fbpx
ಮನೋರಂಜನೆ

ರಿಯಲ್ ಲೈಫ್ ನಲ್ಲೂ ಹೀರೊ ಆದ ಉದ್ಘರ್ಷ ನಾಯಕ- 2ಕಿಮೀ ಓಡಿ ಅಸಹಾಯಕ ನಾಯಿಯನ್ನು ಕಾಪಾಡಿದ ಠಾಕೂರ್ – ವಿಡಿಯೋ ನೋಡಿ.

ಸುನೀಲ್‌ಕುಮಾರ ದೇಸಾಯಿ ಯವರ ನಿರ್ದೇಶನದ ಉದ್ಘರ್ಷ ಸಿನಿಮಾದ ನಾಯಕ ಠಾಕೂರ್‌ ಅನೂಪ್‌ ಸಿಂಗ್‌ ರಿಯಲ್‌ ಲೈಫ್‌ನಲ್ಲೂ ಹೀರೋ ಆಗಿ ಮಿಂಚುತ್ತಿದ್ದಾರೆ. ಹೌದು ನಾಯಕ ಠಾಕೂರ್‌ ಅನೂಪ್‌ ಸಿಂಗ್‌ ಅಂತಹದೊಂದು ಅಪರೂಪದ ಕೆಲಸವನ್ನು ಮಾಡಿದ್ದಾರೆ. ರಸ್ತೆ ಬದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ನಾಯಿಯೊಂದನ್ನು ರಕ್ಷಿಸಿದ್ದಾರೆ. ಅಲ್ಲದೆ, ತಮ್ಮನ್ನು ಕಂಡು ಓಡಲೆತ್ನಿಸಿದ ನಾಯಿಯನ್ನು ಎರಡು ಕಿ.ಮೀ ದೂರ ಬೆನ್ನಟ್ಟಿ ಹಿಡಿದು ಅದನ್ನು ರಕ್ಷಿಸಿದ್ದಾರೆ. ಆ ವೀಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಎಂದಿನಂತೆ ಲೈಕ್ ಮತ್ತು ಶೇರ್ ಗಳ ಮಹಾಪೂರವೇ ಹರಿದುಬಂದಿದೆ.

<strong> ಈ ಘಟನೆಯ ಕುರಿತು ಕೇಳಿದಾಗ ಉದ್ಘರ್ಷ ಸಿನಿಮಾದ ನಾಯಕ ಠಾಕೂರ್‌ ಅನೂಪ್‌ ಸಿಂಗ್‌ ಹೇಳಿದ್ದಿಷ್ಟು :</strong>

&nbsp;

“ಶೂಟಿಂಗ್‌ ಮುಗಿಸಿ ರಾತ್ರಿ ಬೆಂಗಳೂರು ಏರ್‌ಪೋರ್ಟ್‌ಗೆ ಹೋಗುತ್ತಿದ್ದಾಗ ನಾಯಿಯೊಂದು ಕಾಣಿಸಿತು. ಅದರ ತಲೆ ಪ್ಲಾಸ್ಟಿಕ್‌ ಡಬ್ಬಿಯೊಂದಕ್ಕೆ ಸಿಲುಕಿಕೊಂಡಿತ್ತು. ಅಸಹಾಯಕತೆಯಿಂದ ಬಳಲುತ್ತಾ ಹೈವೇ ಬದಿಯಲ್ಲಿ ಕುಳಿತಿತ್ತು. ನಾನು ಮತ್ತು ನನ್ನ ತಂಡವದರು ಅದನ್ನು ರಕ್ಷಿಸಲು ನಿರ್ಧರಿಸಿದೆವು. ಕಾರು ಇಳಿದು ಹತ್ತಿರಕ್ಕೆ ಬಂದಾಗ ಅದು ಭಯದಿಂದ ಓಡಲು ಶುರು ಮಾಡಿತು. ನಾವೂ ಅದನ್ನು ಹಿಂಬಾಲಿಸುತ್ತಾ ಓಡಿದೆವು. ಅದು ಮತ್ತೂ ಎರ್ರಾಬಿರ್ರಿ ಓಡತೊಡಗಿತು. ಕೊನೆಗೂ ಎರಡು ಕಿ.ಮೀ ಓಡಿ ಹೇಗೋ ಹಿಡಿದು ನಿಧಾನವಾಗಿ ನಾಯಿಯ ತಲೆಗೆ ಸಿಲುಕಿದ್ದ ಡಬ್ಬಿ ತೆಗೆದು ಬಚಾವು ಮಾಡಿದೆವು. ಇದರಿಂದ ನಮಗೆಲ್ಲರಿಗೂ ಖುಷಿಯಾಯಿತು ಆದರೆ ನಾವು ನಾಯಿಯನ್ನು ಹಿಂಬಾಲಿಸುತ್ತಿದ್ದನ್ನು ನೋಡಿದ ದಾರಿಹೋಕರು ಮೂಕಪ್ರೇಕ್ಷಕರಂತಿದ್ದರು. ನಾವು ಏತಕ್ಕಾಗಿ ಓಡುತ್ತಿದ್ದೇವೆಂದು ತಿಳಿದುಕೊಳ್ಳುವ ಕುತೂಹಲವೂ ಅವರಿಗಿಲ್ಲವಲ್ಲವೆಂದು ಬೇಜಾರಾಯಿತು” ಎಂದಿದ್ದಾರೆ.

ಸುನೀಲ್‌ಕುಮಾರ ದೇಸಾಯಿ ನಿರ್ದೇಶನದ ಉದ್ಘರ್ಷ ಸಿನಿಮಾದಲ್ಲಿ ಅನೂಪ್‌ ನಾಯಕನಾಗಿ ನಟಿಸುತ್ತಿದ್ದು,ಇದು ಅವರ ಮೊದಲ ಕನ್ನಡ ಸಿನಿಮಾವಾಗಿದೆ.

ಹಾಗಾದರೆ ಬನ್ನಿ ಸ್ನೇಹಿತರೇ, ಉದ್ಘರ್ಷ ಸಿನಿಮಾದ ನಾಯಕ ಠಾಕೂರ್‌ ಅನೂಪ್‌ ಸಿಂಗ್‌ ರವರು ನಾಯಿಯನ್ನು ರಕ್ಷಿಸಿದ ವಿಡಿಯೋ ನೋಡೋಣ..

<iframe style=”border: none; overflow: hidden;” src=”https://www.facebook.com/plugins/video.php?href=https%3A%2F%2Fwww.facebook.com%2Fthakuranoopsinghofficial%2Fvideos%2F290629631571819%2F&amp;show_text=0&amp;width=476″ width=”476″ height=”476″ frameborder=”0″ scrolling=”no” allowfullscreen=”allowfullscreen”></iframe>

&nbsp;

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top