fbpx
ಸಮಾಚಾರ

“ಇದು ಸಾಲ ನೀಡೋ ಯೋಜನೆಯೋ ಅಥವಾ ಮೋಸದ ತಂತ್ರವೋ” 59 ನಿಮಿಷದ ಸಾಲ ಯೋಜನೆ ವಿರುದ್ಧ ಗಂಭೀರ ಆರೋಪ.

ಉದ್ಯಮಶೀಲತೆಗೆ ವಿಶೇಷ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿರುವ 59 ನಿಮಿಷದಲ್ಲಿ ಸಾಲ ನೀಡುವ ಯೋಜನೆಯ ವಿರುದ್ಧ ಕಾಂಗ್ರೆಸ್ ಪಕ್ಷ ಗಂಭೀರ ಆರೋಪವನ್ನ ಮಾಡಿದೆ. ಕಿರು, ಸಣ್ಣ ಮತ್ತು ಮದ್ಯಮ ಮಟ್ಟದ (ಎಂಎಸ್‌ಎಂಇ) ಉದ್ಯಮಗಳಿಗೆ ಕೇವಲ 59 ನಿಮಿಷದಲ್ಲಿ 1 ಕೋಟಿ ರೂ. ವರೆಗಿನ ಸಾಲ ನೀಡುವ ಯೋಜನೆಯನ್ನು ಮೋದಿ ಜಾರಿಗೆ ತಂದಿದ್ದರು.. ಈ ಯೋಜನೆ ಕುರಿತು ತಗಾದೆ ತೆಗೆದಿರುವ ಕಾಂಗ್ರೆಸ್ ತಮ್ಮ ಸ್ನೇಹಿತರನ್ನು ಶ್ರೀಮಂತಗೊಳಿಸಲು ಜಾರಿಗೆ ತಂದಿದ್ದಾರೆ ಎಂದು ಆರೋಪಿಸಿದೆ.

59 ನಿಮಿಷದಲ್ಲಿ ಸಾಲ ಯೋಜನೆ ಸಂಪೂರ್ಣ ಮೋಸ. ತಮ್ಮ ಸ್ನೇಹಿತರಿಗೆ ಹಾಗೂ ಖಾಸಗಿ ಮತ್ತು ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡಲು ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಅನುಷ್ಠಾನಗೊಳಿಸಿದ್ದಾರೆಂದು ಕಾಂಗ್ರೆಸ್ ನೇರ ಆರೋಪ ಮಾಡಿದೆ.

ಈ ಯೋಜನೆ ಒಂದು ದೊಡ್ಡ ಹಗರಣವಾಗಿದ್ದು, www.psbloansin59minutes.com ಎಂಬ ವೆಬ್ ಪೋರ್ಟಲ್ ನಲ್ಲಿ ನಾವು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದೇವೆ. ಈಗ ಈ ಯೋಜನೆಯ ಒಪ್ಪಂದವನ್ನೇ ಕೇಂದ್ರ ಸರ್ಕಾರ ರದ್ದುಗೊಳಿಸಿದೆ ಎಂದು ಕಾಂಗ್ರೆಸ್ ಮುಖಂಡ ಗೌರವ್ ವಲ್ಲಭ ಹೇಳಿದ್ದಾರೆ.

ನಾಟ್ ಬ್ಯಾನ್ ವಿಫಲತೆಯಿಂದ ಕಂಗಾಲಾಗಿರುವ ಬಿಜೆಪಿ ಈಗ ಗಿಮಿಕ್ ಮೂಲಕ ಜನರ ಮನ ಸೆಳೆಯಲು ಪ್ರಯತ್ನಿಸಿದೆ. 59 ನಿಮಿಷದ ಸಾಲ ನೀಡುವ ಯೋಜನೆಗೆ ಕೇಂದ್ರ ಸರ್ಕಾರ ಭಾರಿ ಪ್ರಮಾಣದಲ್ಲಿ ಪ್ರಚಾರವನ್ನೂ ನೀಡಿದೆ.. ಸಾರ್ವಜನಿಕ ವಲಯದ ಕ್ಷೇತ್ರಗಳಿಗೆ ಸಹಾಯ ಮಾಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.. ಆದ್ರೆ ಇದೊಂದು ಜನರನ್ನು ಮೂರ್ಖರನ್ನಾಗಿ ಮಾಡುವ ಯೋಜನೆಯಾಗಿದೆ” ಎಂದು ಹೇಳಿದ್ದಾರೆ.

ಮೋಸ ಹೇಗೆ?
“ಈ ಯೋಜನೆಯಲ್ಲಿ ಸಾಲಪಡೆಯಲು www.psbloansin59minutes.com ಎಂಬ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ. ಈ ವೆಬ್ ಪೋರ್ಟಲ್ SIDBI, PSU ಬ್ಯಾಂಕ್ ಗೆ ಸೇರಿದ ವೆಬ್ ಪೋರ್ಟಲ್ ಆಗಿದ್ದು, ಇವು ಅಹಮದಾಬಾದ್ ಮೂಲದ ಕ್ಯಾಪಿಟಾವರ್ಲ್ಡ್ ಪ್ಲಾಟ್ ಫಾರ್ಮ್ ಪ್ರೈವೇಟ್ ಲಿಮಿಟೆಡ್ ಒಡೆತನಕ್ಕೆ ಸೇರಿದ್ದಾಗಿವೆ. ಅರ್ಜಿ ಸಲ್ಲಿಸಲು ಈ ವೆಬ್ ಪೋರ್ಟಲ್ ಸದಸ್ಯತ್ವಕ್ಕೆ 1 ಸಾವಿರ ರೂ. ಪ್ರವೇಶ ಶುಲ್ಕ ಹಾಗೂ 180 ರೂ. GST ಮೊತ್ತವನ್ನು ಪಾವತಿಸಬೇಕಾಗಿದೆ.. ಈ ರೀತಿ 10 ಲಕ್ಷ ಅರ್ಜಿ ಸಲ್ಲಿಸಿದರೆ, ಕಂಪನಿ ಖಾತೆಗೆ 100 ಕೋಟಿ ಆ ಸಂಸ್ಥೆಗಳಿಗೆ ಜಮೆಯಾಗುತ್ತದೆ.. ಈ ಮೂಲಕ ಖಾಸಗಿ ಶ್ರೀಮಂತ ಸ್ನೇಹಿತರನ್ನು ಮೋದಿ ಶ್ರೀಮಂತ ಗೊಳಿಸುತ್ತಿದ್ದಾರೆ. ಇದೊಂದು ದೊಡ್ಡ ಹಗರಣ ಎಂದು” ಎಂದು ಗಂಭೀರ ಆರೋಪ ಮಾಡಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top