fbpx
ಮನೋರಂಜನೆ

ಆರೇ ತಿಂಗಳಲ್ಲಿ ಶೇ.50% ಬೆಲೆ ಏರಿಕೆ ಕಂಡ LPG ಸಿಲಿಂಡರ್- ಸಾರ್ವಕಾಲಿಕ ದಾಖಲೆ.

14.2 ಕೆ.ಜಿ ತೂಗುವ ಸಬ್ಸಿಡಿರಹಿತ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್‌ ದರ ಇತಿಹಾಸದಲ್ಲಿಯೇ ಗರಿಷ್ಟ ಮಟ್ಟ ತಲುಪಿದ್ದು ರಾಜ್ಯದ ಅನೇಕ ಕಡೆಗಳಲ್ಲಿ ₹1,000 ಗಡಿ ದಾಟಿದೆ. ಬೀದರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್‌ ಬೆಲೆ ದಾಖಲೆಯ ₹ 1,017 ಇದ್ದರೆ, ರಾಜಧಾನಿಯಲ್ಲಿ ₹ 941 ಇದೆ. ಇನ್ನು ಮಂಗಳೂರಿನಲ್ಲಿ 921 ರುಪಾಯಿ ಇದ್ದು ಹುಬ್ಬಳ್ಳಿಯಲ್ಲಿ 962, ಬೆಳಗಾವಿಯಲ್ಲಿ 956 ರುಪಾಯಿ ಇದೆ.

 

ಸದ್ಯ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಿಲಿಂಡರ್ ಒಂದಕ್ಕೆ ಇರುವ ದರ

1. ಬೀದರ್-1015.5 ರೂ.
2. ಬೆಂಗಳೂರು- 941 ರೂ.
3. ಮಂಗಳೂರು-921 ರೂ.
4. ಹುಬ್ಬಳ್ಳಿ-962 ರೂ.
5. ಬೆಳಗಾವಿ-956 ರೂ.

ಇದೇ ತಿಂಗಳ ಏಪ್ರೀಲ್ ನಲ್ಲಿ ಈ ನಗರಗಳಲ್ಲಿ ಇದ್ದ ಪ್ರತಿ ಸಿಲಿಂಡರ್ ಗ್ಯಾಸ್ ದರದತ್ತ ಗಮನಹರಿಸುವುದಾದರೆ..

1. ಬೀದರ್-721 ರೂ.
2. ಬೆಂಗಳೂರು-654 ರೂ.
3. ಮಂಗಳೂರು-630 ರೂ.
4. ಹುಬ್ಬಳ್ಳಿ-670 ರೂ.
5. ಬೆಳಗಾವಿ-666 ರೂ.

ಅಡುಗೆ ಅನಿಲ ದರ ಹೆಚ್ಚಳ ನಿಜಕ್ಕೂ ಜನಸಾಮಾನ್ಯರ ಜೇಬನ್ನು ಸುಡುತ್ತಿದ್ದು, ನಿರಂತರ ಬೆಲೆ ಏರಿಕೆಯಿಂದ ನಾಗರಿಕರು ಕಂಗಾಲಾಗಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ದರ ಮತ್ತಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.. ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ 600-650ರ ಆಸುಪಾಸಿನಲ್ಲಿದ್ದ LPG ಸಿಲೆಂಡರ್ ಬೆಲೆ ನಿರಂತರ ಏರಿಕೆ ಕಂಡು ಇದೀಗ ಸಾವಿರದ ಗಡಿಯನ್ನೂ ದಾಟಿರುವುದು ಜನರನ್ನು ಚಿಂತೆಗೀಡು ಮಾಡಿದೆ.

ಇನ್ನು ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ ವ್ಯತ್ಯಾಸ ಇರುವುದು ನಿಜ. ಅದರಂತೆ ಸಬ್ಸಿಡಿ ಇದೀಗ ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮಾ ಕೂಡ ಅಷ್ಟೇ ಸತ್ಯ. ಆದರೂ ನಿರಂತರ ಎಲ್‌ಪಿಜಿ ದರ ಏರಿಕೆಯ ಬಿಸಿ ಜನಸಾಮಾನ್ಯರನ್ನು ಕಂಗಾಲಾಗಿ ಮಾಡಿರುವುದು ಸುಳ್ಳಲ್ಲ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top