fbpx
ಮನೋರಂಜನೆ

ವಾಸ್ತು ದೋಷಕ್ಕೆ ಹೆದರಿ ಬೇರೆ ಮನೆಗೆ ಶಿಫ್ಟ್ ಆಗುತ್ತಾರಾ ಧ್ರುವ ಸರ್ಜಾ?

ಸ್ಯಾಂಡಲ್ ವುಡ್ ನ ಲ್ಲಿ ಆಕ್ಷನ್ ಪ್ರಿನ್ಸ್ ಎಂದೇ ಹೆಸರು ವಾಸಿಯಾಗಿರುವ ಧ್ರುವ ಸರ್ಜಾ ರವರು ಪ್ರೇರಣಾ ಶಂಕರ್ ಎಂಬುವ ಯುವತಿಯನ್ನ ಮದುವೆಯಾಗುತ್ತಿದ್ದರೆ ಎಂಬ ವಿಷಯ ಬಹಿರಂಗವಾಗಿದ್ದು. ಈ ಜೋಡಿ ಡಿಸೆಂಬರ್ 9ಕ್ಕೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ.

ಧ್ರುವ ಹಾಗೂ ಪ್ರೇರಣಾ ತುಂಬಾ ಸಿಂಪಲ್ ಆಗಿ ಹಿಂದೂ ಸಂಪ್ರದಾಯದಂತೆ ಡಿಸೆಂಬರ್ ಮೊದಲ ವಾರದಲ್ಲಿ ರಿಂಗ್ ಬದಲಾಯಿಸಿಕೊಳ್ಳುವ ಮೂಲಕ ಎಂಗೇಜ್ಮೆಂಟ್ ಮಾಡಿಕೊಳ್ಳಲಿದ್ದಾರಂತೆ ಮತ್ತು ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಬಳಿಯ ಆಂಜನೇಯ ದೇವಸ್ಥಾನದಲ್ಲಿ ಎಂಗೇಜ್ಮೆಂಟ್ ನಡೆಯಲಿದೆ.

ಆದರೆ ಇದೀಗ ಬಂದಿರುವ ಸುದ್ದಿಯಂತೆ ನಟ ಧ್ರುವ ಸರ್ಜಾ ಬೇರೆ ಮನೆ ಬದಲಿಸಲಿದ್ದಾರಂತೆ.ಹೌದು, ನಟ ಧ್ರುವ ಸರ್ಜಾ ಬನಶಂಕರಿಯ ಕೆ.ಆರ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆದರೆ ಈಗ ವಾಸ್ತು ದೋಷದಿಂದ ಬನಶಂಕರಿಯ ಕೆ.ಆರ್ ರಸ್ತೆಯಿಂದ ಸದಾಶಿವನಗರದಲ್ಲಿರುವ 2 ಲಕ್ಷ ಬಾಡಿಗೆ ವೆಚ್ಚದ ಅದ್ಧೂರಿ ಬಂಗಲೆಗೆ ಹೊಗಳಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಹಾಗೂ ಡಿಸೆಂಬರ್ 9ರ ನಿಶ್ಚಿತಾರ್ಥದ ನಂತರ ಧ್ರುವ ತಮ್ಮ ಮನೆ ಶಿಫ್ಟ್ ಮಾಡಲಿದ್ದಾರೆ ಎಂಬ ವಿಚಾರಗಳು ಕೇಳಿ ಬರುತ್ತಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top