fbpx
ಸಮಾಚಾರ

ವಿದ್ವತ್ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ನಲಪಾಡ್​ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಲೆಮರೆಸಿಕೊಂಡಿರುವ ಮೂರನೇ ಆರೋಪಿ ಕೃಷ್ಣ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.ಈ ನಡುವೆ ಆರೋಪಿ ಕೃಷ್ಣಗಾಗಿ ಸಿಸಿಬಿ ಪೋಲಿಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದು, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಹಿನ್ನಲೆಯಲ್ಲಿ ಆರೋಪಿ ಕೃಷ್ಣನಿಗಾಗಿ ಲುಕ್ ಬೌಟ್ ನೋಟಿಸ್ ಅನ್ನು ಹೊರಡಿಸಿದ್ದಾರಂತೆ.

ಇದರ ನಡುವೆ ಆರೋಪಿ ಕೃಷ್ಣ ವಿದ್ವತ್ ಗೆ ಕರೆ ಮಾಡಿ ನೀನು ನೀಡಿರುವ ದೂರಿನ ಸಂಬಂಧ ಕೂಡಲೇ ಕೇಸ್ ಅನ್ನು ವಾಪಸ್ಸು ತೆಗೆದುಕೊಂಡು, ರಾಜೀಯಾಗು ಅಂತ ಹೇಳಿದ್ದಾನೆ ಎನ್ನಲಾಗಿದೆ.

ಇನ್ನು ವಿದ್ವತ್ ತನಗೆ ಬಂದ ಕರೆಗೆ ಸಂಬಂಧಪಟ್ಟಂತೆ ಸಿಸಿಬಿ ಪೋಲಿಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಕೃಷ್ಣ ಮಾತನಾಡಿರುವ ಮಾತುಗಳನ್ನು ತಿಳಿಸಿ ದೂರು ನೀಡಿದ್ದಾರೆ ಎನ್ನುವದು ತಿಳಿದು ಬಂದಿದೆ.

ಈ ಘಟನೆ ನಡೆಯುತ್ತಿದ್ದಂತೆ ಎಚ್ಚತ್ತುಕೊಂಡಿರುವ ಸಿಸಿಬಿ ಪೋಲಿಸ್ ಹಿರಿಯ ಅಧಿಕಾರಿಗಳು ವಿದ್ವತ್ ಗೆ ಕೂಡಲೇ ಸಂಜಯ್ ನಗರ ಭದ್ರತೆಯನ್ನು ಪೊಲೀಸರಿಗೆ ನೀಡುವಂತೆ ಹೇಳಿದ್ದಾರೆ ಎನ್ನಲಾಗಿದೆ.

ಇಲ್ಲಿಯತನಕ ಈ ಪ್ರಕರಣದಲ್ಲಿ ಈ ರೀತಿಯ ಬದಲಾವಣೆಗಳು ಕಂಡು ಬಂದಿದ್ದು, ಮುಂದೆ ಈ ಪ್ರಕರಣ ಇನ್ನೆಷ್ಟು ರೀತಿಯಲ್ಲಿ ತಿರುವುಗಳನ್ನು ಪಡೆದುಕೊಳ್ಳುತ್ತದೋ ಕಾದ್ದು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top