fbpx
ಸಮಾಚಾರ

“ಮೋದಿ ಜನರನ್ನು ನಿರಾಸೆಗೊಳಿಸಿದ್ದಾರೆ” ಸದಾ ಹೊಗಳುತ್ತಿದ್ದ ಪವನ್ ಕಲ್ಯಾಣ್ ಈಗ ಟೀಕೆ.

ಇಲ್ಲಿಯವರೆಗೂ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಹಾಡಿ ಹೊಗಳುತ್ತಿದ್ದ ಪವರ್ ಸ್ಟಾರ್ ಪವನ್ ಕಲ್ಯಾಣ್ ಇದೀಗ ಪ್ರಧಾನಿಯನ್ನು ಟೀಕಿಸಲು ಶುರುವಿಟ್ಟಿದ್ದಾರೆ. “ಜನರು ಮೋದಿಯವರ ಬಳಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು ಆದರೆ ಪ್ರಧಾನಿ ನರೇಂದ್ರ ಮೋದಿ ಜನರನ್ನು ನಿರಾಶೆಗೊಳಿಸಿದ್ದಾರೆ ಎಂದು ಪವನ್ ಕಲ್ಯಾಣ್ ಗುರುವಾರ ಹೇಳಿದ್ದಾರೆ.

ಜನ ಸೇನಾ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವ್ರು “ಬಿಜೆಪಿ ಅಧಿಕಾರಕ್ಕೆ ಬಂದಾಗ, ಕಾಂಗ್ರೆಸ್ ಆಳ್ವಿಕೆಯ ಸಮಯದಲ್ಲಿ ಮಾಡಿದ ತಪ್ಪುಗಳನ್ನು ಇವರೂ ಪುನರಾವರ್ತಿಸಿದರು ಮತ್ತು ಜನರಿಗೆ ನೋವುಂಟು ಮಾಡಿದೇ. ಮೋದಿ ಭರವಸೆ ಕೊಟ್ಟ ರೀತಿ ಆಡಳಿತ ನಡೆಸುತ್ತಿಲ್ಲ.” ಎಂದು ಪವನ್ ಕಲ್ಯಾಣ್ ಹೇಳಿದರು.

2014ರಲ್ಲಿ ತಾವು ಜನಸೇನಾ ಪಕ್ಷವನ್ನು ಸ್ಥಾಪಿಸಿದ್ದಾಗ ನರೇಂದ್ರ ಮೋದಿಗೆ ತಮ್ಮ ಸಂಪೂರ್ಣ ಎಂಬಲ ಎಂದು ಘೋಷಿಸಿದ್ದ ಪವನ್ ಕಲ್ಯಾಣ್ ಇದೀಗ ಪ್ರಧಾನಿ ವಿರುದ್ಧವೇ ಮಾತನಾಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗುತ್ತಿದೆ.. ಪವನ್ ಕಲ್ಯಾಣ್ ಸಹಾಯದಿಂದ ಆಂಧ್ರದಲ್ಲಿಯೂ ಕಮಲವನ್ನು ಅರಳಿಸಲು ಸಜ್ಜಾಗಿದ್ದ ಮೋದಿ ಅಂಡ್ ಟೀಮಿನ ಆಸೆಗೆ ಪವನ್ ಕಲ್ಯಾಣ್ ಒಂದು ರೀತಿಯ ತಣ್ಣೀರು ಸುರಿಯಲು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top