fbpx
ಮನೋರಂಜನೆ

ರೊಮ್ಯಾಂಟಿಕ್ ಮೂಡಿಗೆ ಜಾರಿದ ‘ಯಜಮಾನ’- ಸ್ವೀಡನ್ ನಲ್ಲಿ ದರ್ಶನ್ ರಶ್ಮಿಕಾ ಡುಯೆಟ್.

ಪ್ರೇಕ್ಷಕ ವಲಯದಲ್ಲಿ ನಾನಾ ಕಾರಣಗಳಿಂದ ವಿಪರೀತಿ ನಿರೀಕ್ಷೆ ಹುಟ್ಟುಹಾಕಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಂದಿನ ಸಿನಿಮಾ `ಯಜಮಾನ ಮಾತಿನ ಭಾಗದ ಚಿತ್ರೀಕರಣವನ್ನು ಕಂಪ್ಲೀಟ್ ಮಾಡಿಕೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದೆ.. ಚಿತ್ರದ ಟೈಟಲ್’ನಿಂದ ಹಿಡಿದು ತಾರಾಗಣದವರೆಗೆ ಎಲ್ಲದರಲ್ಲೂ ಕುತೂಹಲ ಮೂಡಿಸಿರುವ ಯಜಮಾನ ಚಿತ್ರತಂಡ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಚಿತ್ರದ ತಂಡ ಸ್ವಿಡನ್ ಗೆ ಹಾರೀದೆ.

 

 

ಅಪಘಾತದ ಬಳಿಕ ಚೇತರಿಸಿಕೊಂಡಿರುವ ದರ್ಶನ್ ಸದ್ಯ ಯಜಮಾನ ಚಿತ್ರದ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ಯಜಮಾನ ಸಿನಿಮಾದ ರೊಮ್ಯಾಂಟಿಕ್ ಹಾಡೊಂದು ಸ್ವೀಡನ್‌ ನಲ್ಲಿ ಚಿತ್ರೀಕರಣಗೊಳ್ಳಲಿದೆ. ಹಾಗಾಗಿ ಇಡೀ ಸಿನಿಮಾ ತಂಡ ನಿನ್ನೆ ಸ್ವೀಡನ್‌ ಗೆ ಪ್ರಯಾಣ ಬೆಳೆಸಿದೆ. ಈಗಾಗಲೇ ಏರ್‌ಪೋರ್ಟ್ ಸೇರಿದಂತೆ ಸ್ವೀಡನ್ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮುಂದಿನ ಏಳು ದಿನಗಳ ಕಾಲ ಹಾಡಿನ ಚಿತ್ರೀಕರಣ ನಡೆಯಲಿದೆ.. ಹಾಡಿನೊಂದಿಗೆ ಚಿತ್ರೀಕರಣಕ್ಕೆ ಕುಂಬಳಕಾಯಿ ಹೊಡೆಯಲಿರುವ ಚಿತ್ರತಂಡ ಆ ನಂತರ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಲಿದೆ.

ಯಜಮಾನ ಬಗ್ಗೆ.
ಬಿ ಸುರೇಶ್ ಮತ್ತು ಶೈಲಜಾ ನಾಗ್ ಅವರು ತಮ್ಮ ಮೀಡಿಯಾ ಹೌಸ್ ಕಡೆಯಿಂದ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಪೊನ್ನು ಕುಮಾರ್ ಯಜಮಾನ ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ.. ವಿ ಹರಿಕೃಷ್ಣ ಅವರು ಸಂಗೀತ ನಿರ್ದೇಶನ ಮಾಡುತಿದ್ದರೆ ಭರ್ಜರಿ ಚೇತನ್ ಸಂಭಾಷಣೆ ಬರೆಯುತ್ತಿದ್ದಾರೆ. ದರ್ಶನ್’ಗೆ ನಾಯಕಿಯರಾಗಿ, ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಟಿಸಿದ್ದು ಧನಂಜಯ್ ಮತ್ತು ಸಿಂಗಂ ಖ್ಯಾತಿಯ ಥಾಕುರ್ ಅನೂಪ್ ಸಿಂಗ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top