fbpx
ಸಮಾಚಾರ

ಏನಿದು ಮೈತ್ರಿ ಸರ್ಕಾರದ ‘ಬಡವರ ಬಂಧು’ ಯೋಜನೆ? ಇದರಿಂದಾಗುವ ಪ್ರಯೋಜನವೇನು? ಫಲಾನುಭವಿಗಳು ಯಾರು?

ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ‘ಬಡವರ ಬಂಧು’ ಯೋಜನೆಗೆ ಗುರುವಾರ ಚಾಲನೆ ಸಿಕ್ಕಿದೆ. ಯಶವಂತಪುರದ ತರಕಾರಿ ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ‘ಬಡವರ ಬಂಧು’ ಮೊಬೈಲ್ ಬ್ಯಾಂಕಿಂಗ್ ವಾಹನಕ್ಕೆ ಚಾಲನೆ ನೀಡುವ ಮೂಲಕ ಸಿಎಂ ಎಚ್.ಡಿ. ಕುಮಾರಸ್ವಾಮಿ ಯೋಜನೆಗೆ ಚಾಲನೆ ನೀಡಿದ್ದಾರೆ. “ಮೀಟರ್ ಬಡ್ಡಿ ದಂಧೆಕೋರರಿಂದ ಸಣ್ಣ ವ್ಯಾಪಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಈ ಯೋಜನೆ ರೂಪಿಸಿದೆ.

 

 

ಏನಿದು ಬಡವರ ಬಂಧು ಯೋಜನೆ?
ಬೀದಿ ಬದಿಯ ಬಡ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದಲ್ಲಿ ₹10 ಸಾವಿರ ರೂಪಾಯಿ ವರೆಗೆ ಸಾಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. ಈ ಯೋಜನೆ ಇಂದ ಬೀದಿ ಬದಿ ವ್ಯಾಪಾರಿಗಳಿಗೆ ಇನ್ನು ಮುಂದೆ ಬಡ್ಡಿಯೇ ಇಲ್ಲದ ದಿನದ ಸಾಲ ಲಭ್ಯವಾಗಲಿದೆ. ಮೀಟರ್ ಬಡ್ಡಿ ದಂಧೆಕೋರರಿಂದ ಸಣ್ಣ ವ್ಯಾಪಾರಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಕಾಂಗ್ರೆಸ್​-ಜೆಡಿಎಸ್​ ಸಮ್ಮಿಶ್ರ ಸರ್ಕಾರ ಈ ಯೋಜನೆಯನ್ನು ರೂಪಿಸಿದೆ.

ಯೋಜನೆಯ ಫಲಾನುಭವಿಗಳು ಯಾರು?
1.ರಸ್ತೆ ಬದಿ ತಳ್ಳು ಗಾಡಿ,ಮೋಟಾರು ವಾಹನದಲ್ಲಿ ಪಾನೀಯ, ತಿಂಡಿ, ಊಟ, ಸಿಹಿ ಪದಾರ್ಥ ಮತ್ತಿತರ ಹೋಟೆಲ್‌ ಸೇವೆ ನೀಡುವವರು.

2.ತಳ್ಳು ಗಾಡಿ ಅಥವಾ ಮೋಟಾರು ವಾಹನದಲ್ಲಿ ತರಕಾರಿ, ಹಣ್ಣು, ಹೂವು, ಕಾಯಿ ಮಾರುವವರು ಮತ್ತು ರಸ್ತೆ ಬದಿಯ ಬುಟ್ಟಿ ವ್ಯಾಪಾರಿಗಳು.

3.ಪಾದರಕ್ಷೆ, ಚರ್ಮ ಉತ್ಪನ್ನಗಳ ರಿಪೇರಿ, ಮಾರಾಟದಲ್ಲಿ ತೊಡಗಿರುವ ಬೀದಿ ವ್ಯಾಪಾರಿಗಳು.

4.ಆಟದ ಸಾಮಾನು, ಇತರೆ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವವರು.

5.ಬಿಪಿಎಲ್‌ ಕಾರ್ಡ್‌ ಹೊಂದಿರುವ ವ್ಯಾಪಾರಿಗಳಿಗೆ ಮಾತ್ರ ಈ ಯೋಜನೆ ಅನ್ವಯ.

6.ರಸ್ತೆ ಬದಿ ಸ್ವಚ್ಛತೆ ಹಾಳು ಮಾಡುವ ಹಾಗೂ ಪರಿಸರಕ್ಕೆ ಹಾನಿಯಾಗುವ ವಸ್ತು ಉಪಯೋಗಿಸುವ ಸಣ್ಣ ವ್ಯಾಪಾರಿಗಳಿಗೆ ಈ ಸೌಲಭ್ಯವಿಲ್ಲ.

ಅನುಕೂಲಗಳೇನು?
1. ಬಡ ವರ್ತಕರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗುತ್ತದೆ.
2. ಹಣವನ್ನು 3 ತಿಂಗಳೊಳಗೆ ಮರುಪಾವತಿಸಬೇಕು, ಸಕಾಲದಲ್ಲಿ ತೀರಿಸಿದರೆ 2ನೇ ಬಾರಿ 15 ಸಾವಿರ ಸಾಲ ದೊರೆಯುತ್ತದೆ.
3.ಸಾಲದ ಸುಳಿಯಲ್ಲಿ ಸಿಲುಕಿರುವ ಬಡ ವ್ಯಾಪಾರಿಗಳ ಕಷ್ಟ ಕೊಂಚ ಇಳಿಯುತ್ತದೆ.
4. ಮೀಟರ್ ಬಡ್ಡಿ ದಂಡೆಗೆ ಶಾಶ್ವತ ಕಡಿವಾಣ ಬೀಳುತ್ತದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top