡೆಯಾಗುವರೆಗೂ ಬಿಟ್ಟು ಕೊಡಲ್ಲ. ಎಲ್ಲೂ ಕಾಣಿಸಿಕೊಳ್ಳಲ್ಲ. ಚಿತ್ರದ ಶೂಟಿಂಗ್ ಹೆಚ್ಚಾಗಿ ಹೈದರಾಬಾದ್ ನಲ್ಲಿ ಮಾಡುವ ಪ್ಲಾನ್ ನಮ್ಮ ತಂಡದ್ದು. ಇವಾಗ ಎಲ್ರೂ ಕೇಳ್ತಾರೆ ಏನ್ ಕಥೆ ಅಂತ ಶೇ.100 ರಲ್ಲಿ ಶೇ.10 ನ್ನು ಹೇಳ್ತಾ ಇದ್ದೀನಿ. ಅದರಲ್ಲೂ ಶ್ರೀ ರೆಡ್ಡಿಯದ್ದು ಯಾವ ಪಾತ್ರ ಯಾರ ಪಾತ್ರ ಅಂತ ನಾನು ಖಂಡಿತ ಹೇಳಲ್ಲ.

ನನ್ನ ಚಿತ್ರದಲ್ಲಿ ಕಿರಿಕ್ ಹುಡುಗಿ ಬಜಾರಿ ಅಂತ ಹೆಸರುವಾಸಿಯಾದ ಗಂಡು ಬೀರಿ ಸಂಯುಕ್ತ ಹೆಗ್ಡೆ ತರಹದ ಒಂದು ಪಾತ್ರ ಇದೆ. ಆ ಪಾತ್ರವನ್ನು ಇವಾಗ ಬಿಗ್ ಬಾಸ್ ಮನೆಯಲ್ಲಿರುವ ಸೋನು ಪಾಟೀಲ್ ಅವರು ಹೊರಗಡೆ ಬಂದಾಗ ಅವರತ್ರ ಮಾತಾಡಿ ಅವರತ್ರ ಮಾಡಿಸುವ ಪ್ಲಾನ್ ನಮ್ಮದ್ದು. ಸೋನು ಪಾಟೀಲ್ ನನಗೆ ವೈಯಕ್ತಿಕವಾಗಿ ಗೊತ್ತಿರುವ ಹುಡುಗಿ. ಇನ್ನುಳಿದ ಗುಟ್ಟನ್ನು ಸಮಯ ಬಂದಾಗ ನಾನೇ ಬಿಟ್ಟು ಕೊಡುವೆ.

ಸಂಯುಕ್ತ ಹೆಗ್ಡೆ ಒಬ್ಬಳು ಕೆಟ್ಟ ಹುಡುಗಿ ಅವಳಿಗೆ ಎಣ್ಣೆ, ಗಾಂಜಾ, ಸಿಗರೇಟ್ ಎಲ್ಲಾ ಕೆಟ್ಟ ಚಟ ಇರುವ ಹುಡುಗಿ ಅಂಥವರಿಂದ ನಮ್ಮ ಚಿತ್ರರಂಗ ಹಾಳಾಗುತ್ತಿದೆ. ದಯಮಾಡಿ ನನ್ನ ಚಿತ್ರದಲ್ಲಿ ಯಾವುದೇ ಕೆಟ್ಟ ಸಂದೇಶ ಇಲ್ಲ ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮತ್ತು ನಿಜವಾದ ಕಥೆಯಾದರಿತ ಸಿನಿಮಾ. ಸಂಯುಕ್ತ ಹೆಗ್ಡೆ ಕನ್ನಡದ ನೀಲಿ ತಾರೆ ಹಿಂದಿಯಲ್ಲಿ ಸನ್ನಿ ಲಿಯೋನ್ ಹೆಂಗೊ ಕನಾ9ಟಕದಲ್ಲಿ ಸಂಯುಕ್ತ ಹೆಗ್ಡೆ ಹಂಗೆ. ಗಂಡು ಬೀರಿ ಸಂಯುಕ್ತ ಎಂದು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ಪೋಸ್ಟ್ ನೋಡಿರುವ ಅನೇಕರು ಇದು ತಮ್ಮ ಸಿನಿಮಾ ಪ್ರಚಾರಕ್ಕಾಗಿ ಮಾಡಿರುವ ಪೋಸ್ಟ್ ಇದು. ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಹೇಳುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top