fbpx
ಮನೋರಂಜನೆ

ಕಿರಿಕ್ ಹುಡುಗಿ ರಶ್ಮಿಕಾ ಇಷ್ಟೊಂದು ನಾಚಿ ನೀರಾಗಿದ್ದು ಯಾಕೆ?

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಏಕಾಏಕಿ ಪಡ್ಡೆ ಹುಡುಗರಿಗೆ ಕಚಗುಳಿ ಇಟ್ಟಾಕೆ ರಶ್ಮಿಕಾ ಮಂದಣ್ಣ. ಒಂದೇ ಒಂದು ಚಿತ್ರದ ಮೂಲಕ ನಂಬರ್ ಒನ್ ನಟಿಯರನ್ನೇ ಮೀರಿಸುವಂತೆ ಈಕೆ ಮಿರುಗಿದ ರೀತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಆ ನಂತರದಲ್ಲಿ ಪುನೀತ್‌, ಗಣೇಶ್, ದರ್ಶನ್ ರಂತಹ ದೊಡ್ಡ ನಟರ ಜೊತೆಗೂ ನಟಿಸೋ ಅವಕಾಶ ಗಿಟ್ಟಿಸಿಕೊಂಡಿರುವ ರಶ್ಮಿಕಾ ಇದೀಗ ಕನ್ನಡಕ್ಕಿಂತ ತೆಲುಗಿನಲ್ಲೆ ಠಿಕಾಣಿ ಹೂಡಿದ್ದಾಳೆ..

ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ವೈಯಕ್ತಿಕ ಜೀವನ ಹಾಗೂ ನಾನಾ ಕಾರಣಗಳಿಗೆ ವಿವಾದಕ್ಕೀಡಾಗುವ ಮೂಲಕವೇ ಸುದ್ದಿಯಾಗುತ್ತಿದ್ದ ರಶ್ಮಿಕಾ ಇದೀಗ ರಿಲ್ಯಾಕ್ಸ್ ಮೂಡಿನಲ್ಲಿದ್ದಾಳೆ. ಇತ್ತೀಚೆಗೆ ಲಂಡನ್​ ಪ್ರವಾಸ ಮಾಡಿದ್ದು, ಅದರ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪ್ರಕಟಿಸಿದ್ದಾರೆ. ಆದರೆ ಅದಕ್ಕೆ ಅವರು ನೀಡಿರುವ ಶೀರ್ಷಿಕೆ ಈಗ ಅವರನ್ನು ನಗೆಪಾಟಲಿಗೀಡು ಮಾಡಿದೆ.

ಹೌದು, ಕ್ಯಾಮೆರಾ ಮುಂದೆ ಭಯವಿಲ್ಲದೆ ಲೀಲಾಜಾಲವಾಗಿ ನಟಿಸಿ ಪ್ರೇಕ್ಷಕರ ಹೃದಯಕ್ಕೆ ಕನ್ನ ಹಾಕಿರುವ ರಶ್ಮಿಕಾಗೆ ಫೋಟೋ ತೆಗೆಸಿಕೊಳ್ಳಲು ಹಾಗೂ ಸೆಲ್ಫಿ ತೆಗೆದುಕೊಳ್ಳಲು ನಾಚಿಕೆ ಹಾಗೂ ಹಿಂಜರಿಕೆಯಂತೆ. ಹಾಗಂತ ನಾವು ಹೇಳ್ತಿಲ್ಲ. ಸ್ವತಃ ರಶ್ಮಿಕಾನೇ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

“ನನಗೆ ಫೊಟೋಸ್​​​​ ಅಥವಾ ಸೆಲ್ಫಿ ತೆಗೆದುಕೊಳ್ಳೋದಕ್ಕೆ ತುಂಬಾನೇ ನಾಚಿಕೆ ಆಗುತ್ತೆ. ಆದ್ರೆ ನಿಮ್ಮಲ್ಲಿ ಕೆಲವರು ಕೇಳುತ್ತಿರುವುದರಿಂದ ಶೇರ್ ಮಾಡುತ್ತಿದ್ದೇನೆ. ಲಂಡನ್​​ ಪ್ರವಾಸದ ಕೊನೆಯ ದಿನ ನನ್ನ ಗೆಳತಿ ಸನ್ಮತಿ ಈ ಫೋಟೋಸ್​​ ಕ್ಲಿಕ್ಕಿಸಿದ್ದಾಳೆ” ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top