fbpx
ಮನೋರಂಜನೆ

ಅಮಿತಾಬ್ ಬಚ್ಚನ್ ಮತ್ತು ಕಿಚ್ಚ ಸುದೀಪ್ ಗಾಗಿ ಸಿನಿಮಾ ಕಥೆ ಬರೆಯುತ್ತಿದ್ದಾರಂತೆ ನಿರ್ದೇಶಕ ರಿಷಬ್ ಶೆಟ್ಟಿ

ಕಿರಿಕ್ ಪಾರ್ಟಿ ಹಾಗು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮ ಖ್ಯಾತಿಯ ನಿರ್ದೇಶಕ ರಿಷಬ್ ಶೆಟ್ಟಿ ಖ್ಯಾತ ನಟ ಕಿಚ್ಚ ಸುದೀಪ್ ರಾವರಿಗಾಗಿ ಒಂದು ಸಿನಿಮಾ ಮಮಾಡಲಿದ್ದಾರೆ ಎಂಬ ಸುದ್ದಿ ಹಾಗಾಗ ಗಾಂಧಿ ನಗರದಲ್ಲಿ ಕೇಳಿ ಬರುತ್ತಿತ್ತು, ಇದೀಗ ಇದರ ಬೆನ್ನಲ್ಲೇ ರಿಷಬ್ ಶೆಟ್ಟಿ ಸುದೀಪ್ ಗಾಗಿ ಎರಡು ಕಥೆ ಬರೆಯುತ್ತಿದ್ದಾರೆ ಎಂಬ ವಿಚಾರವೊಂಧು ಗಾಂಧಿನಗರದಲ್ಲಿ ಎಂದಿನಂತೆ ಗುಲ್ಲೆಬ್ಬಿಸಿದೆ.

ಆದರೆ ರಿಷಬ್ ಶೆಟ್ಟಿ ಬರೆಯ ಹೊರಟಿರುವ ಎರಡು ಕಥೆಗಳಲ್ಲಿ ಒಂದು ಕಥೆ ಹಿಂದಿ ಕಥೆಯಾಗಿದ್ದು ಅಮಿತಾಬ್ ಬಚ್ಚನ್ ಮತ್ತು ಸುದೀಪ್ ಅವರಿಗಾಗಿ ಬರೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಂದಿ ಕಥೆ ಮೊದಲ ಬಾರಿಗೆ ರಿಷಬ್ ಶೆಟ್ಟಿ 10 ನೇ ತರಗತಿಯಲ್ಲಿದ್ದಾಗ ಬರೆದ ಕಥೆಯಾಗಿದ್ದು , ಅದನ್ನು ಮತ್ತೆ ಹೊಸ ಟ್ವಿಸ್ಟ್ ನೊಂದಿಗೆ ತರಲಾಗುತ್ತಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ರಿಷಬ್ ಶೆಟ್ಟಿ ಇನ್ನೂ ಬಿಗ್ ಬಿ ಅವರನ್ನು ಭೇಟಿ ಮಾಡ ಬೇಕಾಗಿದೆ.

ಅಮಿತಾಬ್ ಮತ್ತು ಸುದೀಪ್ ಅವರನ್ನು ಒಟ್ಟಿಗೆ ಸಿನಿಮಾದಲ್ಲಿ ಕರೆ ತರಬೇಕೇಂಬುದು ರಿಷಬ್ ಆಸೆಯಾಗಿದ್ದು, ಹೀಗಾಗಿ ತಮ್ಮ ತಂಡದೊಂದಿಗೆ ಕಥೆಯನ್ನು ತಯಾರು ಮಾಡಿಕೊಳ್ಳುತ್ತಿದ್ದಾರಂತೆ.

ನಿರ್ಮಾಪಕ ರಾಜೇಶ್ ಭಟ್ ರಿಷಬ್ ಅವರ ಕಥೆಯನ್ನು ಇಷ್ಟಪಟ್ಟಿದ್ದಾರೆಂಬ ವಿಚಾರಗಳು ಎಲ್ಲೆಡೆ ಹರಿದಾಡುತ್ತಿದ್ದು. ರಿಷಬ್ ಸದ್ಯ ಕಥೆಯನ್ನು ಹಿಂದಿಯಲ್ಲಿಯೇ ಬರೆಯುತ್ತಿದ್ದಾರಂತೆ ,ಆದರೆ ಕನ್ನಡ ಮತ್ತು ಹಿಂದಿ ಎರಡು ಭಾಷೆಯಲ್ಲಿಯೂ ಕತೆ ಬರೆಯಲು ನಿರ್ಧರಿಸಲಾಗಿದೆಯಂತೆ.

ಈ ಸಿನಿಮಾದ ಕುರಿತು ಎಲ್ಲಿಯೂ ಮಾತನಾಡದ ನಿರ್ದೇಶಕ ರಿಷಬ್ ಶೆಟ್ಟಿ ಕಥೆಗೆ ಒಂದು ರೂಪ ದೊರೆಯುವವರೆಗೂ ಎಲ್ಲಿಯೂ ಮಾಹಿತಿ ನೀಡದಂತೆ ರಿಷಬ್ ನಿರ್ಬಂಧ ಹಾಕಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.
ಅಮಿತಾಬ್ ಮತ್ತು ಸುದೀಪ್ ಈಗಾಗಲೇ ರಾಮ್ ಗೋಪಾಲ್ ವರ್ಮಾ ಅವರ ರನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ, ಮತ್ತೊಮ್ಮೆ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ರಿಷಬ್ ಶೆಟ್ಟಿ ಟೀಮ್ ಯಿಂದ ಈ ಸಿನಿಮಾದ ಬಗ್ಗೆ ಯಾವ ಅಪ್ಡೇಟ್ಸ್ ಬರುತ್ತದೋ ಕಾದುನೋಡಬೇಕಾಗಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top