fbpx
ಮನೋರಂಜನೆ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಮದುವೆ – ಹಸೆಮಣೆ ಏರಲು ಸಿದ್ದರಾದ ನಟ ಸುಮಂತ್ ಶೈಲೇಂದ್ರ.

ಸ್ಯಾಂಡಲ್ ವುಡ್ ನಲ್ಲಿ ಈಗ ಎಲ್ಲಿ ಹೋದರು ಸ್ಟಾರ್ ಗಳ ಮದುವೆಯದೆ ಮಾತುಕತೆ. ಏಕೋ ಈ ವರ್ಷ ಎಲ್ಲಾ ಬ್ಯಾಚಲರ್ಸ್ ನಟರು ಮದುವೆಯಾಗಿ ಬಿಡಿಬೇಕಂಬ ನಿರ್ಧಾರ ತೆಗೆದು ಕೊಂಡಂತಿದೆ. ಹೌದು ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ರವರ ಮದುವೆಯ ಬಗ್ಗೆ ಮಾತು ಕೇಳಿ ಬರುತ್ತಿದಂತೆಯೇ , ನಟ ದಿಂಗಂತ್ ಮತ್ತು ನಟಿ ಐಂದ್ರಿತಾ ರೈ ರ ಮದುವೆಯು ಫಿಕ್ಸ್ ಆಯಿತು. ಇದೀಗ ಈ ಪಟ್ಟಿಯಲ್ಲಿ ಮತ್ತೊಬ್ಬ ನಟ ಸೇರ್ಪಡೆಯಾಗುತ್ತಿದುದ್ದು ಆ ನಟ ಬೇರೆ ಯಾರು ಅಲ್ಲ ಅವರೇ ಸುಮಂತ್ ಶೈಲೇಂದ್ರ.

ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದರಾಗಿದ್ದು, ಇದೆ ಡಿಸೆಂಬರ್ 12 ರಂದು ಬೆಂಗಳೂರಿನಲ್ಲಿ ಅವರ ವಿವಾಹ ಜರುಗಲಿದೆ. ಹಾಗೂ ಇದೆ ದಿನ ನಟ ದಿಂಗಂತ್ ಮತ್ತು ನಟಿ ಐಂದ್ರಿತಾ ರೈ ರವರು ಸಹ ಹಸೆಮಣೆ ಏರಲಿದ್ದಾರೆ.

ನಟ ಸುಮಂತ್ ಶೈಲೇಂದ್ರ ರವರ ಆರತಕ್ಷತೆ ಬೆಂಗಳೂರಿನ ಪ್ಯಾಲೇಸ್ ನಲ್ಲಿ ಡಿಸೆಂಬರ್ 11ಕ್ಕೆ ನಡೆಯಲಿದ್ದು, ಮದುವೆ ಬೆಂಗಳೂರಿನಲ್ಲಿ ಮರುದಿನ ಡಿಸೆಂಬರ್ 12 ರಂದು ಜರುಗಲಿದೆ.

ಸುಮಂತ್ ಮದುವೆಯಾಗುತ್ತಿರುವುದು ಯಾರನ್ನೆಂದೂ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲವಾದರೂ ಶ್ರೀನಿವಾಸ ನರಪ್ಪ ಮತ್ತು ಚಂದ್ರಕಲಾ ದಂಪತಿಯ ಮಗಳು ಅನಿತಾ ಅವರನ್ನ ಸುಮಂತ್ ವರಿಸಲಿದ್ದಾರೆ ಎಂಬ ಮಾಹಿತಿಯೊಂದು ಸದ್ಯಕ್ಕೆ ತಿಳಿದು ಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top