fbpx
ಅರೋಗ್ಯ

ಮದ್ಯಾಹ್ನದ ವೇಳೆ ಮಲ್ಕೋಳೊದು ಒಳ್ಳೆದಾ? ಕೆಟ್ಟದ್ದಾ? ಇಲ್ಲಿ ತಿಳ್ಕೊಳಿ.

ಮಧ್ಯಾಹ್ನ ನಿದ್ದೆ ಮಾಡುವವರನ್ನು ಸಾಮಾನ್ಯವಾಗಿ ಸೋಮಾರಿಗಳೆಂದು ಕರೆಯುತ್ತೇವೆ.ಮಧ್ಯಾಹ್ನ ಊಟದ ನಂತರ ನಿದ್ದೆ ಬರುವುದು ಸಾಮಾನ್ಯ.ಆದರೆ ಓಡುತ್ತಿರುವ ಈ ಪ್ರಪಂಚದಲ್ಲಿ ಜನಕ್ಕೆ ಮಧ್ಯಾಹ್ನ ಅಲ್ಲ ರಾತ್ರಿ ಕೂಡ ನಿದ್ದೆ ಮಾಡೋಕೆ ಸಮಯವಿರುವುದಿಲ್ಲ . ನಿದ್ದೆ ನಮ್ಮ ದೇಹದ ಆಯಾಸವನ್ನು ನಿವಾರಿಸುತ್ತದೆ, ದೇಹವು ಆಕ್ಟಿವ್ ಆಗಿರಲು ಸಹಕರಿಸುತ್ತದೆ.ಮಧ್ಯಾಹ್ನದ ವೇಳೆ ಅರ್ಧ ಗಂಟೆ ಮಲಗುವುದರಿಂದ ನಮ್ಮ ಮಿದುಳು ತುಂಬಾನೇ ಆಕ್ಟಿವ್ ಆಗಿರುತ್ತದೆ ಮತ್ತು ಸ್ವಚ್ಛವಾಗಿರುತ್ತದೆ.ಹೃದಯಾಘಾತವಾಗುವ ಪ್ರಮಾಣ ಶೇ.33 ರಷ್ಟು ಕಡಿಮೆಯಾಗುತ್ತದೆ.60 ವರ್ಷ ಮೇಲ್ಪ ಟ್ಟವರು ಮಧ್ಯಾಹ್ನ ಮಲಗುವುದರಿಂದ ಬೇರೆಯವರಿಗಿಂತ ಆಕ್ಟಿವ್ ಆಗಿರುತ್ತಾರೆ.ಜೊತೆಗೆ ಅವರ ಬುದ್ಧಿವಂತಿಕೆಯ ಮಟ್ಟ ಹೆಚ್ಚಾಗುವುದು.

 

 

 

ನೌಕರಿ ಮಾಡುವವರು, ವ್ಯಾಪಾರ ಮಾಡುವವರು ಮಧ್ಯಾಹ್ನ ಅರ್ಧ ಗಂಟೆ ಮಲಗುವುದರಿಂದ ಅವರಲ್ಲಿ ಚೈತನ್ಯದ ಜೊತೆ ಶೇ.64 ರಷ್ಟು ಹೃದಯಾಘಾತದ ಪ್ರಮಾಣ ಕಡಿಮೆಯಾಗುತ್ತದೆ ಎಂದು ಅಮೆರಿಕಾದ ಹಾವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ರವರು ನಡೆಸಿದ ಸಂಶೋಧನೆಯಿಂದ ದೃಢಪಟ್ಟಿದೆ.ಪ್ರತಿದಿನ ಮಧ್ಯಾಹ್ನ ಅರ್ಧ ಗಂಟೆ ಮಲಗಲು ಆಗದಿದ್ದಲ್ಲಿ ವಾರಕ್ಕೆ ಮೂರು ದಿನವಾದರೂ ಮಲಗಿದರೆ ಹೃದಯ ಸಂಬಂಧಿ ಕಾಯಿಲೆಗಳು ಬರುವುದಿಲ್ಲ.ಎಡಗಡೆ ಕೈಯಲ್ಲಿ ತಲೆಯನ್ನು ಇಟ್ಟು ಮಲಗುವುದರಿಂದ ನಮ್ಮಲ್ಲಿನ ಸೂರ್ಯನಾಡಿ ಆಕ್ಟಿವ್ ಆಗುತ್ತದೆ. ರೋಗ ಬರದಂತೆ ತಡೆಯುತ್ತದೆ.ಎನರ್ಜಿ ರೀಬೂಟ್ ಮಾಡಿ ಇಡೀ ದಿನ ಪ್ರೆಶ್ ಆಗಿರಲು ಸಹಕರಿಸುತ್ತದೆ.ಮಧ್ಯಾಹ್ನದ ಅರ್ಧ ಗಂಟೆ ನಿದ್ದೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಯೋಜನಕಾರಿಯಾಗಿದೆ.ಹಾಗಂತ ಇಡೀ ದಿನ ಮಲಗಿ ಅರೋಗ್ಯ ಹಾಳು ಮಾಡಿಕೊಳ್ಳಬೇಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top